– ಪ್ರವಾಸಿ ತಾಣಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಳ
ರಾಜ್ಯದಲ್ಲಿ ಮಳೆ (Rain) ಕಡಿಮೆಯಾಗಿದ್ದು, ಈ ಹಿನ್ನೆಲೆ ಹಲವು ಸ್ಥಳಗಳಿಗೆ ಹಾಕಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಪ್ರಮುಖ ಪ್ರವಾಸಿ ಸ್ಥಳಗಳು (Tourist Place) ಹಾಗೂ ದೇಗುಲಗಳಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
Advertisement
ಹೌದು. ಕಡಲತೀರದಲ್ಲಿ ನಿರ್ಬಂಧ ಹಾಕಲಾಗಿತ್ತು. ಇತ್ತ ಜುಲೈನಲ್ಲಿ ಪ್ರವಾಸಕ್ಕೆ ಬರಬೇಡಿ ಅಂತ ಚಿಕ್ಕಮಗಳೂರು ಡಿಸಿ ಮನವಿ ಮಾಡಿಕೊಂಡಿದ್ದರು. ಶಿವಮೊಗ್ಗದ ಕೊಡಚಾದ್ರಿ ಬೆಟ್ಟ ಕೂಡ ಪ್ರವಾಸಿಗರಿಗೆ ಮುಕ್ತವಾಗಿದೆ. ಇನ್ನು ಪ್ರಧಾನಿ (Narendra Modi) ಭೇಟಿ ಬಳಿಕ ಬಂಡೀಪುರದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇಷ್ಟು ಮಾತ್ರವಲ್ಲದೆ ಶಕ್ತಿ ಯೋಜನೆಯಿಂದ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಆಷಾಢ ಮುಗಿದು ಶ್ರಾವಣ ಆರಂಭವಾಗಿದ್ದು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಶಕ್ತಿ ಯೋಜನೆಯಿಂದಾಗಿ ಯಾವ ದೇಗುಲಕ್ಕೆ ಎಷ್ಟು ಆದಾಯ ಬಂದಿದೆ ಎಂಬುದನ್ನು ಡೀಟೈಲ್ ಆಗಿ ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ಚಾರಣ ಸ್ನೇಹಿ ಬೆಟ್ಟ ಕೊಡಚಾದ್ರಿಯ ಪ್ರಮುಖ ಆಕರ್ಷಣೀಯ ಸ್ಥಳಗಳು
Advertisement
Advertisement
ದೇಗುಲಗಳ ಆದಾಯ ಹೆಚ್ಚಾಗಿರುವ ವಿವರ: ಒಂದೇ ತಿಂಗಳಲ್ಲಿ 58 ದೇಗುಲಗಳ ಹುಂಡಿಯಲ್ಲಿ 25 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ ಜೂನ್ 11 ರವರೆಗೆ ಪ್ರತಿಷ್ಠಿತ 58 ದೇಗುಲಗಳಲ್ಲಿ ಇ- ಹುಂಡಿ ಮೂಲಕ 19 ಕೋಟಿ ಆದಾಯ ಸಂಗ್ರಹವಾಗಿತ್ತು. ಆದರೆ ಈ ವರ್ಷ ಜೂನ್ 11 ರಿಂದ ಜುಲೈ 15 ರವರೆಗೆ 24.47 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಆದಾಯದಲ್ಲಿ ಭಾರೀ ಹೆಚ್ಚಳ ಕಂಡಿದೆ. ಇದನ್ನೂ ಓದಿ:
Advertisement
ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಸಂಗ್ರಹವಾಗಿರುವ ಆದಾಯದ ಆಧಾರದಲ್ಲಿ ಅಧಿಕೃತವಾಗಿ ಹೊಂದಿರುವ ಅಂಕಿ-ಅಂಶಗಳ ಪ್ರಕಾರ 2023-23ರಲ್ಲಿ ಅತ್ಯಂತ ಶ್ರೀಮಂತವಾದ ದೇವಸ್ಥಾನವೆಂದರೆ ಅದು ಕುಕ್ಕೆ ಸುಬ್ರಮಣ್ಯ (Kukke Subramanya). ಟಾಪ್ 1 ಸ್ಥಾನವನ್ನು ಕಾಯ್ದುಕೊಂಡಿರುವ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಅತ್ಯಂತ ಹೆಚ್ಚು ವರಮಾನವುಳ್ಳ ದೇವಸ್ಥಾನವಾಗಿದೆ. ಅದರ ಆದಾಯ ಬರೋಬ್ಬರಿ 123 ಕೋಟಿ 64 ಲಕ್ಷ ಆಗಿದೆ.
ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ನಂತರದ ಸ್ಥಾನದಲ್ಲಿರೋದು ಕುಂದಾಪುರದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ (Kolluru Sri Mookambika Temple) . ಈ ದೇವಸ್ಥಾನಕ್ಕೆ ಹರಿದುಬಂದ ಆದಾಯ 59 ಕೋಟಿ 47 ಲಕ್ಷವಾಗಿದ್ದರೆ, ಖರ್ಚಾಗಿರುವುದು 33 ಕೋಟಿ 32 ಲಕ್ಷ. ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹರಿದುಬಂದ ಆದಾಯದ 50% ರಷ್ಟು ಇಲ್ಲಿ ಸಂಗ್ರಹವಾಗಿದೆ. ಇನ್ನು ಟಾಪ್ 3ರ ಸ್ಥಾನದಲ್ಲಿರುವುದು ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ (Chamundeshwari Temple) ಮತ್ತು ಅರಮನೆ ಮುಜರಾಯಿ ದೇವಾಲಯಗಳು. ಇಲ್ಲಿ ಭಕ್ತಾದಿಗಳಿಂದ 52 ಕೋಟಿ 40 ಲಕ್ಷ ಸಂಗ್ರಹವಾಗಿದೆ.
ಟಾಪ್ 4ರ ಸ್ಥಾನದಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರ ದೇವಾಲಯವಿದೆ. ಇಲ್ಲಿ ಸಂಗ್ರಹವಾಗಿದ್ದು 36 ಕೋಟಿ 48 ಲಕ್ಷವಾದ್ರೆ ಬರೋಬ್ಬರಿ 35 ಕೋಟಿ 68 ಲಕ್ಷದಷ್ಟು ಖರ್ಚಾಗಿದೆ. ಉಳಿದಿರೋದು ಕೇವಲ ಅರ್ಧ ಕೋಟಿ ಮಾತ್ರ. ಟಾಪ್ 5ರ ಸ್ಥಾನದಲ್ಲಿ ಮಂಗಳೂರು ತಾಲೂಕು ಕಟೀಲಿನ ಶ್ರೀ ದುರ್ಗಾಪರಮೇಶ್ವರಿ (Kateel Durgaparameshwari) ದೇವಸ್ಥಾನವಿದೆ. 32 ಕೋಟಿ 10 ಲಕ್ಷ ಆದಾಯದ ರೂಪದಲ್ಲಿ ಸಂಗ್ರಹವಾಗಿದ್ದು, 25 ಕೋಟಿ 97 ಲಕ್ಷದಷ್ಟು ಖರ್ಚಾಗಿದೆ.
ಟಾಪ್ 6 ರ ಸ್ಥಾನದಲ್ಲಿ ಮೈಸೂರಿನ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯವಿದೆ. ಈ ದೇಗುಲಕ್ಕೆ 26 ಕೋಟಿ 71 ಲಕ್ಷ ಆದಾಯದ ರೂಪದಲ್ಲಿ ಹರಿದುಬಂದಿದ್ದು, 18 ಕೋಟಿ 74 ಲಕ್ಷದಷ್ಟು ಖರ್ಚಾಗಿದೆ. ಹಾಗೆಯೇ ಟಾಪ್ 7 ರ ಸ್ಥಾನದಲ್ಲಿ ಬೆಳಗಾಂನ ಎಲ್ಲಮ್ಮನ ಗುಡ್ಡ ಸವದತ್ತಿ ತಾಲೂಕಿನ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನವಿದೆ. 22 ಕೋಟಿ 52 ಲಕ್ಷದಷ್ಟು ಆದಾಯ ಹರಿದುಬಂದಿದ್ರೆ ಖರ್ಚಾಗಿರುವುದು 11ಕೋಟಿ 51 ಲಕ್ಷವಂತೆ.
ಟಾಪ್ 8ರ ಸ್ಥಾನದಲ್ಲಿ ಉಡುಪಿ ಜಿಲ್ಲೆ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯವಿದ್ದು, ವಾರ್ಷಿಕ 14 ಕೋಟಿ 55 ಲಕ್ಷ ಗಳಿಕೆಯಾಗಿದೆ. ಈ ಪೈಕಿ 13 ಕೋಟಿ 2 ಲಕ್ಷದಷ್ಟು ಖರ್ಚಾಗಿದೆ. ಟಾಪ್ 9 ರ ಸ್ಥಾನದಲ್ಲಿ ದೊಡ್ಡಬಳ್ಳಾಪುರ ಜಿಲ್ಲೆ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವಿದೆ. ದೇವಸ್ಥಾನಕ್ಕೆ ಹರಿದುಬಂದಿದ್ದು 12 ಕೋಟಿ 25 ಲಕ್ಷವಾದ್ರೆ 7 ಕೋಟಿ 2 ಲಕ್ಷ ಖರ್ಚಾಗಿದೆ. ಟಾಪ್ 10ರ ಸ್ಥಾನದಲ್ಲಿ ಬೆಂಗಳೂರಿನ ಶ್ರೀ ಬನಶಂಕರಿ ದೇವಸ್ಥಾನವಿದೆ. ದೇವಸ್ಥಾನದಲ್ಲಿ ಸಂಗ್ರಹವಾಗಿದ್ದು 10 ಕೋಟಿ 58 ಲಕ್ಷವಾದ್ರೆ, 19 ಕೋಟಿ 41 ಲಕ್ಷದಷ್ಟು ಖರ್ಚಾಗಿದೆ.
ಆದಾಯಕ್ಕಿಂತ ಖರ್ಚಾಗಿರುವುದೇ ಹೆಚ್ಚು. ಇದು ಆಶ್ಚರ್ಯ-ಅನುಮಾನಕ್ಕೆ ಕಾರಣವಾಗಿದ್ರೂ ಆಶ್ಚರ್ಯವಿಲ್ಲ. ಅಂದಹಾಗೆ ಈ 10 ದೇವಸ್ಥಾನಗಳಿಂದಲೇ 390 ಕೋಟಿ 75 ಲಕ್ಷದಷ್ಟು ಆದಾಯ ಹರಿದುಬಂದಿರುವುದು ವಿಶೇಷ. 2023-24 ರಲ್ಲಿ ಆದಾಯದ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆಗಳಿವೆ. ಇಷ್ಟೊಂದು ಆದಾಯದಲ್ಲಿ 281 ಕೋಟಿ 27 ಲಕ್ಷ ಖರ್ಚಾಗಿದೆ ಎಂದು ಮುಜರಾಯಿ ಇಲಾಖೆ ವಿವರಣೆ ಕೊಟ್ಟಿದೆ. ಇದೆಲ್ಲವೂ ಅಲ್ಲಿನ ದೇವಸ್ಥಾನಗಳು ಆಂತರಿಕವಾಗಿ ಮಾಡಿಕೊಂಡ ಲೆಕ್ಕಪರಿಶೋಧನೆಯಿಂದ ಹೊರಬಂದ ಮಾಹಿತಿಗಳಾಗಿವೆ. ಒಟ್ಟಿನಲ್ಲಿ ಮಳೆ, ಶ್ರಾವಣ, ಮಹಿಳೆಯರಿಗೆ ಫ್ರೀ ಬಸ್ ಟಿಕೆಟ್ ಪರಿಣಾಮ ರಾಜ್ಯದ್ಯಾಂತ ಇರುವ ಪ್ರವಾಸಿತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.
Web Stories