ಬೆಂಗಳೂರು: ಮಹದೇವಪುರದ ಟೆಕ್ ಹಬ್‍ನಲ್ಲಿ ಡೆಂಗ್ಯೂ (Dengue) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ (Bengaluru) ವರದಿಯಾಗುತ್ತಿರುವ ಪ್ರತಿ 4 ಡೆಂಗ್ಯೂ ಪ್ರಕರಣಗಳಲ್ಲಿ 1 ಪ್ರಕರಣ ಮಹದೇವಪುರ ವಲಯದ್ದಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ (BBMP) ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ ಮಂಗಳವಾರದವರೆಗೆ 4,194 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮಹದೇವಪುರ ವಲಯದಲ್ಲಿ 1,126 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಹದೇವಪುರ ಮೊದಲನೇ ಸ್ಥಾನದಲ್ಲಿದೆ. ಇನ್ನೂ 970 ಕೇಸ್ ವರದಿಯಾಗುವ ಮೂಲಕ ಪೂರ್ವ ವಲಯ 2ನೇ ಸ್ಥಾನದಲ್ಲಿದೆ.
Advertisement
ಬೊಮ್ಮನಹಳ್ಳಿ ವಲಯದಲ್ಲಿ ಕಳೆದ 9 ದಿನಗಳಲ್ಲಿ ಒಟ್ಟು 256 ಪ್ರಕರಣ ವರದಿಯಾಗಿದೆ. ವರ್ತೂರು, ದೊಡ್ಡನೆಕ್ಕುಂದಿ, ಮಾರತ್ತಹಳ್ಳಿ, ಬೆಳ್ಳಂದೂರು, ಕೆಆರ್‍ಪುರ, ಜೋಗುಪಾಳ್ಯ ಹಾಗೂ ಈಜಿಪುರ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.
Advertisement
Advertisement
ರಾಜ್ಯದಲ್ಲಿ ಬುಧವಾರ 293 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 118 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,840ಕ್ಕೆ ಏರಿಕೆ ಕಂಡಿದೆ. ಇದುವರೆಗೂ ಡೆಂಗ್ಯೂಗೆ 07 ಜನರು ಬಲಿಯಾಗಿದ್ದಾರೆ.
Advertisement
ಬಿಬಿಎಂಪಿ ವ್ಯಾಪ್ತಿಯ ವಲಯವಾರು ಪ್ರಕರಣ
ಮಹಾದೇವಪುರ – 1126
ದಕ್ಷಿಣ ವಲಯ – 522
ಪೂರ್ವ ವಲಯ – 970
ಪಶ್ಚಿಮ ವಲಯ – 388
ಯಲಹಂಕ – 258
ಆರ್‍ಆರ್ ನಗರ – 311
ದಾಸರಹಳ್ಳಿ – 43
ಬೊಮ್ಮನಹಳ್ಳಿ – 576
ಒಟ್ಟು – 4194