– ಜುಲೈ 31ರವರೆಗೆ ಇದ್ದ ಗಡುವು ವಿಸ್ತರಣೆ
ನವದೆಹಲಿ: 2025-26ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (Income Tax Returns) ಸಲ್ಲಿಸುವ ದಿನಾಂಕವನ್ನು ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸಲಾಗಿದೆ.
ಜುಲೈ 31ಕ್ಕೆ ಇದ್ದ ಅವಧಿಯನ್ನು ಸೆಪ್ಟೆಂಬರ್ 15ಕ್ಕೆ ವಿಸ್ತರಿಸಲಾಗಿದೆ. ಅಧಿಸೂಚಿತ ITR ಫಾರ್ಮ್‌ಗಳಲ್ಲಿನ ವ್ಯಾಪಕವಾದ ರಚನಾತ್ಮಕ ಮತ್ತು ವಿಷಯ ಪರಿಷ್ಕರಣೆಗಳೇ ಈ ವಿಸ್ತರಣೆಗೆ ಕಾರಣವೆಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ತಿಳಿಸಿದೆ. ಈ ಪರಿಷ್ಕರಣೆಗಳು ಅನುಸರಣೆ ಸರಳಗೊಳಿಸುವ, ಪಾರದರ್ಶಕತೆ ಹೆಚ್ಚಿಸುವ ಮತ್ತು ವರದಿ ಮಾಡುವ ನಿಖರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪಾಕ್, ಚೀನಾಗೆ ಟಕ್ಕರ್ ಕೊಡಲು ಹೊಸ ಫೈಟರ್ ಜೆಟ್‌ಗೆ ಭಾರತ ಅನುಮೋದನೆ
Kind Attention Taxpayers!
CBDT has decided to extend the due date of filing of ITRs, which are due for filing by 31st July 2025, to 15th September 2025
This extension will provide more time due to significant revisions in ITR forms, system development needs, and TDS credit… pic.twitter.com/MggvjvEiOP
— Income Tax India (@IncomeTaxIndia) May 27, 2025
ಇ-ಫೈಲಿಂಗ್ ಉಪಯುಕ್ತತೆಗಳ ವ್ಯವಸ್ಥೆಯ ಅಭಿವೃದ್ಧಿ, ಏಕೀಕರಣ ಮತ್ತು ಪರೀಕ್ಷೆಗೆ ಹೆಚ್ಚುವರಿ ಸಮಯ ಬೇಕಾಗುತ್ತದೆ ಎಂದು ಇಲಾಖೆ ಹೇಳಿದೆ. ಮೇ 31 ರೊಳಗೆ ಬಾಕಿ ಇರುವ ಟಿಡಿಎಸ್ ಕ್ರೆಡಿಟ್‌ಗಳು ಜೂನ್ ಆರಂಭದಲ್ಲಿ ಪ್ರತಿಫಲಿಸಲು ಪ್ರಾರಂಭಿಸುವ ನಿರೀಕ್ಷೆಯಿದೆ.
ತೆರಿಗೆದಾರರಿಗೆ ಸುಗಮ ಮತ್ತು ಅನುಕೂಲಕರ ಫೈಲಿಂಗ್ ಸಾಧ್ಯವಾಗಲೆಂದು ಕ್ರಮವಹಿಸಲಾಗಿದೆ ಎಂದು CBDT ಹೇಳಿದೆ. ವಿಸ್ತರಣೆಯು ಪಾಲುದಾರರಿಗೆ ನವೀಕರಿಸಿದ ಫಾರ್ಮ್‌ಗಳು ಮತ್ತು ಉಪಯುಕ್ತತೆಗಳನ್ನು ಅನುಸರಿಸಲು ಸಾಕಷ್ಟು ಸಮಯಾವಕಾಶ ನೀಡುತ್ತದೆ.
ಔಪಚಾರಿಕ ಅಧಿಸೂಚನೆಯನ್ನು ಪ್ರತ್ಯೇಕವಾಗಿ ನೀಡಲಾಗುವುದು. ಈ ವಿಸ್ತರಣೆಯು ರಿಟರ್ನ್ ಫೈಲಿಂಗ್ ಪ್ರಕ್ರಿಯೆಯ ನಿಖರತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಜ್ಯೋತಿ ಮಲ್ಹೋತ್ರಾ ಮೊಬೈಲ್, ಲ್ಯಾಪ್‌ಟಾಪ್‌ನಿಂದ 12,000 ಜಿಬಿ ಡಾಟಾ ರಿಟ್ರೀವ್ – ಸ್ಫೋಟಕ ರಹಸ್ಯಗಳು ಬಯಲಿಗೆ!