ಬೆಂಗಳೂರು: ಆದಾಯ ತೆರಿಗೆ ಇಲಾಖೆ(ಐಟಿ) ದಾಳಿ ಬೆನ್ನಲ್ಲೇ ಬಿಎಂಟಿಸಿ ಉಮೇಶ್ ಗೆ ಸಿಎಂ ಕಚೇರಿಯಿಂದ ಗೇಟ್‍ಪಾಸ್ ನೀಡಲಾಗಿದೆ.
ಓಓಡಿ ಮೇಲೆ ಸಿಎಂ ಕಚೇರಿಯಲ್ಲಿ ಉಮೇಶ್ ಕೆಲಸ ಮಾಡುತ್ತಿದ್ದ. ಇದೀಗ ಉಮೇಶ್ ಮನೆ ಮೇಲೆ ಐಟಿಯಾದ ದಾಳಿ ಹಿನ್ನೆಲೆಯಲ್ಲಿ ಸಿಎಂ ಸೂಚನೆ ಮೇರೆಗೆ ಓಓಡಿ ಆದೇಶವನ್ನ ವಾಪಸ್ ಪಡೆದಿದ್ದಾರೆ.
Advertisement
Advertisement
ಐಟಿ ರೇಡ್ ಆಗಿರುವ ಬಿಎಂಟಿಸಿ ಸಿಬ್ಬಂದಿ ಉಮೇಶ್ ಡಿಪೋ ನಂಬರ್ 11ರಲ್ಲಿ ಕಂಡಕ್ಟರ್ ಕಂ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಉಮೇಶ್ ಬಿಎಂಟಿಸಿಯಿಂದ ಪಡೆಯುತ್ತಿದ್ದ ತಿಂಗಳ ಸಂಬಳ 32 ಸಾವಿರ ರೂಪಾಯಿ. ಕೈಗೆ ಸಿಗುತ್ತಿದ್ದಿದ್ದು 28 ಸಾವಿರ ರೂಪಾಯಿ. ಇದನ್ನೂ ಓದಿ: ಬಿಎಂಟಿಸಿ ಟು ಪಿಎ ಜರ್ನಿ – ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದವ ಕೋಟಿ ಕುಬೇರನಾದ ಕಥೆ ಓದಿ
Advertisement
Advertisement
2007-08ರಲ್ಲಿ ಬಿಎಂಟಿಸಿ ಉದ್ಯೋಗಿಯಾದ ಉಮೇಶ್, ಟ್ರೈನಿಯಾಗಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಒಂದೇ ವರ್ಷಕ್ಕೆ ಉದ್ಯೋಗ ಬೇಡ ಎನ್ನಿಸಿತ್ತು. ಇದೇ ವೇಳೆ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆಗಿದ್ದರು. ಈ ವೇಳೆ ಉಮೇಶ್ ಎರವಲು ಸೇವೆ ಅರ್ಜಿ ಸಲ್ಲಿಸಿದ್ದ. 2008ರಲ್ಲಿ ಎರವಲು ಸೇವೆಯಡಿ ವಿಧಾನಸೌಧದತ್ತ ಪ್ರಯಾಣ ಬೆಳೆಸಿದ್ದ. ಎರವಲು ಸೇವೆಗೆ ನಿಯೋಜನೆಯಾಗುವ ಮುನ್ನ ಉಮೇಶ್ ತಿಂಗಳಿಗೆ 3,500ರೂ. ಸಂಬಳ ಪಡೆಯುತ್ತಿದ್ದ. ಒಂದೇ ವರ್ಷಕ್ಕೆ ಟ್ರೈನಿಯಿಂದ ಪ್ರೊಬೆಷನರಿಯಾಗಿ ಬಡ್ತಿ ಪಡೆದು ತಿಂಗಳಿಗೆ 18 ಸಾವಿರ ರೂ.ವೇತನ ಪಡೆಯುತ್ತಿದ್ದ.
ಇದೀಗ ಉಮೇಶ್ ವೇತನ ತಿಂಗಳಿಗೆ 30ರಿಂದ 32 ಸಾವಿರ ರೂ. ಇದೆ. ಎರವಲು ಸೇವೆಗೆ ನಿಯೋಜನೆಯಾದರೆ ಎರಡು ವರ್ಷದ ಬಳಿಕ ಮಾತೃ ಇಲಾಖೆಯಲ್ಲಿ ಕೆಲಸ ಮಾಡಿ, ಡೆಪ್ಟೇಷನ್ ಪಡೆಯಬಹುದು. ಆದರೆ ಉಮೇಶ್ ಮಾತ್ರ 2008ರಿಂದ ಎರವಲು ಸೇವೆಯಲ್ಲಿಯೇ ಮುಂದುವರಿಯುತ್ತಿರುವುದು ವಿಶೇಷ. ಸದ್ಯ ಎರಡನೇ ದಿನವೂ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಎರಡು ರಾಜ್ಯದ ಗುತ್ತಿಗೆದಾರರ ಮಧ್ಯೆ ಗಲಾಟೆ – ಬಿಎಸ್‌ವೈ ಪಿಎ ಮೇಲೆ ಐಟಿ ದಾಳಿ