ಬೆಂಗಳೂರು: ಅಂಬಿಕಾಪತಿ (Ambikapathy) ಮತ್ತು ಸಂತೋಷ್ ಕೃಷ್ಣಪ್ಪ (Santosh Krishnnappa) ಇಬ್ಬರೂ ಈ ರಾಜ್ಯದ ನಂಬರ್ 1 ಮತ್ತು ನಂಬರ್ 2 ಅವರ ಬೇನಾಮಿಗಳು ಎಂದು ಮಾಜಿ ಸಚಿವ ಸಿಟಿ ರವಿ (CT Ravi) ಹೇಳಿದ್ದಾರೆ.
ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸದ್ಯಕ್ಕೆ ಇಬ್ಬರು ಬೇನಾಮಿಗಳು ಬಯಲಾಗಿದ್ದಾರೆ. ಸಿಎಂ, ಡಿಸಿಎಂ ಇಬ್ಬರೂ ತಮ್ಮ ಅಕ್ರಮ ಚಟುವಟಿಕೆಗಳಿಗಾಗಿ ಎಲ್ಲ ಜಿಲ್ಲೆಗಳಲ್ಲೂ ಇನ್ನೂ ಹಲವು ಬೇನಾಮಿಗಳನ್ನು ಇಟ್ಟುಕೊಂಡಿದ್ದಾರೆ. ಸಿಬಿಐ (CBI) ತನಿಖೆಗೆ ವಹಿಸಿದರೆ ಎಲ್ಲ ಸತ್ಯ ಹೊರಗೆ ಬರಲಿದೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ವಿರುದ್ಧ ‘ರಾಮಾಯಣ’ ನಟನನ್ನು ಕಣಕ್ಕಿಳಿಸಿದ ಕಾಂಗ್ರೆಸ್
ಪಂಚ ರಾಜ್ಯಗಳ ಚುನಾವಣೆಗೆ ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ. ಪಂಚ ರಾಜ್ಯಗಳ ಚುನಾವಣೆಗೆ ಅವರ ಹೈಕಮಾಂಡ್ ನಂಬರ್ ಒನ್‌ಗೆ 1000 ಕೋಟಿ ರೂ., ನಂಬರ್ ಟೂಗೆ 2000 ಕೋಟಿ ರೂ. ಕೊಡಿ ಎಂದು ಕೇಳಿದ್ದಾರೆ. ಸಿಎಂ ಹುದ್ದೆಗೆ ಟವೆಲ್ ಹಾಕಿ ಕುಳಿತಿರುವವರು ಎರಡು ಸಾವಿರ ಕೋಟಿ ರೂ. ಸಂಗ್ರಹ ಮಾಡುವುದಾಗಿ ಹೇಳಿದ್ದಾರೆ ಎಂದರು.
ಈಗ ಸಿಎಂ ಆಗಿರುವವರು ಅದರಲ್ಲಿ ಅರ್ಧ ಕೊಡುವುದಾಗಿ ಹೇಳಿದ್ದಾರಂತೆ. ಈಗ ಪತ್ತೆ ಆಗಿರುವ ಹಣದಲ್ಲಿ ಇದರಲ್ಲಿ ನಂಬರ್ 1 ವ್ಯಕ್ತಿಯದ್ದು ಎಷ್ಟು? ನಂಬರ್ 2 ವ್ಯಕ್ತಿಯದ್ದು ಎಷ್ಟಿದೆ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ. ಯಾರಿಂದ ಎಷ್ಟೆಷ್ಟು ಹೋಗುತ್ತಿದೆ ಎನ್ನುವುದು ಸಿಬಿಐ ತನಿಖೆಗೆ ಕೊಟ್ಟರೆ ಸತ್ಯ ಗೊತ್ತಾಗುತ್ತದೆ ಸಿಟಿ ರವಿ ಹೇಳಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]