– ಸೆಕ್ಯೂರಿಟಿ ಗಾರ್ಡ್ ಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಐಟಿ ಅಧಿಕಾರಿಗಳು
ಉಡುಪಿ: ಭ್ರಷ್ಟರು ರಂಗೋಲಿ ಕೆಳಗೆ ತೂರಿದರೆ ಐಟಿ ಅಧಿಕಾರಿಗಳು ಟೈಲ್ಸ್ ಕೆಳಗೆ ತೂರಿ ಶಾಕ್ ಕೊಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮಂಗನಕಾಯಿಲೆ ಜಾಗೃತಿ ಕಾರ್ಯಕ್ರಮ ಎಂದು ಕಾರಿಗೆ ಬೋರ್ಡ್ ಹಾಕಿಕೊಂಡು ಐಟಿ ಅಧಿಕಾರಿಗಳು ರಾಜಕಾರಣಿ, ಉದ್ಯಮಿ ಮನೆ ಮೇಲೆ ದಾಳಿ ಮಾಡಿದ್ದಾರೆ.
Advertisement
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮೇಲೆ ಬುಧವಾರ ಐಟಿ ದಾಳಿ ನಡೆದಿದ್ದು, 2ನೇ ದಿನವೂ ಅಧಿಕಾರಿಗಳ ತಪಾಸಣೆ ಮುಂದುವರಿದಿದೆ. ಉಡುಪಿಯ ಮಣಿಪಾಲದಲ್ಲಿರುವ ಮನೆ, ಉಡುಪಿಯ ಕಚೇರಿ, ಮುನಿಯಾಲು ಗ್ರಾಮದ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಬೀಡು ಬಿಟ್ಟು ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ. ಉಡುಪಿ, ಶಿವಮೊಗ್ಗದಲ್ಲಿ ಪಸರಿಸಿರುವ ಮಂಗನ ಕಾಯಿಲೆಯನ್ನು ಐಟಿ ಅಧಿಕಾರಿಗಳು ದಾಳಿಯ ದಾಳವನ್ನಾಗಿ ಉಪಯೋಗಿಸಿದ್ದಾರೆ.
Advertisement
Advertisement
ಅಧಿಕಾರಿಗಳು ದಾಳಿಗೆ ಉಪಯೋಗಿಸಿದ ಕಾರಿನ ಮುಂಭಾಗ ಮಂಗನ ಕಾಯಿಲೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಅಂತ ಬೋರ್ಡ್ ಹಾಕಿಕೊಂಡಿದ್ದರು. ಸಾಯಿರಾಧಾ ಲೇಔಟ್ ಒಳಗಿರುವ ಮುನಿಯಾಲು ಉದಯಕುಮಾರ್ ಮನೆಗೆ ಟೈಟ್ ಸೆಕ್ಯೂರಿಟಿ ಇರುತ್ತದೆ. ಮಂಗನ ಕಾಯಿಲೆ ಬೋರ್ಡ್ ನೋಡಿದ ಸೆಕ್ಯೂರಿಟಿ ಗಾರ್ಡ್ ಗಳು ಐಟಿ ಅಧಿಕಾರಿಗಳಿದ್ದ ವಾಹನ ಒಳಗೆ ಬಿಟ್ಟಿದ್ದಾರೆ.
Advertisement
ಉದಯಕುಮಾರ್ ಮನೆಯ ಮನೆಯ ಬೆಲ್ ಬಾರಿಸಿದಾಗಲೇ ಐಟಿ ದಾಳಿಯ ಬಗ್ಗೆ ಮನವರಿಕೆಯಾಗಿದೆ. ಮಂಗನ ಕಾಯಿಲೆ ಹೆಸರಿನಲ್ಲಿ ಲೇಔಟ್‍ನ ಟೈಟ್ ಸೆಕ್ಯೂರಿಟಿ ಗಾರ್ಡ್ ಗಳಿಗೆ ಚಳ್ಳೆಹಣ್ಣು ತಿನ್ನಿಸಿ, ಕೋಟ್ಯಾಧೀಶ ಉದ್ಯಮಿಗೆ ಗಾಳ ಹಾಕಿದ್ದಾರೆ. ಇದೊಂತರ ಡಿಫರೆಂಟ್ ರೈಡ್ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
https://www.youtube.com/watch?v=GMaRXTGIRQ4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv