ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಐಟಿಯಿಂದ ನೋಟೀಸ್ ನೀಡಲಾಗಿದೆ.
ಈ ಕುರಿತು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ಜಮೀನನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ. ಅದನ್ನು ನೋಡಬೇಕು ಅದನ್ನು ನೋಡದೆ ನಮ್ಮ ತಾಯಿಗೆ ನೋಟೀಸ್ ಕೊಟ್ಟಿದ್ದಾರೆ. ಆರ್‍ಟಿಓದಲ್ಲಿ ನೂರು ಕೋಟಿ ಇನ್ನೂರು ಕೋಟಿ ಲೂಟಿ ಹೊಡೆದಿದ್ದು, ಅವರಿಗೇಕೆ ನೀವು ನೋಟೀಸ್ ನೀಡಲ್ಲ. ಒಂದು ಏಕರೆಯಲ್ಲಿ ಎಷ್ಟು ಬೆಳೆ ಬೆಳೆಯುತ್ತೇವೆ ಬಂದು ನೋಡಲಿ ಎಂದು ಸಿಡಿದರು. ಇದನ್ನೂ ಓದಿ: 32 ವರ್ಷಗಳ ನಂತ್ರ ಕಾಶ್ಮೀರಿ ಪಂಡಿತರಿಗೆ ಸಿಕ್ಕಿದ್ದು ಸಿನಿಮಾ, ನ್ಯಾಯವಲ್ಲ: ಕೇಜ್ರಿವಾಲ್
Advertisement
Advertisement
ನಾನು ಡಿಸಿಗೆ ಹೇಳಿದ್ದೇನೆ. ನಾನು ಸರ್ವೆ ಮಾಡಿ ಬಿಲ್ ಕೊಟ್ಟರೆ ಸರಿಯಾಗಲ್ಲ. ಆಪ್‍ನಲ್ಲಿ ಸರ್ವೆ ಮಾಡಿಸಿ ನಮ್ಮ ತಂದೆ, ತಾಯಿ ಏನಾದರು ಕೋಟ್ಯಂತರ ರೂ ಆಸ್ತಿ ಮಾಡಿಲ್ಲ. ಅವರು ನನ್ನ ತಾಯಿಗೆ ನೋಟಿಸ್ ಕೊಟ್ಟಿದ್ದಾರೆ. ಉತ್ತರ ಕೊಡುತ್ತೇವೆ ನಮಗೂ ಕಾಲ ಬರುತ್ತೆ. ಇದೇ ಏನು ಶಾಶ್ವತವಾಗಿ ಇರಲ್ಲ. ಏನಾದರೂ ಕದ್ದು ವ್ಯವಸಾಯ ಮಾಡುತ್ತಿದ್ದೇವಾ ಅಂತ ಡ್ರೋಣ್ ಸರ್ವೆ ಮಾಡಲಿ. ದೊಡ್ಡಪುರ, ಪಡುವಲ ಹಿಪ್ಪೆ ಹತ್ತಿರ ನಮ್ಮ ಗದ್ದೆ ಇದೆ ಎಂದರು. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಹಿಜಬ್‍ಗಾಗಿ ಪರೀಕ್ಷೆ ಕೈ ಬಿಟ್ಟ ವಿದ್ಯಾರ್ಥಿನಿ
Advertisement
Advertisement
ನಾನೇನು ಹೊಸದಾಗಿ ಆಸ್ತಿ ಮಾಡಲು ಹೋಗಿದ್ದೇನಾ? ನಾನೇನಾದರು ಸೈಟ್ ಬ್ಯುಸಿನೆಸ್ ಮಾಡಲು ಹೋಗಿದ್ದೇನ. ನಗರಸಭೆಯಿಂದ ಸೈಟ್ ಮಾಡಲು ಹೋಗಿದ್ದೇಮಾ? ಒಂದು ಪಕ್ಷವನ್ನು ಗುರಿ ಇಟ್ಟುಕೊಂಡು ಈ ರೀತಿಯೆಲ್ಲಾ ಮಾಡಲು ಹೋಗಬೇಡಿ. ಕಾನೂನು ರೀತಿ ರೀವಾಜಗಳು ಏನಿದೆ ಆ ರೀತಿ ನೋಟಿಸ್ ಕೊಡಿ. ನನಗೂ ಕೊಡಿ ಕೆಲವರು ಆರ್‍ಟಿಓ ನಲ್ಲಿ ಲೂಟಿ ಮಾಡಿ ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಎಲೆಕ್ಷನ್‍ಗೆ ನಿಲ್ಲುತ್ತಿದ್ದಾರೆ. ಅಂತಹವರಿಗೆ ನೋಟಿಸ್ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.