ಬೆಂಗಳೂರು: ಬೇನಾಮಿ ಆಸ್ತಿ ಪ್ರಕರಣ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಅವರ ತಾಯಿಗೆ ಐಟಿ ಬೇನಾಮಿ ಸೆಲ್ ನಿಂದ ಮತ್ತೆ ನೋಟಿಸ್ ನೀಡಲಾಗಿದ್ದು, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಕಳೆದ ನಾಲ್ಕು ದಿನದ ಹಿಂದೆಯೇ ಡಿಕೆಶಿ ಅವರ ತಾಯಿಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದ್ರೆ ಇಂದು ಮತ್ತೆ ಡಿಕೆಶಿ ಹಾಗೂ ಅವರ ತಾಯಿ ಗೌರಮ್ಮ ಇಬ್ಬರೂ ನಾಳೆ ವಿಚಾರಣೆಗೆ ಹಾಜರಾಬೇಕು ಎಂದು ಸೂಚಿಸಿ ನೋಟಿಸ್ ಜಾರಿಮಾಡಲಾಗಿದೆ.
Advertisement
Advertisement
ಪ್ರಾಪರ್ಟಿ ಅಟ್ಯಾಚ್‍ಮೆಂಟ್ ನೋಟಿಸ್ ನೀಡಿ ಒಂದು ತಿಂಗಳಾಗಿದ್ದರೂ ಪದೇ ಪದೇ ಡಿಕೆಶಿ ಅವರು ಉತ್ತರ ನೀಡಲು ಕಾಲಾವಕಾಶ ಕೇಳಿತ್ತಿದ್ದಾರೆ. ಇದರಿಂದ ಐಟಿ ಬೇನಾಮಿ ಸೆಲ್ ಅಧಿಕಾರಿಗಳು ಗರಂ ಆಗಿದ್ದಾರೆ.
Advertisement
ಬೇನಾಮಿ ಆಸ್ತಿ ಬಗ್ಗೆ ತನಿಖೆ ನಡೆಸುತ್ತಿರುವ ಐಟಿ 15 ದಿನಗಳ ಒಳಗಡೆ ಉತ್ತರ ನೀಡುವಂತೆ ನಿನ್ನೆ ಡಿಕೆಶಿಗೆ ಸೂಚಿಸಿತ್ತು. ಒಂದು ವೇಳೆ ಈ ನೋಟಿಸಿಗೆ ಸರಿಯಾದ ಉತ್ತರ ನೀಡದೇ ಇದ್ದಲ್ಲಿ ಡಿಕೆ ಶಿವಕುಮಾರ್ ಆಸ್ತಿ ಜಪ್ತಿಯಾಗುವ ಸಾಧ್ಯತೆಯಿದೆ.
Advertisement
ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಐಟಿ:
2008 ರಲ್ಲಿ 75 ಕೋಟಿ ರೂ. 2013 ರಲ್ಲಿ 251 ಕೋಟಿ ರೂ. ಆದಾಯವನ್ನು ಡಿಕೆ ಶಿವಕುಮಾರ್ ಘೋಷಿಸಿದ್ದರೆ, 2018ರ ವಿಧಾನಸಭಾ ಚುನಾವಣೆ ವೇಳೆ 840 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಸಚಿವರ ಆದಾಯ ಪ್ರತಿ 5 ವರ್ಷಗಳಿಗೊಮ್ಮೆ ಶೇ.230 ರಷ್ಟು ಹೆಚ್ಚಳ ಕಂಡಿದೆ. ಶಿವಕುಮಾರ್ ಅವರ ಸಂಪಾದನೆಗೂ ಅವರಲ್ಲಿರುವ ಆದಾಯಕ್ಕೆ ತಾಳೆ ಆಗುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಚುನಾವಣಾ ಆಯೋಗಕ್ಕೆ ಈ ಹಿಂದೆ ಐಟಿ ಪತ್ರ ಬರೆದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv