ನವದೆಹಲಿ: 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಿನ ನಗದು ವ್ಯವಹಾರವನ್ನು ಇನ್ನೂ ನೀವು ಮಾಡುತ್ತಿದ್ದರೆ ಅಷ್ಟೇ ಅಪ್ರಮಾಣದ ದಂಡವನ್ನು ಕಟ್ಟಲು ರೆಡಿಯಾಗಿ.
ಹೌದು. 2 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ವ್ಯವಹಾರ ನಡೆಸುವ ಮಂದಿಗೆ ಅಷ್ಟೇ ಪ್ರಮಾಣದ ದಂಡವನ್ನು ವಿಧಿಸಲಾಗುವುದು ಎಂದು ಶುಕ್ರವಾರ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
Advertisement
ಕೇಂದ್ರ ಸರ್ಕಾರ ಈ ವರ್ಷದ ಏಪ್ರಿಲ್ 1ರ ಬಳಿಕ 2 ಲಕ್ಷ ರೂ. ನಗದು ವ್ಯವಹಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಷೇಧ ಇದ್ದರೂ 2 ಲಕ್ಷ ರೂ. ನಗದು ವ್ಯವಹಾರ ನಡೆಸಿದರೆ ಅಂತವರ ಮೇಲೆ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.
Advertisement
ಅಕ್ರಮವಾಗಿ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರ ನಡೆಸಿದವರ ಮಾಹಿತಿಯನ್ನು [email protected] ಇಮೇಲ್ ಮಾಡುವಂತೆ ತೆರಿಗೆ ಇಲಾಖೆ ಜನರಲ್ಲಿ ಕೇಳಿಕೊಂಡಿದೆ.
Advertisement
ಸಚಿವ ಅರುಣ್ ಜೇಟ್ಲಿ ತಮ್ಮ ಹಣಕಾಸು ಬಜೆಟ್ ನಲ್ಲಿ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರವನ್ನು ನಿಷೇಧಿಸುವ ಪ್ರಸ್ತಾಪವನ್ನು ಮಂಡಿಸಿದ್ದರು. ಈ ಬಜೆಟ್‍ಗೆ ಮಾರ್ಚ್ ತಿಂಗಳಿನಲ್ಲಿ ಸಂಸತ್ತು ಅನುಮೋದನೆ ನೀಡಿತ್ತು.
Advertisement
ನವೆಂಬರ್ 8ರಂದು 1 ಸಾವಿರ ರೂ. ಮತ್ತು 500 ರೂ.ಗಳನ್ನು ನಿಷೇಧಗೊಂಡ ಬಳಿಕ ಸರ್ಕಾರ ಕಪ್ಪು ಹಣವನ್ನು ತಡೆಗಟ್ಟಲು, ಜನರಿಗೆ ಕಪ್ಪುಕುಳಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲು [email protected] ಇಮೇಲ್ ತೆರೆಯಲಾಗಿದೆ.