ಬೆಂಗಳೂರು: ಬೌರಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿ ಮುಖಂಡನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಬಿಜೆಪಿ ವರಪ್ರಸಾದ್ ರೆಡ್ಡಿ ಅವರ ಕೋರಮಂಗಲದಲ್ಲಿರುವ ಮನೆಯ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶಾಂತಿನಗರ ಹೌಸಿಂಗ್ ಕಾರ್ಪೋರೇಷನ್ ಹಗರಣದಲ್ಲಿ ಭಾಗಿದ ಹಿನ್ನೆಲೆಯಲ್ಲಿ ಐಟಿಯವರು ದಾಳಿ ಮಾಡಿದ್ದಾರೆ. ಒಟ್ಟು ಎಂಟು ಐಟಿ ಅಧಿಕಾರಿಗಳು ರೆಡ್ಡಿ ಅವರ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
Advertisement
ಬೌರಿಂಗ್ ಇನ್ಸ್ಟಿಟ್ಯೂಟ್ ನ ಲಾಕರ್ ಗಳಲ್ಲಿ ಕೋಟಿ ಕೋಟಿ ಆಸ್ತಿ ಪತ್ರ ಸಿಕ್ಕಿತ್ತು. ಆ ಆಸ್ತಿ ಪತ್ರಗಳು ಬಿಜೆಪಿಯ ನಾಯಕರಿಗೆ ಸೇರಿದವು ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಈಗ ಅಲ್ಲಿ ಸಿಕ್ಕಿರುವ ಆಸ್ತಿ ಪತ್ರಗಳು ಪ್ರಸಾದ್ ರೆಡ್ಡಿಗೆ ಸೇರಿದೆ ಎಂಬ ಖಚಿತ ಮಾಹಿತಿ ಲಭಿಸಿದೆ. ಆದ್ದರಿಂದ ಆದಾಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಅವರ ಮನೆಯವರ ಆಸ್ತಿ ಪತ್ರಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಪ್ರಸಾದ್ ರೆಡ್ಡಿ ಕೋಟಿ ಕೋಟಿ ಆಸ್ತಿ ಪ್ರಕರಣದ ಜೊತೆಗೆ ಹವಾಲ ದಂಧೆಯಲ್ಲಿ ತೊಡಗಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಅವಿನಾಶ್ ಅಮರ್ ಲಾಲ್ ಬೆನ್ನಿಗೆ ದೆಹಲಿ ಬಿಜೆಪಿ ಪರಮೋಚ್ಚ ನಾಯಕ ನಿಂತಿದ್ದು, ತನಿಖೆಗೆ ಅಡ್ಡಿಪಡಿಸಲು ಒತ್ತಾಯ ಹೆಚ್ಚಾಗಿದ್ದು, ಐಟಿ ಇಲಾಖೆಯೂ ತನಿಖೆ ನಡೆಸಲು ಹಿಂದೇಟು ಹಾಕುತ್ತಿದ್ದರು ಎನ್ನಲಾಗಿತ್ತು. ಅಮರ್ ಲಾಲ್ ನನ್ನು ಸದ್ಯಕ್ಕೆ ತನಿಖೆ ಮಾಡಬಾರದು. ವಿಚಾರಣೆಯನ್ನು ಸ್ವಲ್ಪ ನಿಧಾನ ಮಾಡಿ ಎಂದು ಐಟಿ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿತ್ತು.
Advertisement
ಸಿಕ್ಕಿಬಿದ್ದಿದ್ದು ಹೇಗೆ?
ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ 15 ದಿನಗಳ ಹಿಂದೆ ಅವಿನಾಶ್ ಅಮರ್ ಲಾಲ್‍ಗೆ ಲಾಕರ್ ನಲ್ಲಿ ಇಟ್ಟಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿ ಒಂದು ವೇಳೆ ಲಾಕರ್ ನಲ್ಲಿರುವ ವಸ್ತು ಕೊಂಡೊಯ್ಯದಿದ್ದರೆ ಲಾಕರ್ ಒಡೆಯುದಾಗಿ ನೋಟಿಸ್ ಕಳುಹಿಸಿದ್ದರು. ಸ್ವಲ್ಪ ಕೆಲಸ ಕಾರ್ಯಗಳಿವೆ. ಆದ್ದರಿಂದ ಅವುಗಳನ್ನು ಒಡೆದು ನವೀಕರಣಗೊಳಿಸಬೇಕಿದೆ ಎಂದು ಬೌರಿಂಗ್ ಆಡಳಿತ ಮಂಡಳಿ ನೋಟಿಸ್ ನಲ್ಲಿ ತಿಳಿಸಿತ್ತು. ಆದರೆ ಉದ್ಯಮಿ ನೋಟಿಸ್ ಬಗ್ಗೆ ತಲೆ ತಲೆಕೆಡಿಸಿಕೊಂಡಿಲ್ಲ. ಕೊನೆಗೆ ಆಡಳಿತ ಮಂಡಳಿ 86, 87ರಲ್ಲಿ ಲಾಕರ್ ಹೊಡೆದಿದೆ. ಆಗ ಈ ಕೋಟಿ ಕೋಟಿ ಆಸ್ತಿ ಪತ್ತೆಯಾಗಿತ್ತು.
ರಾಜಸ್ಥಾನ ಮೂಲದ ಅವಿನಾಶ್ ಅಮರ್ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರನಾಗಿದ್ದು, ಬೆಂಗಳೂರಲ್ಲಿ 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.