– ಜಲಸಂಪನ್ಮೂಲ, ಹೆದ್ದಾರಿ ಕಾಮಗಾರಿಯಲ್ಲಿ ಅಕ್ರಮ
– ಕ್ಲಾಸ್ ಒನ್ ಗುತ್ತಿಗೆದಾರರಿಂದ ಬೋಗಸ್ ಬಿಲ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಆಪ್ತ ಗುತ್ತಿಗೆದಾರರ ಮೇಲೆ ನಡೆದಿದ್ದ ಆದಾಯ ತೆರಿಗೆ ದಾಳಿ ವೇಳೆ 750 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ.
ಜಲಸಂಪನ್ಮೂಲ ಮತ್ತು ಹೆದ್ದಾರಿ ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದು, ಬೋಗಸ್ ಖರೀದಿ ಮತ್ತು ಕಾರ್ಮಿಕರ ಹೆಸರಲ್ಲಿ ಅಕ್ರಮ ನಡೆದಿದೆ. ಮೂರು ಬೃಹತ್ ಗುತ್ತಿಗೆದಾರರ ಕಂಪನಿಗಳಲ್ಲಿ ಅಪಾರ ನಗ-ನಗದು ಸೇರಿ ಒಟ್ಟು 750 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಐಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Advertisement
Advertisement
40 ಮಂದಿ ಹೆಸರಲ್ಲಿ ಬೋಗಸ್ ಉಪ ಗುತ್ತಿಗೆ ನೀಡಲಾಗಿದ್ದು, ಈ 40 ಮಂದಿಯೂ ಅಕ್ರಮ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಯಡಿಯೂರಪ್ಪ ಆಪ್ತರಿಗೆ ಸಂಕಷ್ಟ ಫಿಕ್ಸ್ ಎಂದು ಹೇಳಲಾಗುತ್ತಿದೆ.
Advertisement
ಶೀಘ್ರವೇ ಭ್ರಷ್ಟರ ವಿಚಾರಣೆಯನ್ನು ಐಟಿ ಇಲಾಖೆ ಶುರು ಮಾಡಿಕೊಳ್ಳಲಿದೆ. ಕಳೆದ ವಾರ ಕ್ಲಾಸ್ ಒನ್ ಕಂಟ್ರಾಕ್ಟರ್ ಡಿ ವೈ ಉಪ್ಪಾರ್ ಕಂಪನಿ, ಗುತ್ತಿಗೆದಾರ ಸೋಮಶೇಖರ್, ರಾಹುಲ್ ಎಂಟರ್‍ಪ್ರೈಸಸ್ ಮನೆಗಳ ಮೇಲೆ ಐಟಿ ದಾಳಿ ನಡೆಸಿತ್ತು. ಅಲ್ಲದೆ ಯಡಿಯೂರಪ್ಪ, ವಿಜಯೇಂದ್ರಗೆ ಆಪ್ತನಾಗಿದ್ದ ಬಿಎಂಟಿಸಿ ಡ್ರೈವರ್ ಉಮೇಶ್ ಮನೆ ಮೇಲೂ ದಾಳಿ ಆಗಿತ್ತು. ನಾಲ್ಕು ರಾಜ್ಯಗಳ ಒಟ್ಟು 47 ಕಡೆಗಳಲ್ಲಿ ಐಟಿ ಇಲಾಖೆ ದಾಳಿ ನಡೆಸಿತ್ತು.
Advertisement
3 ಕಂಪನಿಗಳಿಂದ 750 ಕೋಟಿ ಅಕ್ರಮ
ಜಲಸಂಪನ್ಮೂಲ, ಹೆದ್ದಾರಿ ಕಾಮಗಾರಿಯಲ್ಲಿ 3 ಬೃಹತ್ ಗುತ್ತಿಗೆದಾರರಿಂದ ಭಾರೀ ಅಕ್ರಮ ನಡೆದಿದೆ. 3 ಕಂಪನಿಗಳ ಪೈಕಿ 750 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಪೈಕಿ ಒಂದೇ ಕಂಪನಿಯಿಂದ 487 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.
ಆರೋಪ ಏನು?
ಜಲಸಂಪನ್ಮೂಲ, ಹೆದ್ದಾರಿ ಕಾಮಗಾರಿ ಉಪ ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ. ಕಾರ್ಮಿಕರ ಹೆಸರಲ್ಲಿ ಬೋಗಸ್ ವೆಚ್ಚ ತೋರಿಸಲಾಗಿದೆ. 40 ಮಂದಿ ಹೆಸರಲ್ಲಿ ಬೋಗಸ್ ಉಪ ಗುತ್ತಿಗೆ ನೀಡಲಾಗಿದೆ. ಕ್ಲಾಸ್ ಒನ್ ಗುತ್ತಿಗೆದಾರರಿಂದ 382 ಕೋಟಿ ಅಕ್ರಮ ನಡೆದಿದ್ದು ಕಾರ್ಮಿಕರ ಹೆಸರಲ್ಲಿ 382 ಕೋಟಿ ವಂಚಿಸಲಾಗಿದೆ. ಅಸ್ತಿತ್ವದಲ್ಲಿಲ್ಲದ ಕಂಪನಿ ಜೊತೆಗೆ 105 ಕೋಟಿ ವ್ಯವಹಾರ ನಡೆದಿದೆ. ಇದನ್ನೂ ಓದಿ: ಮನೆಯಲ್ಲಿ ಐದು ಸದಸ್ಯರಿದ್ದರೂ ಒಂದೇ ಮತ ಪಡೆದ ಬಿಜೆಪಿ ಅಭ್ಯರ್ಥಿ
ಐಟಿ ದಾಳಿ ವೇಳೆ ಸಿಕ್ಕಿದ್ದೇನು?
ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ 4.69 ಕೋಟಿ ರೂಪಾಯಿ ನಗದು, 8.67 ಕೋಟಿ ರೂಪಾಯಿ ಚಿನ್ನಾಭರಣ, ಚಿನ್ನದ ಗಟ್ಟಿ ವಶ ಪಡಿಸಲಾಗಿದೆ. 29.83 ಲಕ್ಷ ಮೊತ್ತದ ಬೆಳ್ಳಿ ವಸ್ತುಗಳು ಸಿಕ್ಕಿವೆ.