ನವದೆಹಲಿ: ಕೇಂದ್ರ ಸರ್ಕಾರವು ಆದಾಯ ತೆರಿಗೆ ಮಸೂದೆ 2025, (Income Tax Bill 2025) ಅನ್ನು ಲೋಕಸಭೆಯಿಂದ ಹಿಂಪಡೆದಿದ್ದು, ಆಗಸ್ಟ್ 11ರಂದು ಹೊಸ ಆವೃತ್ತಿಯನ್ನು ಪರಿಚಯಿಸಲಿದೆ ಎಂದು ತಿಳಿದುಬಂದಿದೆ.
ಮಸೂದೆಯನ್ನು ಪರಿಶೀಲಿಸಲು ರಚಿಸಲಾದ ಆಯ್ಕೆ ಸಮಿತಿಯ ವರದಿಯ ನಂತರ ಕೇಂದ್ರ ಸರ್ಕಾರ (Central Government) ಈ ನಿರ್ಧಾರ ತೆಗೆದುಕೊಂಡಿದೆ. ಈ ಮಸೂದೆಯನ್ನು ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ (Lok Sabha) ಪರಿಚಯಿಸಲಾಗಿತ್ತು. ಇದನ್ನೂ ಓದಿ: ಉಜ್ವಲ ಫಲಾನುಭವಿಗಳಿಗೆ ಗುಡ್ ನ್ಯೂಸ್ – ಸಿಲಿಂಡರ್ ಸಬ್ಸಿಡಿಗೆ 12,060 ಕೋಟಿ ನೀಡಲು ಅನುಮೋದನೆ
ಕೇಂದ್ರ ಸರ್ಕಾರವು ಫೆಬ್ರವರಿ 13 ರಂದು ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ 2025 ಅನ್ನು ಪರಿಚಯಿಸಿತ್ತು. ಮಸೂದೆಯನ್ನು ಪರಿಶೀಲಿಸಲು ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದಲ್ಲಿ 31 ಸದಸ್ಯರ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಮಸೂದೆಯನ್ನು ಪರಿಶೀಲಿಸಿ 285 ಸಲಹೆಗಳನ್ನು ನೀಡಿತ್ತು. ಸಮಿತಿಯು ಜುಲೈ 21 ರಂದು ಲೋಕಸಭೆಗೆ ತನ್ನ ವರದಿಯನ್ನು ಸಲ್ಲಿಸಿತು. ಆಯ್ಕೆ ಸಮಿತಿಯ ಬಹುತೇಕ ಎಲ್ಲಾ ಶಿಫಾರಸುಗಳನ್ನು ಕೇಂದ್ರ ಸರ್ಕಾರವು ಅಂಗೀಕರಿಸಿದೆ. ಅದಕ್ಕೆ ಸರಿಯಾದ ಶಾಸಕಾಂಗ ಅರ್ಥವನ್ನು ನೀಡಲು ಕೆಲವು ಸಲಹೆಗಳನ್ನು ಸಹ ಸ್ವೀಕರಿಸಿದ್ದು, ಅದನ್ನು ಸೇರಿಸಬೇಕಾಗಿದೆ.
ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ ಹಿಂಪಡೆದ ಬಳಿಕ, ಆಯ್ಕೆ ಸಮಿತಿ ಸೂಚಿಸಿದ ಬದಲಾವಣೆ ಸೇರಿಸಿ ಮಸೂದೆಯನ್ನು ಹೊಸ ರೂಪದಲ್ಲಿ ತರಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಕರ್ನಾಟಕದ 6 ಪ್ರವಾಸಿಗರ ರಕ್ಷಣೆ
ಮಸೂದೆಯ ಹೊಸ ಆವೃತ್ತಿಯನ್ನು ಆಗಸ್ಟ್ 11 ರಂದು ಲೋಕಸಭೆಯಲ್ಲಿ ಪರಿಚಯಿಸಲಾಗುವುದು ಎಂದು ಹೇಳಲಾಗುತ್ತಿದೆ. ಮಸೂದೆಯ ವಿಭಿನ್ನ ಆವೃತ್ತಿಗಳಿಂದಾಗಿ ಗೊಂದಲವನ್ನು ತಪ್ಪಿಸಲು ಮತ್ತು ಎಲ್ಲಾ ಬದಲಾವಣೆಗಳನ್ನು ಒಳಗೊಂಡ ಸ್ಪಷ್ಟ ಮತ್ತು ಹೊಸ ಆವೃತ್ತಿಯನ್ನು ಒದಗಿಸಲು ಸೋಮವಾರ ಸದನದಲ್ಲಿ ಆದಾಯ ತೆರಿಗೆ ಮಸೂದೆಯ ಹೊಸ ಆವೃತ್ತಿಯನ್ನು ಪರಿಚಯಿಸಲಾಗುವುದು ಎನ್ನಲಾಗಿದೆ. ಇದನ್ನೂ ಓದಿ: CSKಗೆ ಗುಡ್‌ಬೈ ಹೇಳಲು ಅಶ್ವಿನ್ ನಿರ್ಧಾರ – ಚೆನ್ನೈ ಸೂಪರ್ ಕಿಂಗ್ಸ್ ಸೇರಲು ಸಂಜು ಕಾತರ?