ಬೆಂಗಳೂರು: ಅತಿ ದೊಡ್ಡ ಕೇಬಲ್ ನೆಟ್ವರ್ಕ್ ಸಂಸ್ಥೆಯಾಗಿರುವ ಮೆಟ್ರೋ ಕಾಸ್ಟ್ ಇಂಡಿಯಾದ ನೂತನ ಕಚೇರಿ ಬೆಂಗಳೂರಿನ ಮಾಧವನಗರದಲ್ಲಿಂದು ಉದ್ಘಾಟನೆಗೊಂಡಿತು. ಮೆಟ್ರೋ ಕಾಸ್ಟ್ ನೆಟ್ವರ್ಕ್ ಇಂಡಿಯಾ ಸಂಸ್ಥೆಯ ನೂತನ ಕಚೇರಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
Advertisement
ಮೆಟ್ರೋ ಕಾಸ್ಟ್ ಇಂಡಿಯಾ ಸಂಸ್ಥೆಯ ನೂತನ ಕಚೇರಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾಗಿರುವ ಎಚ್.ಆರ್ ರಂಗನಾಥ್ ಮತ್ತು ಸಿಇಒ ಅರುಣ್ ಅವರು ಭೇಟಿ ನೀಡಿ ಸಂಸ್ಥೆಯ ಮಾಲೀಕರಾದ ನಾಗೇಶ್ ಛಾಬ್ರಿಯಾ ಮತ್ತು ನಿಶಾ ಛಾಬ್ರಿಯಾರಿಗೆ ಶುಭ ಕೋರಿದರು. ಇದನ್ನೂ ಓದಿ: UAE T20 ಲೀಗ್‍ನ ಕ್ರಿಕೆಟ್ ತಂಡ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
Advertisement
Advertisement
ಮೆಟ್ರೋ ಕಾಸ್ಟ್ ಮೂರು ದಶಕಗಳಿಗಿಂತ ಹೆಚ್ಚು ಕೇಬಲ್ ಸೇವೆ ಒದಗಿಸುತ್ತಿರುವ ಸಂಸ್ಥೆಯಾಗಿದೆ. ಉತ್ತರ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಕೇಬಲ್ ಸೇವೆ ಒದಗಿಸುತ್ತಿದೆ. ಇನ್ಮುಂದೆ ಬೆಂಗಳೂರಿನಿಂದಲೇ ಎಲ್ಲಾ ಕಡೆಗೂ ಸೇವೆ ಒದಗಿಸಲು ಮೆಟ್ರೋ ಕಾಸ್ಟ್ ಮುಂದಾಗಿದೆ. ಬೆಂಗಳೂರಿನಲ್ಲೇ ಸರ್ವರ್ ರೂಂ ಸ್ಥಾಪಿಸಿ ಸೇವೆ ನೀಡಲು ಸಂಸ್ಥೆ ಮುಂದಾಗಿದ್ದು, ಈಗಾಗಲೇ 5 ಲಕ್ಷ ಗ್ರಾಹಕರನ್ನು ಹೊಂದಿದೆ. ಇನ್ಮುಂದೆ ಕರ್ನಾಟಕದಲ್ಲಿ 1000 ಚಾನೆಲ್ ಗಳನ್ನು ನೀಡುವ ಯೋಜನೆಯನ್ನೂ ರೂಪಿಸಿದ್ದು, 1000 ಚಾನೆಲ್ ಗಳ ಜೊತೆಗೆ ಉತ್ಕೃಷ್ಟ ಗುಣಮಟ್ಟದ ಸೇವೆ ನೀಡುವ ಗುರಿ ಇಟ್ಟುಕೊಂಡಿದೆ. ಇದನ್ನೂ ಓದಿ: ಇತಿಹಾಸದಲ್ಲಿಯೇ ಮೊದಲಬಾರಿಗೆ ಅಂಟಾರ್ಟಿಕಾದಲ್ಲಿ ಏರ್ಬಸ್ ವಿಮಾನ
Advertisement
OTT ಸರ್ವೀಸ್, IPTV ಸರ್ವೀಸ್, ಬ್ರಾಂಡ್ ಬ್ಯಾಂಡ್ ಸೇವೆಗಳನ್ನು ಬೆಂಗಳೂರು ಕಚೇರಿಯಿಂದಲೇ ನೀಡಲು ಸಂಸ್ಥೆ ತೀರ್ಮಾನ ಮಾಡಿದೆ. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೆಟ್ರೋ ಕಾಸ್ಟ್ ನೆಟ್ ವರ್ಕ್ ಇಂಡಿಯಾ ಪ್ರೈ. ಲಿಮಿಟೆಡ್‍ನ ಸಂಸ್ಥಾಪಕರಾದ ನಾಗೇಶ್ ಛಾಬ್ರಿಯಾ, ನಿಶಾ ಛಾಬ್ರಿಯಾ ಇನ್ನಿತರ ಗಣ್ಯರು ಭಾಗವಹಿಸಿದ್ದರು. ಇದನ್ನೂ ಓದಿ: ಥಿಯೇಟರ್‌ಗಳಲ್ಲಿ ನಾವು ರಾಜೀಯಾಗುವುದಿಲ್ಲ: ಅಮೀರ್‌ಗೆ ರಾಕಿಬಾಯಿ ಯಶ್ ಉತ್ತರ