– ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರಿಟ್ಟ ಮಾಜಿ ಸಚಿವ ಡಿ.ಬಿ ಇನಾಮ್ದಾರ್ ಸೊಸೆ
ಬೆಳಗಾವಿ: ಕಳೆದ 40 ವರ್ಷಗಳಿಂದ ಡಿ.ಬಿ ಇನಾಮ್ದಾರ್ (DB Inamdar) ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರಿಗೆ ಟಿಕೆಟ್ ಕೈ ತಪ್ಪಿದ್ದು ಬಹಳ ಕೆಟ್ಟ ಅನುಭವವಾಗಿದೆ. ಹಾಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಡಿ.ಬಿ ಇನಾಮ್ದಾರ್ ಕುಟುಂಬ ತೀರ್ಮಾನಿಸಿದೆ ಎಂದು ಡಿ.ಬಿ ಇನಾಮ್ದಾರ್ ಸೊಸೆ ಲಕ್ಷ್ಮೀ ಇನಾಮ್ದಾರ್ (Lakshmi Inadmdar) ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟಿಕೆಟ್ ಕೈತಪ್ಪಿದಕ್ಕೆ ಕಾಂಗ್ರೆಸ್ (Congress) ಪಕ್ಷಕ್ಕೆ ರಾಜೀನಾಮೆ ಘೋಷಣೆ ಮಾಡಲಾಗಿದೆ. ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಡಿ.ಬಿ ಇನಾಮ್ದಾರ್ ಕುಟುಂಬ ತೀರ್ಮಾನ ಮಾಡಿದೆ. ಟಿಕೆಟ್ ಕೈ ತಪ್ಪಿದ್ದು ಬಹಳ ಕೆಟ್ಟ ಅನುಭವವಾಗಿದೆ. ಇನಾಮ್ದಾರ್ ಅವರು ಕಳೆದ 40 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷವನ್ನ ಕಟ್ಟಿ ಬೆಳೆಸಿದ್ದಾರೆ, ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಈ ಅವರಿಗೆ ಆರೋಗ್ಯ ಸರಿಯಾಗಿಲ್ಲ. ಇಂತಹ ಕಷ್ಟದ ಸಮಯದಲ್ಲಿ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ನಮ್ಮನ್ನ ಕೈ ಬಿಟ್ಟಿದೆ ಎಂದು ಲಕ್ಷ್ಮಿ ಇನಾಮ್ದಾರ್ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ರಿಕ್ವೆಸ್ಟ್ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್ ಮಾಡಿಸಿದ ಬಾದ್ ಷಾ – ಚಾಂಪಿಯನ್ಸ್ ಆಗೋಣ ಎಂದ ಜೂಹಿ ಚಾವ್ಲಾ
Advertisement
Advertisement
ಇಂತಹ ಸಮಯದಲ್ಲಿ ಯಾರು ನಮಗೆ ಕೈ ಹಿಡಿಯುತ್ತಾರೋ ಅವರೇ ನಮಗೆ ದೇವರಾಗ್ತಾರೆ? ಎಲ್ಲ ರಾಜ್ಯ ನಾಯಕರನ್ನ ಭೇಟಿ ಮಾಡಿದಾಗ ಸಮೀಕ್ಷೆಯಲ್ಲಿ ಫಲಿತಾಂಶ ಚೆನ್ನಾಗಿಯೇ ಇತ್ತು ಅಂತಾ ಹೇಳಿದ್ದರು. ಮೊದಲ ಲಿಸ್ಟ್‌ನಲ್ಲಿಯೇ ಅವರ ಹೆಸರು ಬರಬೇಕಾಗಿತ್ತು. ಅವರಿಗೆ ಅನಾರೋಗ್ಯದ ಕಾರಣದಿಂದ ಟಿಕೆಟ್ ಮೊದಲ ಲಿಸ್ಟ್ ನಲ್ಲಿ ಬರಲಿಲ್ಲ ಅಂದ್ರು. ಡಿ.ಬಿ ಇನಾಮ್ದಾರ್ ಅವರ ಪರಿಸ್ಥಿತಿ ಎಲ್ಲ ನಾಯಕರ ಮುಂದೆಯೂ ಹೇಳಿದ್ದೇವೆ. ಬೆಂಗಳೂರಿಗೆ ಹೋಗಿ ನಮ್ಮನ್ನೂ ಟಿಕೆಟ್‌ಗೆ ಪರಿಗಣನೆ ಮಾಡಿ ಅಂತಾ ಮನವಿ ಮಾಡಿದ್ದೇವೆ. ಹೊಸ ಸರ್ವೇ ಮಾಡಿಸಿ ಅದರಲ್ಲಿ ನಮ್ಮ ಹೆಸರು ಬಂದ್ರೆ ಟಿಕೆಟ್ ಕೊಡಿ ಇಲ್ಲವಾದ್ರೆ ಬೇಡ ಅಂತಾ ಹೇಳಿದ್ದೇವೆ. ಅದಕ್ಕೆ ರಾಜ್ಯ ನಾಯಕರೂ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗದಗ, ನರಗುಂದ, ರೋಣ ಕೈ ಅಭ್ಯರ್ಥಿಗಳ ಆಯ್ಕೆ ಅಂತಿಮ – ಸ್ವಪಕ್ಷ ಆಕಾಂಕ್ಷಿಗಳಿಂದಲೇ ಅಪಪ್ರಚಾರ
Advertisement
ಹೈಕಮಾಂಡ್ ನನಗೆ ಕರೆ ಮಾಡಿ ಕನ್ವಿನ್ಸ್ ಮಾಡಿದ್ರು. ಆಗ ನಾನು ಕಾರ್ಯಕರ್ತರು ಏನು ತೀರ್ಮಾನ ತಗೋತಾರೆ ಅದಕ್ಕೆ ಬದ್ಧವಾಗಿದ್ದೆನೆ ಎಂದು ಹೇಳಿದ್ದೇನೆ. ಏನೇ ನಿರ್ಧಾರ ಮಾಡಿದ್ರೂ ಫ್ಯಾಮಿಲಿ, ಕಾರ್ಯಕರ್ತರು ನಿರ್ಧಾರ ಮಾಡ್ತಾರೆ ಅಂತಾ ಹೇಳಿದ್ದೇನೆ. ಕಿತ್ತೂರು ಗ್ರೌಂಡ್ ರಿಯಾಲಿಟಿಯೇ ಬೇರೆ ಇದೆ. ಆದರೆ ಹೈಕಮಾಂಡ್ ಗೆ ತೋರಿಸಿದ್ದೆ ಬೇರೆ ಇದೆ. ಕಾರ್ಯಕರ್ತರ ಸಭೆ ಮಾಡಿ ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದು ಲಕ್ಷ್ಮೀ ಹೇಳಿದ್ದಾರೆ.
ಕಾರ್ಯಕರ್ತರು ಹೇಳಿದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಿರಾ? ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನ ಇನ್ನೂ ನಿರ್ಧಾರ ಮಾಡಿಲ್ಲ ಎಂದಿದ್ದಾರೆ.