ಉಡುಪಿ: ಬಿಜೆಪಿ ಈ ಬಾರಿ 150 ಸೀಟು ಗೆಲ್ಲುತ್ತದೆ. ಆದರೆ ಕಾಂಗ್ರೆಸ್ ಹೇಳುವ 150 ಸೀಟು ಯಾವ ರಾಜ್ಯದ್ದು ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯ ಸಿದ್ಧತೆಗಳನ್ನು ಮಾಡುತ್ತಿವೆ. ಆಡಳಿತ ಪಕ್ಷ ಬಿಜೆಪಿ ಉಳಿದ ಎಲ್ಲಾ ಪಕ್ಷಗಳಿಗಿಂತ ಅಬ್ಬರದ ತಯಾರಿಗಳನ್ನು ಮಾಡುತ್ತಿವೆ. ಪ್ರಮುಖ ಮೂರು ಪಕ್ಷಗಳು ಈಗಾಗಲೇ 150ರ ಜಪವನ್ನು ಮಾಡಲು ಆರಂಭಿಸಿದೆ.
Advertisement
Advertisement
ಬಿಜೆಪಿಯ ರಾಜ್ಯ ಕಾರ್ಯಕಾರಿಣಿಯಲ್ಲಿ ಮಿಷನ್ 150 ಪ್ಲಸ್ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಈ ಬಾರಿ 150ಸೀಟು ಗೆಲ್ಲುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ನಡುವೆ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಕೂಡ ಜನ ಈ ಬಾರಿ ನಮಗೆ 150 ಸೀಟು ಆಶೀರ್ವಾದ ಮಾಡುತ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡುತ್ತಿದ್ದಾರೆ. ಇದನ್ನೂ ಓದಿ: ದಲಿತ ಹುಡುಗನಿಗೆ ಕಾಲು ನೆಕ್ಕಲು ಒತ್ತಾಯ – ವೀಡಿಯೋ ವೈರಲ್, 8 ಮಂದಿ ಅರೆಸ್ಟ್
Advertisement
Advertisement
ಎಲ್ಲ ಬೆಳವಣಿಗೆಗಳ ನಡುವೆ ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೋಟ, 150 ಸೀಟು ಗೆಲ್ಲುತ್ತೀರಾ? ಗೆಲುವಿಗೆ ಬೇಕಾದ ಸಂಘಟನಾತ್ಮಕ ವ್ಯೂಹ ರಚನೆಯಾಗಿದೆ. ಕಾರ್ಯಕಾರಿಣಿಯಲ್ಲಿ ಮುಂದಿನ ಚುನಾವಣೆ ರೂಪುರೇಷೆ ಮಾಡಲಾಗಿದೆ. ಜನಾದೇಶದ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಉತ್ತರಿಸುತ್ತೇವೆ. ಬಿಜೆಪಿ 150ಕ್ಕೂ ಹೆಚ್ಚು ಸೀಟು ಗೆಲ್ಲುತ್ತದೆ. ಕಾಂಗ್ರೆಸ್ ಗೆಲ್ಲಲಿರುವ 150 ಸೀಟು ಯಾವ ರಾಜ್ಯದ್ದು ಎಂದು ಪ್ರಶ್ನಿಸಿದರು.
ಈ ನೂರೈವತ್ತು ಸೀಟಿನ ವಿಚಾರದಲ್ಲಿ ರಾಜ್ಯದ ಜನ ಗೊಂದಲದಲ್ಲಿದ್ದಾರೆ. ಎಲ್ಲಾ ಗೊಂದಲಗಳಿಗೆ ಸಿದ್ದರಾಮಯ್ಯ ಡಿಕೆಶಿಯೇ ಉತ್ತರಿಸಬೇಕು. ಅವರು ಯಾವ ರಾಜ್ಯದ ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಸಂತೋಷ್ ಪಾಟೀಲ್ ಕುಟುಂಬಕ್ಕೆ 5 ಲಕ್ಷ ರೂ. ನೀಡುವ ಭರವಸೆ ಕೊಟ್ಟ ಕಾಂಗ್ರೆಸ್ ಶಾಸಕ