ಮಹಿಳೆಯರು ಗರ್ಭಿಣಿಯಾಗುವ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವರು ಆರೋಗ್ಯವಂತರಾಗಿದ್ದರೂ ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ. ಇದರಿಂದ ಅವರು ಮಾನಸಿಕ, ದೈಹಿಕ ನೋವು ಅನುಭವಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅದಕ್ಕೆಲ್ಲ ಕೊರಗುವ ಅವಶ್ಯಕತೆ ಇಲ್ಲ, ಯಾಕೆಂದರೆ ವೈದ್ಯ ಲೋಕದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ನಾನಾ ವಿಧಾನಗಳಲ್ಲಿ ಗರ್ಭಧಾರಣೆಗೆ ಪ್ರಯತ್ನ ನಡೆಯುತ್ತದೆ. ಅಂಥವುಗಳಲ್ಲಿ ಐವಿಎಫ್ (IVF Treatment) ಕೂಡ ಒಂದು.
ಏನಿದು ಐವಿಎಫ್?: ಮದುವೆಯಾಗಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಯ ನಂತರವೂ ಗರ್ಭಧರಿಸಲು ಸಾಧ್ಯವಾಗದ ದಂಪತಿ ಈ ಚಿಕಿತ್ಸೆ ತೆಗೆದುಕೊಳ್ಳಲು ಮುಂದಾಗುತ್ತಾರೆ. ಕೃತಕವಾಗಿ ಇನ್ ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಮೂಲಕ ಗರ್ಭಧಾರಣೆ ಮಾಡಬಹುದು. ಅಂದರೆ ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಐವಿಎಫ್ ಎಂದು ಕರೆಯುತ್ತಾರೆ. ವಾಸ್ತವವಾಗಿ ಈ ಐವಿಎಫ್‍ನ ಚಕ್ರವು ಪೂರ್ಣಗೊಳ್ಳಲು 2 ರಿಂದ 3 ವಾರಗಳ ಸಮಯ ಬೇಕಾಗುತ್ತದೆ. ಈ ಅವಧಿ ಕೆಲವೊಮ್ಮೆ ಹೆಚ್ಚು ಕಡಿಮೆಯಾಗಬಹುದು.
Advertisement
Advertisement
ಸಂತಾನೋತ್ಪತ್ತಿ ತಂತ್ರಜ್ಞಾನ: ಐವಿಎಫ್ ಚಿಕಿತ್ಸೆ ಇತ್ತೀಚೆಗೆ ಸಾಕಷ್ಟು ಜನಪ್ರಿಯ ಹಾಗೂ ಪರಿಣಾಮಕಾರಿಯಾಗಿದೆ. ಇದು ಅಂಡಾಣು ಅಥವಾ ಭ್ರೂಣಗಳು ಮತ್ತು ವೀರ್ಯಾಣುಗಳ ನಿರ್ವಹಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತದೆ. ಈ ಕಾರಣದಿಂದಲೇ ಇದನ್ನು `ಸಹಾಯಕ ಸಂತಾನೋತ್ತತ್ತಿ ತಂತ್ರಜ್ಞಾನ’ ಎಂದು ಕರೆಯಲಾಗುತ್ತದೆ.
Advertisement
ದಂಪತಿ ಸ್ವಂತ ಮೊಟ್ಟೆಗಳನ್ನು ಬಳಕೆ ಮಾಡಬಹುದು: ಐವಿಎಫ್ ಚಿಕಿತ್ಸೆಗೆ ಒಳಗಾಗುವ ದಂಪತಿ ತಮ್ಮದೇ ಆದ ಸ್ವಂತ ಮೊಟ್ಟೆಗಳು ಮತ್ತು ವೀರ್ಯವನ್ನು ಬಳಸಿಕೊಂಡು ಚಿಕಿತ್ಸೆ ಪಡೆಯಬಹುದಾಗಿದೆ. ಇದರ ಹೊರತಾಗಿ ಅಪರಿಚಿತ ದಾನಿಗಳ ಮೊಟ್ಟೆ, ವೀರ್ಯ ಅಥವಾ ಭ್ರೂಣಗಳಿಂದಲೂ ಈ ಚಿಕಿತ್ಸೆ ಮಾಡಬಹುದು.
Advertisement
ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ?: ಆರೋಗ್ಯಕರ ಮಗುವನ್ನು ಹೊಂದುವ ನಿಮ್ಮ ಸಾಧ್ಯತೆಗಳು ನಿಮ್ಮ ವಯಸ್ಸು ಮತ್ತು ಬಂಜೆತನದ ಕಾರಣದಂತಹ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.
ಚಿಕಿತ್ಸೆಗೆ ತಯಾರಿ: ಐವಿಎಫ್ ಚಿಕಿತ್ಸೆಗೆ ಒಳಗಾಗುವ ದಂಪತಿ ಮೊದಲು ಅನೇಕ ಮೌಲ್ಯಮಾಪನಗಳಿಗೆ ಒಳಗಾಗುತ್ತಾರೆ. ಮಹಿಳೆಯ ಅಂಡಾಶಯದ ಮೀಸಲು ಸೈಕಲ್ ದಿನದ ಮೂರು ಕೋಶಕ-ಉತ್ತೇಜಿಸುವ ಹಾರ್ಮೋನ್ (FSH) ಮತ್ತು ಎಸ್ಟ್ರಾಡಿಯೋಲ್ (E2), ಆಂಟಿ-ಮುಲ್ಲೆರಿಯನ್ ಹಾರ್ಮೋನ್ (AMH) ಅಥವಾ ಆಂಟ್ರಲ್ ಕೋಶಕ ಎಣಿಕೆಯನ್ನು ಬಳಸಿಕೊಂಡು ಮೌಲ್ಯಮಾಪನ ಮಾಡಲಾಗುತ್ತದೆ. ಈ ಮೌಲ್ಯ ಮಾಪನದಲ್ಲಿ ಮಹಿಳೆಯು ಕಳಪೆ ಅಂಡಾಶಯವನ್ನು ಹೊಂದಿದ್ದರೆ, ಅಂಥವರು ಐವಿಎಫ್ ಚಿಕಿತ್ಸೆ ಪಡೆಯಬಹುದು. ಹಾಗೆಯೇ ವೀರ್ಯ ರೂಪವಿಜ್ಞಾನ, ಎಣಿಕೆ ಮತ್ತು ಚಲನಶೀಲತೆಯ ಆಧಾರದ ಮೇಲೆ ಐಸಿಎಸ್‍ಐ ಅನ್ನು ಸೂಚಿಸಲಾಗಿದೆಯೇ ಎಂದು ಪುರುಷ ಪಾಲುದಾರ ವೀರ್ಯವನ್ನು ಪರೀಕ್ಷಿಸಲಾಗುತ್ತದೆ. ಇವುಗಳ ಜೊತೆಗೆ ದಂಪತಿ ಹೆಚ್‍ಐವಿ, ಹೆಪಟೈಟಿಸ್ ಬಿ, ಮತ್ತು ಅ ಮತ್ತು ಸಿಫಿಲಿಸ್‍ಗಾಗಿ ಸಾಂಕ್ರಾಮಿಕ ರೋಗ ತಪಾಸಣೆಯನ್ನು ಪಾಲುದಾರರಿಗೆ ಶಿಫಾರಸು ಮಾಡಲಾಗಿದೆ.
ಐವಿಎಫ್ ಸಾಧಕ-ಬಾಧಕಗಳನ್ನು ಕೂಡ ಹೊಂದಿದೆ. ಕಾರ್ಯವಿಧಾನದ ಮೂಲಕ ಒಂದಕ್ಕಿಂತ ಹೆಚ್ಚು ಭ್ರೂಣಗಳನ್ನು ಗರ್ಭಾಶಯದಲ್ಲಿ ಇರಿಸಿದರೆ ಅದು ಒಂದಕ್ಕಿಂತ ಹೆಚ್ಚು ಮಗುವಿನ ಗರ್ಭಧಾರಣೆಗೆ ಕಾರಣವಾಗುತ್ತದೆ. ಇದನ್ನು ಸಾಮಾನ್ಯವಾಗಿ `ಬಹು ಗರ್ಭಧಾರಣೆ’ ಎಂದೇ ಕರೆಯುತ್ತಾರೆ.
ಚಿಕಿತ್ಸೆ ತೀರಾ ದುಬಾರಿಯಲ್ಲ ಸಾಮಾನ್ಯವಾಗಿ ಐಯುಐ (Intrauterine insemination) ಮತ್ತು ಐವಿಎಫ್ ಚಿಕಿತ್ಸೆ ಮೂಲಕ ಮಕ್ಕಳನ್ನು ಮಾಡಿಕೊಳ್ಳಲು ತುಂಬಾ ದುಬಾರಿ ಹಣ ತೆರಬೇಕಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಆದರೆ ಆ ತಂತ್ರಜ್ಞಾನದ ಚಿಕಿತ್ಸೆ ತೀರಾ ದುಬಾರಿಯಲ್ಲ. ಉತ್ತಮ ಲ್ಯಾಬ್ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸ್ವಲ್ಪ ಹೆಚ್ಚು ಹಣ ಖರ್ಚಾಗಲಿದೆ. ಅಗತ್ಯ ಪರೀಕ್ಷೆಗಳ ನಂತರ ಐಯುಐಗೆ ಸುಮಾರು 10 ಸಾವಿರ ಮತ್ತು ಐವಿಎಫ್‍ಗೆ ಸುಮಾರು 1.75 ರೂ. ವೆಚ್ಚ ತಗಲಬಹುದು.
ಐವಿಎಫ್ ಮೂಲಕ ಮಕ್ಕಳನ್ನು ಮಾಡಿಕೊಂಡರೆ ಮುಂದೆ ತೊಂದರೆ ಆಗಲಿದೆಯೇ?: ಹಾಗೇನೂ ಇಲ್ಲ, ಅವೂ ಮಾಮೂಲಿ ಮಕ್ಕಳಂತೆ ಇರುತ್ತವೆ. ಅದರಲ್ಲಿಪತ್ನಿಯ ಅಂಡಾಣುವಿನಲ್ಲಿಪತಿಯ ವೀರ್ಯಾಣು ಸೇರಿಸಿ ಭ್ರೂಣ ಬೆಳೆಸುತ್ತೇವೆ. ಅಂಥ ವ್ಯತ್ಯಾಸವೇನೂ ಇಲ್ಲ. ಐವಿಎಫ್ ತಂತ್ರಜ್ಞಾನದ ಮೂಲಕ ಪಡೆಯುವ ಮಕ್ಕಳು ಮಾಮೂಲಿಯಂತೆ ಇರಲಿವೆ, ಅವರಿಗೆ ಭವಿಷ್ಯದಲ್ಲಿಯಾವುದೇ ಆರೋಗ್ಯ ಸಮಸ್ಯೆ ಆಗದು, ಅಡ್ಡ ಪರಿಣಾಮಗಳೇನೂ ಇರುವುದಿಲ್ಲ. ಆ ಮಕ್ಕಳು ಕೂಡ ಸಾಮಾನ್ಯ ಮಕ್ಕಳಂತಿರುತ್ತವೆ. ಯಾವುದೇ ನ್ಯೂನತೆ ಕಾಣುವುದಿಲ್ಲ.
Web Stories