ವಿಜಯಪುರ: ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ವಿಮುಕ ಆಗಿ ಹೊರಟಿವೆ. ಸರ್ಕಾರಿ ಶಾಲೆಗಳಿಗೆ ಜನರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಾರೆ. ಆದರೆ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಸಚಿವ ಎಂ.ಬಿ.ಪಾಟೀಲ್ ಪ್ಲಾನ್ ಮಾಡಿದ್ದಾರೆ.
Advertisement
ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಬಂದಾಗ ಜಿಲ್ಲಾ ಕೇಂದ್ರ ಮತ್ತು ತಾಲೂಕಾ ಕೇಂದ್ರಗಳಲ್ಲಿ ಶಿಕ್ಷಣ ಇಲಾಖೆ ಕಾರ್ಯಕ್ರಮ ಆಯೋಜಿಸುತ್ತದೆ. ಆದರೆ ಈ ಬಾರಿ ವಿಜಯಪುರದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್,ವಿಜಯಪುರ ತಾಲೂಕಿನ 100 ಸರ್ಕಾರಿ ಶಾಲೆಗಳನ್ನು ಡಿಜಿಟಲ್ ಮಾಡಿಸಿದ್ದಾರೆ. ಶಾಸಕರ ಅನುದಾನದಲ್ಲಿ ಒಂದು ಶಾಲೆಗೆ 1 ಲಕ್ಷ ರೂ.ಯಂತೆ ಡಿಜಿಟಲ್ ಕೋಣೆ ಮಾಡಲಾಗಿದೆ. ಕಬ್ಬಿಣದ ಕಡಲೆಯಂತಿರುವ ವಿಜ್ಞಾನ, ಗಣಿತ ಮತ್ತು ಇಂಗ್ಲೀಷ್ ಸೇರಿದಂತೆ ಕಠಿಣ ವಿಷಯಗಳು ಮಕ್ಕಳಿಗೆ ಸರಳವಾಗಿ ಅರ್ಥವಾಗಲು ಎಲ್‍ಇಡಿ ಟಿವಿ ಅಳವಡಿಸಲಾಗಿದೆ. ಎಲ್‍ಇಡಿಯಲ್ಲಿ ವಿಷಯಕ್ಕೆ ತಕ್ಕಂತೆ ವಿಡಿಯೋ ಹಾಗು ಚಿತ್ರಗಳು ಬರೋದ್ರಿಂದ ಮಕ್ಕಳ ಮನದಲ್ಲಿ ವಿಷಯಗಳು ಅಚ್ಚಳಿಯದೇ ಉಳಿಯುತ್ತದೆ.
Advertisement
Advertisement
ಈಗಾಗಲೇ ಲೋಡ್ ಶೆಡ್ಡಿಂಗ್ ಶುರುವಾಗಿದ್ದು ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಎಲ್‍ಇಡಿ ಟಿವಿಗಳಿಗೆ ಸೋಲಾರ್ ಹಾಕಿಸಿದ್ದು, ತಡೆಯಿಲ್ಲದೆ 8 ಗಂಟೆ ನಿರಂತರ ಅಭ್ಯಾಸ ಮಾಡಬಹುದು. ಈ ಯೋಜನೆಗೆ ಟೆಲ್ಕೋ ಸೋಲಾರ್ ಕಂಪನಿ ಕೈ ಜೋಡಿಸಿದ್ದು, ಅರ್ಧದಷ್ಟು ಹಣ ಕಂಪನಿ, ಉಳಿದ ಅರ್ಧ ಹಣ ಶಾಸಕರ ಅನುದಾನದಲ್ಲಿ ಸಿಗುತ್ತದೆ.