ವಾಷಿಂಗ್ಟನ್: ಮನೆಯಲ್ಲಿ ಜಿರಲೆ ಕಂಡ್ರೆ ಅದನ್ನ ಕಡ್ಡಿಯಲ್ಲೋ ಪೊರಕೆಯಲ್ಲೋ ಹಿಡಿದು ಹೊರಗೆಸೆಯುತ್ತಾರೆ. ಆದ್ರೆ ಹಾವು ಬಂದ್ರೆ ಹಾಗೆ ಮಾಡೋಕಾಗುತ್ತಾ? ಇಲ್ಲ ಅನ್ನೋದಾದ್ರೆ ಇಲ್ಲಿ ಕೇಳಿ, ಅಮೆರಿಕದಲ್ಲಿ ಮಹಿಳೆಯೊಬ್ಬರು ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾಗೂ ಭಯಾನಕವಾದ ಹಾವನ್ನ ಹಿಡಿದು ಹೊರಗೆಸೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.
Advertisement
ಇದನ್ನೂ ಓದಿ: ಮೃಗಾಲಯದ ಹುಲಿಗಳಿಗೆ ಜೀವಂತ ಕತ್ತೆಯನ್ನೇ ಮೇಲಿನಿಂದ ತಳ್ಳಿದ್ರು: ಶಾಕಿಂಗ್ ವಿಡಿಯೋ ನೋಡಿ
Advertisement
Advertisement
ನಾನು ಮನೆಗೆ ಬಂದಾಗ 5-6 ಅಡಿ ಉದ್ದದ ಈ ಹಾವು ಕಾಣಿಸಿತು ಅಂತ ಟ್ಯಾಟೂ ಕಲಾವಿದೆಯಾಗಿರೋ ಸನ್‍ಶೈನ್ ಮ್ಯಾಕ್‍ಕರ್ರಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಈ ವಿಡಿಯೋವನ್ನ ಹಾಕಿದ್ದಾರೆ. ಮನೆಯ ಹಾಲ್‍ನಲ್ಲಿ ಇದ್ದ ಕಪ್ಪು ಬಣ್ಣದ ದೈತ್ಯ ಹಾವನ್ನು ಕಂಡು ಒಂದು ತಲೆದಿಂಬಿನ ಕವರ್ ತಂದು ಹಾವಿನ ಹಿಂದೆ ಹೋಗಿ ಅದನ್ನ ನಾಯಿಮರಿ ಹಿಡಿದಷ್ಟು ಸಲೀಸಾಗಿ ಹಿಡಿದಿದ್ದಾರೆ. ನಂತರ ಅದನ್ನ ತೆಗೆದುಕೊಂಡು ಹೋಗುವಾಗಲೂ ಅದರ ಮುಖ ಕವರ್‍ನಿಂದ ಹೊರಗೆ ಬಂದ್ರೆ ಕೈಯ್ಯಲ್ಲೇ ಅದನ್ನ ಒಳಗೆ ನೂಕಿದ್ದಾರೆ. ನಂತರ ಹಾವನ್ನ ಮನೆಯಿಂದ ಹೊರಗೆ ಹೋಗಿ ಬಿಟ್ಟಿದ್ದಾರೆ.
Advertisement
ಆ ಹಾವು ಅತ್ತಿತ್ತ ಹೋಗದಂತೆ ಬ್ರಿಡ್ಜ್ ಕೆಳಗೆ ಹರಿದು ಹೋಗುವವರೆಗೂ ಅದರ ಹಿಂದೆಯೇ ಹೋಗಿದ್ದಾರೆ. ಕೋಳಿ ಮರಿಯನ್ನ ಗೂಡು ಸೇರಿಸುವಂತೆ ಈ ಮಹಿಳೆ ಹಾವನ್ನ ಅಟ್ಟಿಕೊಂಡು ಹೋಗಿ ಬ್ರಿಡ್ಜ್‍ವರೆಗೆ ಬಿಟ್ಟಿದ್ದಾರೆ. ಈ ಎಲ್ಲಾ ದೃಶ್ಯವನ್ನ ಮಹಿಳೆಯ ಜೊತೆಗಿದ್ದ ಮತ್ತೊಬ್ಬರು ವಿಡಿಯೋ ಮಾಡಿದ್ದಾರೆ.
ಜೂನ್ 1 ರಂದು ಅಪ್‍ಲೋಡ್ ಮಾಡಲಾಗಿರುವ ಈ ವಿಡಿಯೋ ಈಗಾಗಲೇ 36 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 37 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದ್ದು, 8 ಸಾವಿರಕ್ಕೂ ಹೆಚ್ಚು ರಿಯಾಕ್ಷನ್ಸ್ ಪಡೆದಿದೆ.
ಇದನ್ನೂ ಓದಿ: ಮೊಟ್ಟೆ ಎಂದು ತಿಳಿದು ಪೈಪನ್ನೇ ನುಂಗಿದ ನಾಗರಹಾವು!
ಇನ್ನು ಈ ವಿಡಿಯೋಗೆ ಕಮೆಂಟ್ ಮಾಡಿದ ಕೆಲವರು, “ಆ ಮಹಿಳೆ ಮನೆಯಿಂದ ಹಾವನ್ನ ಹೊರಗೆ ತೆಗೆದುಕೊಂಡು ಹೋಗುವಾಗ ನಮ್ಮನೆಗೆ ಮತ್ತೊಂದು ಹಾವು ಬಂದಿದೆ ಅನ್ನೋದನ್ನ ಕೇಳಿದ್ಕೊಂಡ್ರಾ? ಏನೋ ಯಾವಾಗ್ಲೂ ಬರ್ತಾನೆ ಇರ್ತವೆ ಅನ್ನೋ ರೀತಿ….” ಎಂದು ಕಮೆಂಟ್ ಮಾಡಿದ್ದಾರೆ. “ಅಯ್ಯಯ್ಯೋ ಇಲ್ಲಿ ಏನಾಗ್ತಿದೆ. ನಾನಂತೂ ಇಲ್ಲಿಂದ ಹೋಗ್ತೀನಿ. ಬೇಕಾದ್ರೆ ಮನೆಯನ್ನ ಆ ಹಾವೇ ಇಟ್ಟುಕೊಳ್ಳಲಿ” ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
Just got home to find this 5 – 6 foot black snake in my living room.This video is not to be used in any way without licensing permission from viralhog.Contact Licensing@viralhog
Gepostet von SunShine McCurry am Donnerstag, 1. Juni 2017
ಈ ಮಹಿಳೆ ಈ ಹಿಂದೆಯೂ ಅನೇಕ ಬಾರಿ ಹಾವು ಹಿಡಿದಿರುವಂತಿದ್ದು, ತಾನು ಹಿಡಿದ ಮೊದಲ ಹಾವಿನ ವಿಡಿಯೋವನ್ನ ಕೂಡ ಫೇಸ್‍ಬುಕ್‍ನಲ್ಲಿ ಹಾಕಿದ್ದಾರೆ.
After an interview with a guy in London this morning, he asked for the video of the first snake I caught. Here is Snake #1 much fatter than the living room snake.
Gepostet von SunShine McCurry am Dienstag, 6. Juni 2017
ಇದನ್ನೂ ಓದಿ: ಕಾಳಿಂಗ ಸರ್ಪದಿಂದ ಕಚ್ಚಿಸಿಕೊಂಡು ಪ್ರಾಣಬಿಟ್ಟ ಹೆಬ್ಬಾವು: ಈ ವೈರಲ್ ವಿಡಿಯೋ ನೋಡಿದ್ರೆ ನೀವೂ ಬೆಚ್ಚಿಬೀಳ್ತಿರ