ಚೆನ್ನೈ: ಮಾಜಿ ಡಿಎಂಕೆ ಕಾರ್ಪೋರೇಟರ್ ಸೆಲ್ವಕುಮಾರ್ ಬ್ಯೂಟಿ ಸಲೂನ್ ಅಲ್ಲಿ ಮಹಿಳೆಗೆ ಒದ್ದು ಹಲ್ಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಈ ಘಟನೆಯ ಸಂಪೂರ್ಣ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಹೆಚ್ಚು ವೈರಲ್ ಆಗಿದೆ.
Advertisement
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಸೆಲ್ವರಾಜ್ ಬ್ಯೂಟಿ ಸಲೂನ್ ಅಲ್ಲಿ ನಾಲ್ಕು ಮಹಿಳೆಯರ ಮಧ್ಯೆದಲ್ಲಿ ನಿಂತುಕೊಂಡಿದ್ದಾರೆ. ಬಳಿಕ ಅಲ್ಲಿದ್ದ ಮಹಿಳೆಯೊಬ್ಬರಿಗೆ ಒದ್ದಿದ್ದಾರೆ. ಇನ್ನುಳಿದ ಮೂವರು ಮಹಿಳೆಯರು ಸೆಲ್ವಕುಮಾರ್ ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೂ ಸೆಲ್ವರಾಜ್ ಮಹಿಳೆಯ ನಿರಂತರವಾಗಿ ಹಲ್ಲೆ ಮಾಡಿದ್ದಾರೆ.
Advertisement
#WATCH Former DMK Corporator Selvakumar hits a woman at a beauty salon in Tamil Nadu's Perambalur. The incident took place on 25th May' 18. He has been arrested by the police and has been suspended from primary membership of the party (Source: CCTV footage) pic.twitter.com/B623qaLc0k
— ANI (@ANI) September 13, 2018
Advertisement
ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸೆಲ್ವರಾಜ್ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಪೊಲೀಸರು ಸೆಲ್ವರಾಜ್ನನ್ನು ಬಂಧಿಸಿದ್ದಾರೆ.
Advertisement
ಪೊಲೀಸರು ಈ ಘಟನೆ ಕುರಿತು ಸೆಲ್ವರಾಜ್ ಪ್ರಶ್ನಿಸಿದ್ದಾರೆ. ಆದರೆ ಸೆಲ್ವರಾಜ್ ಬಗ್ಗೆ ಏನೂ ಪ್ರತಿಕ್ರಿಯಿಸಿಲ್ಲ. ಹೀಗಾಗಿ ಮಹಿಳೆ ಮತ್ತು ಅವರ ನಡುವಿನ ಸಂಬಂಧದ ಬಗ್ಗೆ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv