ಲಕ್ನೋ: ತಂದೆ-ಮಗಳ ಜೋಡಿ ಚಿನ್ನಾಭರಣ ಮಳಿಗೆಯೊಂದರಲ್ಲಿ ಸಿಬ್ಬಂದಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ನೆಕ್ಲೇಸ್ ಕಳ್ಳತನ ಮಾಡಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.
ಘಟನೆ ಪೂರ್ತಿ ಚಿತ್ರಣ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವ್ಯಕ್ತಿಯೊಬ್ಬ ಗ್ರಾಹಕನಂತೆ ಪೋಸ್ ನೀಡುತ್ತ ಗ್ರಾಹರ ಬಳಿ ಮಾತನಾಡುತ್ತಿರುವುದನ್ನು ಕಾಣಬಹುದು. ಚಿನ್ನಾಭರಣ ಮಳಿಗೆಯ ಡಿಸ್ಪ್ಲೇಯಲ್ಲಿ ಚಿನ್ನದ ನೆಕ್ಲೇಸ್ ಇರುತ್ತೆ. ಈ ವೇಳೆ ಗ್ರಾಹಕನಂತೆ ವ್ಯಕ್ತಿಯೊಬ್ಬ ತನ್ನ ಮಗಳೊಂದಿಗೆ ಬಂದು ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುತ್ತಾನೆ. ಯುವತಿಯೂ ಚಿನ್ನದ ಸರವನ್ನು ಧರಿಸಿದ ನಂತರ ಸಿಬ್ಬಂದಿ ಅದನ್ನು ತೆಗೆಯಲು ಸಹಾಯ ಮಾಡುತ್ತಿರುತ್ತಾನೆ. ಇದನ್ನೂ ಓದಿ: ಚೆನ್ನೈನಿಂದ ಚಿಂಗವನಂಗೆ ರೈಲು ಸೇವೆ – ಶಬರಿಮಲೆ ಯಾತ್ರಾರ್ಥಿಗಳಿಗೆ ಬಂಪರ್ ಆಫರ್
ಅಲ್ಲಿಯವರೆಗೆ ಸುಮ್ಮನೆ ಕುಳಿತಿದ್ದ ಯುವತಿ ಏಕಾಏಕಿ ಸಿಬ್ಬಂದಿಯ ಮುಖಕ್ಕೆ ಎರಡೂ ಕೈಗಳಿಂದ ಮೆಣಸಿನ ಪುಡಿ ಎಸೆದು ಓಡಲು ಯತ್ನಿಸಿದ್ದಾಳೆ. ಅಷ್ಟರಲ್ಲಿ ಆ ವ್ಯಕ್ತಿ ಡಿಸ್ಪ್ಲೇಯಲ್ಲಿ ಇಟ್ಟಿದ್ದ ನೆಕ್ಲೇಸ್‍ನ್ನು ಕಿತ್ತುಕೊಂಡು ಅಂಗಡಿಯಿಂದ ಹೊರಬರಲು ಪ್ರಯತ್ನ ಮಾಡುತ್ತಾನೆ.
ತಕ್ಷಣ ಇತರ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಆತನ ಟಿ-ಶರ್ಟ್ ಕಾಲರ್ ಹಿಡಿಯುತ್ತಾರೆ. ಆದರೂ ಸಿಬ್ಬಂದಿ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಇದನ್ನೂ ಓದಿ: ಬಿಜೆಪಿಯವರು ಕಡ್ಲೆಪುರಿ ತಿನ್ನುವುದನ್ನು ನಿಲ್ಲಿಸುತ್ತಾರೆಯೇ?: GST ವಿರುದ್ಧ ಬ್ಯಾನರ್ಜಿ ವಾಗ್ದಾಳಿ
ಘಟನೆಯು ಗಾಜಿಯಾಬಾದ್‍ನ ಸಿಹಾನಿ ಗೇಟ್ ಪ್ರದೇಶದಲ್ಲಿ ನಡೆದಿದೆ.