ಕ್ಯಾಲಿಫೋರ್ನಿಯಾ: ನಾನು ಮಾಡುವ ಕೆಲಸವನ್ನು ವಂಶ ರಾಜಕಾರಣದ ಡಿಎನ್ಎ ಮೂಲಕ ಗುರುತಿಸುವ ಪ್ರವೃತ್ತಿ ಅಂತ್ಯವಾಗಬೇಕು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೇರಿಕ ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಬರ್ಕ್ಲೇ ವಿಶ್ವವಿದ್ಯಾಲಯದಲ್ಲಿ ‘ಪ್ರಚಲಿತ ಭಾರತ ಮತ್ತು ವಿಶ್ವದ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರದ ಮುಂದಿನ ಹಾದಿ’ ವಿಚಾರದ ಬಗ್ಗೆ ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
Advertisement
ಭಾರತದಲ್ಲಿ ವಂಶ ರಾಜಕಾರಣ ಹೆಚ್ಚು ಪ್ರಚಲಿತದಲ್ಲಿದೆ. ಉದಾಹರಣೆ ಅಖಿಲೇಶ್ ಯಾದವ್ (ಮುಲಾಯಂ ಸಿಂಗ್ ಯಾದವ್ ಅವರ ಮಗ ಸಮಾಜವಾದಿ ಪಕ್ಷದ ಮುಖ್ಯಸ್ಥರು), ಎಂಕೆ ಸ್ಟಾಲಿನ್ (ಕರುಣಾನಿಧಿ ಅವರ ಮಗ ಡಿಎಂಕೆ ಪಕ್ಷದ ಮುಖ್ಯಸ್ಥ), ಅಭಿಷೇಕ್ ಬಚ್ಚನ್ (ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಅವರ ಮಗ), ಮುಖೇಶ್ ಮತ್ತು ಅನಿಲ್ (ಉದ್ಯಮಿ ಅಂಬಾನಿ ಮಕ್ಕಳು) ಹೀಗೆ ಭಾರತ ದೇಶವು ಸಾಗುತ್ತಿದೆ ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
Advertisement
ನೋಟು ನಿಷೇಧದಿಂದಾಗಿ ದೇಶದ ಅಭಿವೃದ್ಧಿ ದರ ಕಡಿಮೆಯಾಗಿದೆ. ಅವೈಜ್ಞಾನಿಕವಾಗಿ ಜಾರಿ ಮಾಡಿದ ಜಿಎಸ್ಟಿಯಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು 9 ವರ್ಷಗಳ ಕಾಲ ಯುಪಿಎ ಸರ್ಕಾರ ಮಾಡಿದ್ದ ಕೆಲಸವನ್ನು ಈಗಿನ ಮೋದಿ ಕೇವಲ 30 ದಿನಗಳಲ್ಲಿ ಹಾಳುಗೆಡವಿದೆ ಎಂದು ಹೇಳುವ ಮೂಲಕ ಟೀಕಿಸಿದರು.
Advertisement
ಕಾಂಗ್ರೆಸ್ ಸರ್ಕಾರ ಯಾವುದೇ ಯೋಜನೆ ಆರಂಭಿಸುವ ಮೊದಲು ಚರ್ಚಿಸುತಿತ್ತು. ಆದರೆ ಮೋದಿ ಸರ್ಕಾರ ಚರ್ಚೆ ನಡೆಸದೇ ಮೂಗಿನ ನೇರಕ್ಕೆ ಯೋಚಿಸಿ ಯೋಜನೆಗಳು ಆರಂಭಿಸುತ್ತಿದೆ ಎಂದು ಹೇಳುವ ಮೂಲಕ ವಾಗ್ದಳಿ ನಡೆಸಿದರು.
Advertisement
ಮೋದಿ ನನಗಿಂತ ಉತ್ತಮ ಮಾತುಗಾರ ಎನ್ನುವುದರಲ್ಲಿ ಸಂದೇಹ ಇಲ್ಲ. ಆದರೆ ಸುಮ್ಮನೆ ಮಾತನಾಡಿದರೆ ಏನು ಪ್ರಯೋಜನವಿಲ್ಲ. ಜನರ ಜೊತೆ ಸೇರಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
Our strength so far has been we have achieved all this peacefully. What can destroy our momentum is hatred, anger & politics of polarization
— Rahul Gandhi (@RahulGandhi) September 12, 2017
For everything anyone says about India,there's no democratic country in human history that has raised as many people out of poverty as India
— Rahul Gandhi (@RahulGandhi) September 12, 2017
The idea of ahimsa unites India's castes, religions &languages. An idea that Gandhi fashioned into a powerful but beautiful political weapon
— Rahul Gandhi (@RahulGandhi) September 12, 2017