ಲಕ್ನೋ: 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದು ಈಗಿನಿಂದಲೇ ಕಾರ್ಯತಂತ್ರ ನಡೆಸುತ್ತಿದೆ. ಇದಕ್ಕೆ ಪೂರಕ ಎಂಬಂತೆ ಉತ್ತರ ಪ್ರದೇಶ್ ಕಾಂಗ್ರೆಸ್ ಕಮೀಟಿ(ಯುಪಿಸಿಸಿ) ವಕ್ತಾರರ ಹುದ್ದೆಯನ್ನು ಬಯಸುವ ಮಂದಿಗೆ ದಿಢೀರ್ ಆಗಿ ಪರೀಕ್ಷೆ ನಡೆಸಿ ಅವರ ರಾಜಕೀಯ ಜ್ಞಾನವನ್ನು ಪತ್ತೆ ಹಚ್ಚಿದೆ.
ಗುರುವಾರ ನನ್ನ ರಕ್ತ, ಡಿಎನ್‍ಎಯಲ್ಲಿ ಕಾಂಗ್ರೆಸ್ ಇದೆ ಎಂದು ಹೇಳುತ್ತಿದ್ದವರು ಸೇರಿ ಒಟ್ಟು 70 ಮಂದಿ ಸ್ಥಳೀಯ ನಾಯಕರಿಗೆ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಮತ್ತು ರಾಷ್ಟ್ರಿಯ ಮಾಧ್ಯಮ ಸಂಯೋಜಕ ರಾಹುಲ್ ಗುಪ್ತಾ ಅವರ ಉಪಸ್ಥಿತಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ನಡೆಸುವ ಕುರಿತು ಯಾವುದೇ ಪೂರ್ವ ಮಾಹಿತಿಯನ್ನು ನೀಡಿದ ನಾಯಕರು ಆಶ್ಚರ್ಯಕರವಾಗಿ 14 ಪ್ರಶ್ನೆಗಳನ್ನು ನೀಡಿ ಪರೀಕ್ಷೆಯನ್ನು ನೀಡಿದ್ದಾರೆ.
ಪ್ರಮುಖವಾಗಿ ಪರೀಕ್ಷೆಯಲ್ಲಿ ಮೋದಿ ಸರ್ಕಾರದ ವೈಫಲ್ಯಗಳು ಯಾವುವು? ಮನಮೋಹನ್ ಸಿಂಗ್ ಸರ್ಕಾರದ ಸಾಧನೆಗಳು ಯಾವುವು? ಉತ್ತರ ಪ್ರದೇಶ ರಾಜ್ಯದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಿದೆ? ಅಲ್ಲದೇ ಎಷ್ಟು ವಿಭಾಗಗಳಾಗಿ ರಾಜ್ಯವನ್ನು ವಿಂಗಡಿಸಲಾಗಿತ್ತು ಎಂಬ ಪ್ರಶ್ನೆಗಳನ್ನು ನೀಡಲಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಯುವ ನಾಯಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಉದ್ದೇಶ ಹೊಂದಿದ್ದು. ಅಲ್ಲದೇ 2019 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆಯುಲು ಸಿದ್ಧತೆ ನಡೆಸುವ ಕುರಿತ ಪೂರ್ವಭಾವಿಯಾಗಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಬಳಿಕ ಮಹತ್ವದ ಬೆಳವಣಿಗೆ ಎಂಬಂತೆ ಪಕ್ಷದ ಹಿರಿಯ ನಾಯಕರು ಸಭೆ ನಡೆಸಿ ಚರ್ಚೆ ನಡೆಸಿದ್ದಾಗಿ ಯುಪಿಸಿಸಿ ಅಧ್ಯಕ್ಷ ರಾಜ್ ಬಬ್ಬರ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಪ್ರಿಯಾಂಕಾ ಚತುರ್ವೇದಿ, ಪಕ್ಷದಲ್ಲಿ ಇಂತಹ ಪರೀಕ್ಷೆಗಳು ಹೊಸದೇನು ಅಲ್ಲ. ಈ ಹಿಂದೆಯೂ ಇಂತಹ ಕಾರ್ಯಗಳನ್ನು ಕಾಂಗ್ರೆಸ್ ನಡೆಸಿದೆ. ಈಗ ನಾವು ಉತ್ತರ ಪ್ರದೇಶದಲ್ಲಿಯೂ ಸಹ ನಡೆಸಲಾಗಿದೆ. ಪರೀಕ್ಷೆಯಲ್ಲಿ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದೆಯೆಂದು ಹೇಳುವುದು ತಪ್ಪು. ವಕ್ತಾರರು ಉತ್ತರಿಸಲು ಸಾಧ್ಯವಾಗುವಂತಹ ಮೂಲಭೂತ ಪ್ರಶ್ನೆಗಳನ್ನು ಮಾತ್ರ ಕೇಳಲಾಗಿದೆ ಎಂದು ತಿಳಿಸಿದರು.
ಯಾವೆಲ್ಲಾ ಪ್ರಶ್ನೆ ಕೇಳಲಾಗಿತ್ತು?
– ಉತ್ತರ ಪ್ರದೇಶದಲ್ಲಿ ಎಷ್ಟು ಬ್ಲಾಕ್ ಗಳು ಮತ್ತು ವಲಯಗಳು ಇವೆ?
– ಲೋಕಸಭಾ ಚುನಾವಣೆಯಲ್ಲಿ ಯುಪಿ ಯಲ್ಲಿ ಎಷ್ಟು ಸ್ಥಾನಗಳನ್ನು ಹೊಂದಿದೆ.
– 2004 ಚುನಾವಣೆಯಲ್ಲಿ ಕಾಂಗ್ರೆಸ್ ಸರಾಸರಿ ಎಷ್ಟು ಮತ ಪಡೆದಿತ್ತು?
– ನೀವು ಪಕ್ಷದ ವಕ್ತಾರರಾಗಲು ಏಕೆ ಬಯಸುತ್ತೀರಿ?
– ಯೋಗಿ ಆದಿತ್ಯನಾಥ ಸರ್ಕಾರದ ವೈಫಲ್ಯಗಳು ಯಾವುವು?
– ಉತ್ತರ ಪ್ರದೇಶದಲ್ಲಿ ಎಷ್ಟು ವಿಧಾನಸಭಾ ಸ್ಥಾನಗಳಿದೆ?
ಪಕ್ಷದ ನಾಯಕರಿಗೆ ಕೇವಲ ಪ್ರಶ್ನೆಗಳು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಕುರಿತು ಮಾಹಿತಿಯನ್ನು ಪಡೆಯಲಾಗಿದ್ದು, ಟ್ವಿಟ್ಟರ್ ಖಾತೆಯನ್ನು ಹೊಂದಿದ್ದರಾ? ಹೊಂದಿಲ್ಲದಿದ್ದರೆ ಬಹುಬೇಗ ಖಾತೆ ತೆರೆಯಲು ಸಲಹೆಯನ್ನು ನೀಡಿದ್ದಾರೆ. ಪರೀಕ್ಷೆಯ ಕುರಿತು ಕೆಲ ಹಿರಿಯ ಮುಖಂಡರು ಪಕ್ಷದ ನಾಯಕರಿಗೆ ಮರು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದ್ದು. ಶಾಲೆಯ ಪರೀಕ್ಷಾ ವ್ಯವಸ್ಥೆಯ ಅಗತ್ಯತೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವೇ ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.
ಕಳೆದ ಕೆಲ ಹಿಂದೆಯಷ್ಟೇ ಉತ್ತರ ಪ್ರದೇಶ ಕಾಂಗ್ರೆಸ್ ತನ್ನ ಮಾಧ್ಯಮ ವಿಭಾಗ ಮತ್ತು ಅದಕ್ಕೆ ಸಂಬಂಧಿಸಿದ ಮೂರು ವಿಭಾಗವನ್ನು ವಿಸರ್ಜಿಸಿತ್ತು. 2014 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಲೋಕಾಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 22.3% ಮತ ಪಡೆದು ಕೇವಲ 2 ಸ್ಥಾನಗಳನ್ನು ಗೆದ್ದಿದ್ದರೆ. ಬಿಜೆಪಿ 42.6% ಮತ ಪಡೆದು 71 ಸ್ಥಾನ ಪಡೆದಿತ್ತು. ಉಳಿದಂತೆ ಸಮಾಜವಾದಿ ಪಕ್ಷ 2 ಸ್ಥಾನ ಪಡೆದರೆ, ಮತ್ತೊಂದು ಸ್ಥಾನವನ್ನು ಇತರೇ ಅಭ್ಯರ್ಥಿ ಗೆಲುವು ಪಡೆದಿದ್ದರು.