Connect with us

ಸಚಿವರು ಆಯ್ತು, ಈಗ ನಿಗಮ ಮಂಡಳಿ ಸದಸ್ಯರ ಫಾರಿನ್ ಟೂರ್!

ಸಚಿವರು ಆಯ್ತು, ಈಗ ನಿಗಮ ಮಂಡಳಿ ಸದಸ್ಯರ ಫಾರಿನ್ ಟೂರ್!

ಬೆಂಗಳೂರು: ಸಚಿವರ ಬಳಿಕ ಇದೀಗ ನಿಗಮ ಮಂಡಳಿ ಸದಸ್ಯರು ಫಾರಿನ್ ಶೋಕಿ ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ರೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಅಧ್ಯಕ್ಷರು, ನಿರ್ದೇಶಕರು ಫಾರಿನ್ ಟ್ರಿಪ್ ಮಾಡುತ್ತಿದ್ದಾರೆ.

ಸಹಕಾರಿ ಇಲಾಖೆ ಅಧ್ಯಯನದ ಹೆಸರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡ್ತಿದ್ದು, ಇಂದು ರಾತ್ರಿ ತೆರಳಲಿದ್ದಾರೆ. ಅಧ್ಯಕ್ಷರು, ಉಪಾಧ್ಯಕ್ಷರು, ಎಂಡಿ ನಿರ್ದೇಶಕರು ಸೇರಿ ಸುಮಾರು 22 ಜನ ಫಾರಿನ್ ಟ್ರಿಪ್ ಕೈಗೊಂಡಿದ್ದು ಇದ್ದಕ್ಕಾಗಿ ಸುಮಾರು 2 ಕೋಟಿಗಳಷ್ಟು ಹಣ ಖರ್ಚು ಮಾಡ್ತಿದ್ದಾರೆ ಎನ್ನುವ ವಿವರ ಪಬ್ಲಿಕ್ ಟಿವಿಗೆ ಸಿಕ್ಕಿದೆ.

ಪ್ರವಾಸದಲ್ಲಿ ಯಾರಿದ್ದಾರೆ?
ಅಧ್ಯಕ್ಷ ಶೇಖರಗೌಡ ಪಾಟೀಲ್, ಉಪಾಧ್ಯಕ್ಷ ಹೆಚ್.ವಿ ನಾಗರಾಜ್, ನಿರ್ದೇಶಕರು ಶಾಸಕ ಕೆ.ಎನ್.ರಾಜಣ್ಣ, ಎಸ್.ಟಿ ಸೋಮಶೇಖರ್, ಡಿಟಿ ಪಾಟೀಲ್, ಕೆ.ಎಂ.ಎಫ್ ಅಧ್ಯಕ್ಷ ನಾಗರಾಜ್, ಶಕುಂತಲಾ ಬೆಲ್ದಾಳೆ, ಶ್ರೀ ಸಿದ್ರಾಮರಡ್ಡಿ ವೀರನಗೌಡ ಪಾಟೀಲ, ಶಿವಕುಮಾರ್ ಎಸ್ ಪಾಟೀಲ್, ವಿಜಯ್ ಕುಮಾರ್ ಪಾಟೀಲ್, ಬಸವರಾಜ ಸುಲ್ರಾನ ಪುರಿ, ಭೋಜೇಗೌಡ, ಚಂದ್ರಪ್ಪ, ಗಂಗಣ್ಣ, ಗಿರೀಶ್, ವಿಷ್ಣು ನಾರಾಯಣ ಭಟ್, ಮನು ಮುತ್ತಪ್ಪ, ಆರ್ ಕೆ ಪಾಟೀಲ, ಚಂದ್ರಶೇಖರ್ ಎಸ್, ಎಸ್.ಎಸ್.ಬಿರಾದರ್, ಶ್ರೀ ದಾಸಯ್ಯ, ವ್ಯವಸ್ಥಾಪಕ ನಿರ್ದೇಶಕ ಆರ್.ಶ್ರೀಧರ್ ರಿಂದ ಪ್ರವಾಸ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಬರ ಇರುವಾಗ ಈ ಪ್ರವಾಸ ಯಾಕೆ ಎಂದು ಕೇಳಿದ್ದಕ್ಕೆ ಅಧ್ಯಕ್ಷ ಶೇಖರಗೌಡ ಪಾಟೀಲ್, ಬರ ಇದ್ರೆ ಹೋಗಬಾರದು ಅಂತ ಇಲ್ಲ. ನಾನು ರೈತರ ಮಗನಾಗಿದ್ದು ಸರ್ಕಾರ ಅನುಮತಿ ನೀಡಿದೆ. ದಕ್ಷಿಣ ಆಫ್ರಿಕಾದ ಸಹಕಾರ ಇಲಾಖೆ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡ್ತೀವಿ ಅಂತ ಹೇಳುವ ಮೂಲಕ ಪ್ರವಾಸವನ್ನು ಸಮರ್ಥಿಸಿದರು.

Advertisement
Advertisement