ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿಯ ದೇವರಕೊಂಡ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದಲಿತರನ್ನು ಮಾತನಾಡಿಸಿದ್ರೆ 500 ರೂಪಾಯಿ ದಂಡ. ದಲಿತರಿಗೆ ದಿನಸಿ ಸಾಮಾನು ನೀಡಿದ್ರೆ 1 ಸಾವಿರ ದಂಡ. ಬೈಕ್‍ನಲ್ಲಿ ಡ್ರಾಪ್ ಕೊಟ್ರೆ 1500 ರೂಪಾಯಿ ದಂಡ, 21 ನೇ ಶತಮಾನದಲ್ಲೂ ಈ ರೀತಿಯ ವ್ಯವಸ್ಥೆ ಇನ್ನೂ ಉಳಿದುಕೊಂಡಿದೆ.
Advertisement
ಹತ್ತು ದಿನಗಳ ಹಿಂದೆ ದಲಿತರ ಹಸುವಿನ ಕರು ಮೇಲ್ಜಾತಿಯವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಬೆಳೆಯನ್ನ ತಿಂದಿದೆ. ಇದೇ ವಿಷಯಕ್ಕೆ ದಲಿತರು ಮತ್ತು ಮೇಲ್ಜಾತಿಯವರ ಮಧ್ಯೆ ಜಗಳವಾಗಿದೆ. ಹೀಗಾಗಿ ಗ್ರಾಮದ ಹಿರಿಯರೆಲ್ಲ ಸೇರಿ ದಲಿತರಿಗೆ ಬಹಿಷ್ಕಾರ ಹಾಕಿದ್ದಾರೆ.
Advertisement
Advertisement
ಗ್ರಾಮದಲ್ಲಿ ದಲಿತರ ಮಕ್ಕಳಿಗೆ ಒಂದು ಲೋಟ ನೀರನ್ನೂ ಕೊಡ್ತಿಲ್ಲ. ದಿನಸಿ ಅಂಗಡಿಯಲ್ಲಿ ಒಂದು ಬೆಂಕಿಪೊಟ್ಟಣವನ್ನು ನೀಡ್ತಿಲ್ಲ. ಅಲ್ಲದೆ ದಲಿತರಿಗೆ ಯಾರೂ ಕೂಲಿ ಕೆಲಸ ಸಹ ನೀಡ್ತಿಲ್ಲ. ಹೀಗಾಗಿ ತುತ್ತು ಅನ್ನಕ್ಕೂ ಇಲ್ಲಿನ ದಲಿತರು ಪರದಾಡುವ ಸ್ಥಿತಿ ಎದುರಾಗಿದ್ದು, ಸಾಮೂಹಿಕವಾಗಿ ಅಡುಗೆ ತಯಾರಿಸಿ ಊಟ ಮಾಡ್ತಿದ್ದಾರೆ.