ಧಾರವಾಡ: ತುರ್ತು ಚಿಕಿತ್ಸೆ ಬೇಕಾದಾಗ ಅಥವಾ ಗರ್ಭಿಣಿಗೆಯರಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ 108ಕ್ಕೆ ಕರೆ ಮಾಡಿ ಅಂಬುಲೆನ್ಸ್ ಕರಿಸೋದು ಸಾಮಾನ್ಯ. ಅಂಬುಲೆನ್ಸ್ ಗೆ ಕರೆ ಮಾಡುವ ಮುಂಚೆ ಒಂದು ಟ್ರ್ಯಾಕ್ಟರ್‍ಗೆ ಕರೆ ಮಾಡಲೇಬೇಕಾದ ಪರಿಸ್ಥಿತಿ ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ ಎದುರಾಗಿದೆ.
ಹೌದು. ಧಾರವಾಡ ತಾಲೂಕಿನ ಸಿಂಗನಕೊಪ್ಪ ಗ್ರಾಮದಲ್ಲಿ ರಸ್ತೆ ಹಾಳಾಗಿ ಅಂಬುಲೆನ್ಸ್ ಹೋಗೋಕೆ ಆಗಲ್ಲ. ಇನ್ನು ಗ್ರಾಮಕ್ಕೆ ಅಂಬುಲೆನ್ಸ್ ಬಂದರೆ ಅದನ್ನ ಜಗ್ಗೋಕೆ ಒಂದು ಟ್ರ್ಯಾಕ್ಟರ್ ಬೇಕು.
ಕಳೆದ ಸೆಪ್ಟೆಂಬರ್ 7 ರಂದು ಸಿಂಗನಕೊಪ್ಪ ಗ್ರಾಮದ ಗರ್ಭಿಣಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಅಂಬುಲೆನ್ಸ್ ರಸ್ತೆ ಸರಿ ಇಲ್ಲದ ಕಾರಣ ರಾಡಿಯಲ್ಲಿ ಸಿಲುಕಿಕೊಂಡಿತ್ತು. ಇದನ್ನ ಜಗ್ಗೋಕೆ ಟ್ರ್ಯಾಕ್ಟರ್ ತರಿಸಿದರು.
ಗರ್ಭಿಣಿ ಕೂಡಾ ಅಂಬುಲೆನ್ಸ್‍ಗೆ ಜಗ್ಗುತಿದ್ದ ಟ್ರ್ಯಾಕ್ಟರ್ ಹಿಂದೆ ನಡೆದುಕೊಂಡು ಹೋದ ದೃಶ್ಯವನ್ನ ವಿಡಿಯೋ ಮಾಡಲಾಗಿದೆ. ಈ ರೀತಿ ರಸ್ತೆಗಳು ಹಾಳಾಗಿರೋದು ಸಚಿವ ಸಂತೋಷ್ ಲಾಡ್ ಅವರ ಕ್ಷೇತ್ರದಲ್ಲೇ. ದನ ಕಾಯುವ ಈ ಗವಳಿ ಜನರು ಎಷ್ಟೋ ವರ್ಷಗಳಿಂದ ಇದೇ ರೀತಿ ಪರದಾಟ ನಡೆಸಿದ್ದಾರೆ. ಆದರೆ ಇವರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ.