DistrictsKarnatakaLatestUncategorizedYadgir

ಯಾದಗಿರಿ; ಈ ಜಾತ್ರೆಯಲ್ಲಿ ಹೆಣ್ಣು ಗಂಡು ಭೇದವಿಲ್ಲದೇ ಗಾಂಜಾ ಸೇದ್ತಾರೆ

ಯಾದಗಿರಿ: ಜಿಲ್ಲೆಯ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಡೆಯುವ ಶ್ರೀ ಮೌನೇಶ್ವರ ಜಾತ್ರೆಯಲ್ಲಿ ಸಾಧು ಸಂತರು ಗಾಂಜಾ ಸೇದಿ ಅದರ ಗಮ್ಮತ್ತಿನಲ್ಲಿ ತೇಲಾಡುತ್ತಾರೆ.

ಯಾದಗಿರಿ; ಈ ಜಾತ್ರೆಯಲ್ಲಿ ಹೆಣ್ಣು ಗಂಡು ಭೇದವಿಲ್ಲದೇ ಗಾಂಜಾ ಸೇದ್ತಾರೆ

ಈ ದೇವಸ್ಥಾನದಲ್ಲಿ ಮಸೀದಿಯು ಐಕ್ಯವಾಗಿದೆ. ಹಾಗಾಗಿ ಜಾತ್ರೆಯಲ್ಲಿ ಎಲ್ಲ ಧರ್ಮದ ಜನರು ಭಾಗವಹಿಸುತ್ತಿರುವುದು ವಿಶೇಷ. ಜಾತ್ರೆಯ ಕೈಲಾಸ ಕಟ್ಟೆ ಎಂಬಲ್ಲಿ ಸಾಧು ಸಂತರ ಗಾಂಜಾ ಗಮ್ಮತ್ತು ನಡೆಯುತ್ತದೆ. ಕೈಲಾಸ ಮಂಟಪ ಹೆಸರಿನಂತೆ ಸಾಧುಗಳಿಗೆ ಈ ಸ್ಥಳ ಸ್ವರ್ಗ ಲೋಕ. ಇಲ್ಲಿಯೇ ಬಂದು ದೇವರ ಸ್ಮರಣೆ ಮಾಡುತ್ತಾ, ಗಾಂಜಾ ಸೇವಿಸುತ್ತಾ ಅವರದೇ ಲೋಕದಲ್ಲಿ ತೇಲಾಡುತ್ತಾರೆ.

ಯಾದಗಿರಿ; ಈ ಜಾತ್ರೆಯಲ್ಲಿ ಹೆಣ್ಣು ಗಂಡು ಭೇದವಿಲ್ಲದೇ ಗಾಂಜಾ ಸೇದ್ತಾರೆ

ಈ ಜಾತ್ರೆಯಲ್ಲಿ ರಾಜಾರೋಷವಾಗಿ ಎಗ್ಗಿಲ್ಲದೇ ಗಾಂಜಾ ಮಾರಾಟದ ಜೊತೆ ಭಕ್ತರು ಸಾಧುಗಳಿಗೆ ಗಾಂಜಾವನ್ನು ನೈವೈದ್ಯವಾಗಿ ನೀಡುತ್ತಾರೆ. ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.

ಯಾದಗಿರಿ; ಈ ಜಾತ್ರೆಯಲ್ಲಿ ಹೆಣ್ಣು ಗಂಡು ಭೇದವಿಲ್ಲದೇ ಗಾಂಜಾ ಸೇದ್ತಾರೆ

ಪ್ರತಿ ವರ್ಷ ನಡೆಯುವ ಜಾತ್ರೆಗೆ ದೇವರ ದರ್ಶನ ಪಡೆಯಲು ಬರುವ ಭಕ್ತರು ಸಹ ಈ ದುಶ್ಚಟಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ವಿಷಯ.ಜಾತ್ರೆಯಲ್ಲಿ ಗಾಂಜಾ ವಹಿವಾಟು ನಡೆಯುತ್ತಿರುವುದನ್ನು ಗಮನಕ್ಕೆ ತಂದರೂ ಜಿಲ್ಲಾಡಳಿತ ಕಡಿವಾಣ ಹಾಕಲು ವಿಫಲವಾಗಿದೆ.

ಯಾದಗಿರಿ; ಈ ಜಾತ್ರೆಯಲ್ಲಿ ಹೆಣ್ಣು ಗಂಡು ಭೇದವಿಲ್ಲದೇ ಗಾಂಜಾ ಸೇದ್ತಾರೆ

Related Articles

Leave a Reply

Your email address will not be published. Required fields are marked *