ವ್ಯಾಟಿಕನ್: ಕಳೆದ 18 ದಿನಗಳಿಂದ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣಕಾರಿ ದಾಳಿಯನ್ನು ವಿರೋಧಿಸಿ ಯುದ್ಧವನ್ನು ಕೊನೆಗೊಳಿಸಿ ಎಂದು ಪೋಪ್ ಫ್ರಾನ್ಸಿಸ್ ಇಂದು ಮನವಿ ಮಾಡಿದರು.
Advertisement
ಏಂಜೆಲಸ್ ಪ್ರಾರ್ಥನೆಯ ನಂತರ ಮಾತನಾಡಿದ ಅವರು, ನಾವು ವರ್ಜಿನ್ ಮೇರಿಗೆ ಪ್ರಾರ್ಥಿಸಿದ್ದೇವೆ. ಆಕೆಯ ಹೆಸರನ್ನು ಹೊಂದಿರುವ ನಗರವು ಮಾರಿಯುಪೋಲ್ ಉಕ್ರೇನ್ ನಾಶಪಡಿಸಿಕೊಳ್ಳಲು ಭೀಕರ ಯುದ್ಧ ನಡೆಯುತ್ತಿದೆ. ಪರಿಣಾಮ ಉಕ್ರೇನ್ ಹುತಾತ್ಮರ ನಗರವಾಗಿ ಮಾರ್ಪಟ್ಟಿದೆ ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ರಣಬೀರ್ ಕಪೂರ್ ಸ್ಪೆಷಲ್ ಸಾಂಗ್‍ಗೆ ರಶ್ಮಿಕಾ ಸ್ಟೆಪ್
Advertisement
Advertisement
ಮಕ್ಕಳು, ಮುಗ್ಧರು ಮತ್ತು ನಿರಾಯುಧ ನಾಗರಿಕರ ಬರ್ಬರ ಹತ್ಯೆ ಭಯಾನಕತೆಯನ್ನು ತಿಳಿಸುತ್ತೆ. ಪೂರ್ತಿ ನಗರಗಳನ್ನು ಸ್ಮಶಾನವಾಗಿ ಮಾಡುವ ಮೊದಲು ಅಪಾಯಕಾರಿ ಶಸ್ತ್ರಗಳನ್ನು ಕೊನೆಗೊಳಿಸಬೇಕು. ಮಕ್ಕಳು ಮತ್ತು ನಾಗರಿಕರನ್ನು ಕೊಲ್ಲುವ ‘ಅನಾಗರಿಕತೆ’ಯನ್ನು ನಾನು ಖಂಡಿಸುತ್ತೇನೆ. ದೇವರ ಹೆಸರಿನಲ್ಲಿ ಈ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಂಡರು.
Advertisement
ದೇವರ ಹೆಸರಿನಲ್ಲಿ, ನರಳುತ್ತಿರುವವರ ಕೂಗು ಎಲ್ಲರೂ ಕೇಳಲಿ. ಬಾಂಬ್ ದಾಳಿ ಮತ್ತು ಆಘಾತಕಾರಿ ದಾಳಿಗಳು ನಿಲ್ಲಲಿ. ಮಾನವೀಯತೆಯನ್ನು ಬೆಳಸಿಕೊಳ್ಳಲಿ. ದೇವರ ಹೆಸರಿನಲ್ಲಿ, ನಾನು ನಿಮ್ಮನ್ನು ಕೇಳುತ್ತೇನೆ, ಈ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ಕೇಳಿಕೊಂಡರು.
ದೇವರು ಶಾಂತಿಯ ದೇವರು ಮಾತ್ರ, ಅವನು ಯುದ್ಧದ ದೇವರಲ್ಲ. ಹಿಂಸೆಯನ್ನು ಬೆಂಬಲಿಸುವವರು ಅವನ ಹೆಸರನ್ನು ಅಪವಿತ್ರಗೊಳಿಸುತ್ತಾರೆ. ದೇವರು ಎಂದೂ ಯುದ್ಧ ಕೇಳುವುದಿಲ್ಲವೆಂದು ತಿಳಿಸಿದರು. ಇದನ್ನೂ ಓದಿ: ಹಾಲಿ ಎಂಎಲ್‍ಸಿ ಅರುಣ್ ಶಹಾಪುರ ವಿರುದ್ಧ ಅಸಮಾಧಾನ ಸ್ಪೋಟ…!