ಬೆಂಗಳೂರು: ಬೇರೆಯವರು ತಪ್ಪು ಮಾಡಿದರೆ ನೀವು ರಾಜೀನಾಮೆ ಕೇಳ್ತಿದ್ರಿ. ನಿಮ್ಮ ವಿಷಯದಲ್ಲಿ ಅದು ಇಲ್ಲ. ನಿಮ್ಮ ಕೇಸ್‌ನಲ್ಲಿ ನೀವೇ ಜಡ್ಜ್, ನೀವೇ ವಕೀಲರು ಆದರೆ ಬೇರೆ ಅವರ ಕೇಸ್‌ನಲ್ಲಿ ಜಡ್ಜ್ ಮೆಂಟ್ ಮಾತ್ರ ನೀವು ಕೊಡುತ್ತೀರಿ ಎಂದು ಆತ್ಮಸಾಕ್ಷಿ ಬಗ್ಗೆ ಮಾತಾಡಿದ್ದ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ (BJP) ನಾಯಕ ಸಿ ಟಿ ರವಿ (C T Ravi) ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಿದ್ದರಾಮಯ್ಯ (CM Siddaramaiah) ನೈತಿಕತೆ, ಆತ್ಮಸಾಕ್ಷಿ ಮಾತುಗಳನ್ನಾಡಿದ್ದಾರೆ. ಬಹಳ ಸಂತೋಷ ಸಂಗತಿ. ನಾನು ಸಮಾಜವಾದಿಗಳಿಗೆ ಆತ್ಮ, ಆತ್ಮಸಾಕ್ಷಿ ಇರೊಲ್ಲ ಅಂದುಕೊಂಡಿದ್ದೆ. ಸಿದ್ದರಾಮಯ್ಯಗೆ ಆತ್ಮ, ಆತ್ಮಸಾಕ್ಷಿ ಇದೇ ಅನ್ನೋದು ಸಂತೋಷ. ಯಾರು ಆತ್ಮ ಇದೆ ಎಂದು ನಂಬುತ್ತಾರೋ ಅವರು ಪರಮಾತ್ಮನನ್ನು ನಂಬಬೇಕು. ಜಗತ್ತಿನಲ್ಲಿ ಪರಮಾತ್ಮ ಮತ್ತು ಆತ್ಮಕ್ಕೆ ಮೋಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ
ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಳ್ಳು ಸಾಕ್ಷಿ ಸೃಷ್ಟಿ ಮಾಡಬಹುದು. ಪರಮಾತ್ಮನ ಬಳಿ ಸುಳ್ಳು ಸಾಕ್ಷಿ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಪರಮಾತ್ಮನ ಹತ್ತಿರ ನಾವೇನು ಒಳ್ಳೆಯದು ಮಾಡುತ್ತೇವೆ ಅದು ದಾಖಲಾಗುತ್ತೆ. ಏನು ತಪ್ಪು ಮಾಡಿದ್ದೀವೋ ಅದು ದಾಖಲಾಗುತ್ತೆ. ಸಿಎಂ ಅವರು ನಿಜವಾಗಿ ಆತ್ಮ ಇದೆ, ಪರಮಾತ್ಮ ಇದ್ದಾನೆ ಎಂದು ಒಪ್ಪಿಕೊಳ್ಳೋದಾದ್ರೆ ಸುಳ್ಳಿನ ಸಮರ್ಥನೆಗೆ ಇಳಿಯುತ್ತಿರಲಿಲ್ಲ. ಅಪವಾದ ಬಂದ ದಿನವೇ ರಾಜೀನಾಮೆ ಕೊಡುತ್ತಿದ್ದಿರಿ ಎಂದು ಸಿಎಂ ಆತ್ಮಸಾಕ್ಷಿ ಮಾತಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: Breaking | ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್
ಆತ್ಮಸಾಕ್ಷಿ ಮಾತಾಡುವವರದ್ದು ಸಮಾಜವಾದಿಗಳ ಆತ್ಮ. ಪರಮಾತ್ಮನನ್ನ ನಂಬದೇ ಇರೋದ್ರೀಂದ ನೀವು ಸಮಾಜವಾದಿ ಹೌದೋ ಅಲ್ಲವೋ ಎಂದು ನಾನು ತೀರ್ಮಾನ ಕೊಡುವುದಿಲ್ಲ. ಆತ್ಮಸಾಕ್ಷಿಗೆ ನಡೆದುಕೊಳ್ಳುವ ಹಾಗಿದ್ರೆ ನೀವು ರಾಜೀನಾಮೆ ಕೊಡ್ತಿದ್ರಿ ಎಂದರು. ಇದನ್ನೂ ಓದಿ: ಅಶೋಕ್ ಹೆಗಲ ಮೇಲೆ ಬಂದೂಕು ಇಟ್ಟು ಸಿದ್ದರಾಮಯ್ಯ ಕಡೆ ಗುರಿ ಹೊಡೆದಿದ್ದಾರೆ- ಸಿಟಿ ರವಿ
ನೈತಿಕ ಮೌಲ್ಯಗಳನ್ನ ಎತ್ತಿಹಿಡಿಯೋ ರಾಜಕಾರಣಿ ಆಪಾದನೆ ಬಂದಾಗ ರಾಜೀನಾಮೆ ಕೊಡ್ತಾನೆ. ಎಫ್‌ಐಆರ್ ರಿಜಿಸ್ಟರ್ ಆದಾಗಲೂ ಇವರು ರಾಜೀನಾಮೆ ಕೊಡದೇ ಹೋದರೆ ನೈತಿಕತೆಗೂ ಇವರಿಗೂ ಸಂಬಂಧವಿಲ್ಲ. `ಯಾಕ್ರಿ ಸೈಟ್ ವಾಪಸ್ ಕೋಡಬೇಕು. 62 ಕೋಟಿ ರೂ. ಕೊಡಿ` ಅಂತ ಕೇಳಿದ್ದು ಸಿದ್ದರಾಮಯ್ಯ ಅವರೇ. ಈಗ ನೀವು ಕೇಳಿ 62 ಕೋಟಿ ರೂ. ಸಿಕ್ತಾ ಅಂತ ಸಿಎಂ ಗೆ ಕೇಳಿ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅ.9ರವರೆಗೆ ಅತ್ಯಧಿಕ ಮಳೆ – ಯೆಲ್ಲೋ ಅಲರ್ಟ್ ಘೋಷಣೆ
ಸಿಎಂ ಅವರು 2011 ಮತ್ತು 2020 ರಲ್ಲಿ ಯಡಿಯೂರಪ್ಪ ( B S Yediyurappa) ಅವರ ವಿಚಾರದಲ್ಲಿ ರಾಜೀನಾಮೆ ಕೇಳುವಾಗ ಯಾವ ಭಾವ, ಯಾವ ಮಾತಿತ್ತು ಇವತ್ತು ಅದನ್ನ ಅವರು ಅಳವಡಿಕೆ ಮಾಡಿಕೊಳ್ಳಲಿ. ನಾನು ಬೇರೆ ಅವರಿಗೆ ಉಪದೇಶ ಮಾಡೋಕೆ ಮಾತ್ರ. ನನ್ನ ವಿಷಯ ಬಂದಾಗ ನಾನೇ ಜಡ್ಜ್ ಅನ್ನೋ ಮನೋಭಾವದಿಂದ ಹೊರಗೆ ಬರಲಿ. ಇಂತಹರು ಆತ್ಮಸಾಕ್ಷಿ ಬಗ್ಗೆ ಮಾತಾಡೋದು ಬೇಡ. ನಾನು ಕ್ಲೀನ್ ಅಂತ ಸರ್ಟಿಫಿಕೇಟ್ ಕೊಟ್ಟುಕೊಳ್ಳೋದು ಬೇಡ. ಕ್ಲೀನ್ ಅಂತ ಹೇಳಿಕೊಳ್ಳೋರು ರಾಜೀನಾಮೆ ಕೊಟ್ಟು ಸಾಬೀತು ಆಗಲಿ ಎಂದು ಹೇಳ್ತಾರೆ. ಯಾವುದೇ ತನಿಖೆಗೂ ನಾನು ಸಿದ್ಧ. ಇಡಿ, ಸಿಬಿಐ ಯಾವುದೇ ಬರಲಿ ನಾನು ತನಿಖೆಗೆ ಸಿದ್ಧ ಎಂದು ಹೇಳುತ್ತಾರೆ. ಎಫ್‌ಐಆರ್ ಆಗುತ್ತಿದ್ದಂತೆ ಒಂದೊಂದು ಟೋನ್ ನಲ್ಲಿ ಮಾತಾಡೋದು ಬೇಡ. ಅಂಗೈ ಹುಣ್ಣಿಗೆ ಕನ್ನಡಿಬೇಡಿ. 2011 ಮತ್ತು 2020 ರಲ್ಲಿ ಸಿದ್ದರಾಮಯ್ಯ ಏನು ಹೇಳಿದ್ರೋ ಅದು ಪಾಲನೆ ಮಾಡಿದ್ರೆ ಅದು ಆತ್ಮಸಾಕ್ಷಿ. ಪಾಲಿಸದೇ ಹೋದರೆ ಅದು ಆತ್ಮ ವಂಚನೆ. ಈಗ ಅವರು ಮಾಡುತ್ತಿರುವ ರಾಜಕೀಯ ಆತ್ಮ ವಂಚನೆ ರಾಜಕಾರಣ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲೆಬನಾನ್ ಮೇಲೆ ಇಸ್ರೇಲ್ ಆಕ್ರಮಣ ತೀವ್ರ – ಹಿಜ್ಬುಲ್ಲಾ ಸಂಘಟನೆಯ 15 ಮಂದಿ ಹತ್ಯೆ!