ಗಡಿ ಜಿಲ್ಲೆ ಕೋಲಾರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಪೆಟ್ರೋಲ್, ಡೀಸೆಲ್ ಸಾಗಾಟ

Public TV
1 Min Read
PETROL DIESEL SMUGGLING

ಕೋಲಾರ: ಆಂಧ್ರಪ್ರದೇಶದ (Andhra Pradesh) ರಾಜ್ಯಕ್ಕೆ ಹೊಂದಿಕೊಂಡಿರುವ ಕೋಲಾರ (Kolar) ಜಿಲ್ಲೆಯಲ್ಲಿ ಅಕ್ರಮ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಮಾಫಿಯಾ ಸಖತ್ ಸದ್ದು ಮಾಡುತ್ತಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Srinivaspura) ಹಾಗೂ ಮುಳಬಾಗಿಲು (Mulabagilu) ತಾಲೂಕಿನಲ್ಲಿ ಎಗ್ಗಿಲ್ಲದೆ ಈ ಮಾಫಿಯಾ ಸದ್ದು ಮಾಡುತ್ತಿದೆ. ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾಫಿಯಾ (Mafia) ಜೋರಾಗಿದ್ದು, ಗಡಿಯ ಪೆಟ್ರೋಲ್ ಬಂಕ್‌ಗಳಿಂದ ಆಂಧ್ರಪ್ರದೇಶಕ್ಕೆ ಪೆಟ್ರೋಲ್ ಡೀಸೆಲ್ ಸಾಗಾಟ ಮಾಡಲಾಗುತ್ತಿದೆ. ಇದನ್ನೂ ಓದಿ: ನೂರು ಕೋಟಿ ಕ್ಲಬ್ ಸೇರಿದ ಚುನಾವಣೆ ಅಕ್ರಮ- ಹಣಕ್ಕಿಂತ ಕುಕ್ಕರ್, ತವಾಗಳದ್ದೇ ಮೇಲುಗೈ

petrol smuggling

ಆಂಧ್ರದಲ್ಲಿ ಡೀಸೆಲ್ ಬೆಲೆ ಹೆಚ್ಚಾಗಿರುವ ಕಾರಣ ಕರ್ನಾಟಕದ (Karnataka) ಬಂಕ್‌ಗಳಿಂದ ಅಕ್ರಮವಾಗಿ ಪ್ರತಿನಿತ್ಯ ನೂರಾರು ಲೀಟರ್ ಟ್ರಾಕ್ಟರ್, ಟ್ಯಾಂಕರ್ ಹಾಗೂ ಡ್ರಮ್‌ಗಳಲ್ಲಿ ರಾತ್ರೋರಾತ್ರಿ ಸಾಗಾಟ ಮಾಡಲಾಗುತ್ತಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪ್ರಭಾವಿ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಅಕ್ರಮ ಪೆಟ್ರೋಲ್, ಡೀಸೆಲ್ ಸಾಗಾಟಕ್ಕೆ ಪೊಲೀಸರ ಕುಮ್ಮಕ್ಕು ಸಿಕ್ಕಿದೆ. ಇದನ್ನೂ ಓದಿ: ಬೀದರ್‌ನಲ್ಲಿ 1 ಕೋಟಿ 50 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ

ಹಾಗಾಗಿ ರಾಯಲ್ಪಾಡು ಪೊಲೀಸರ ಕುಮ್ಮಕ್ಕಿನಿಂದಲೇ ಇಷ್ಟೆಲ್ಲಾ ನಡೆಯುತ್ತಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಆಂಧ್ರಪ್ರದೇಶದ ಸರ್ಕಾರದಲ್ಲಿರುವ ಪ್ರಭಾವಿ ನಾಯಕರು ತಮ್ಮ ಗುತ್ತಿಗೆ ಕಾಮಗಾರಿಗಳಿಗೆ ಹೀಗೆ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿ ಮಾಡುತ್ತಿದ್ದಾರೆ ಎನ್ನುವುದು ಜಗಜ್ಜಾಹೀರಾಗಿದೆ. ಇದನ್ನೂ ಓದಿ: ಪೊಲೀಸರ ಬಂಧನದಿಂದ ಎಸ್ಕೇಪ್ ಆಗಿದ್ದ ಅಮೃತ್‌ಪಾಲ್ ಸಿಂಗ್‌ನ ಆಪ್ತ ಸಹಾಯಕ ಅರೆಸ್ಟ್ 

ಹಾಗಾಗಿ ಇದರಲ್ಲಿ ಕೆಲ ಅಧಿಕಾರಿಗಳು ಶಾಮೀಲಾಗಿದ್ದು, ನಿತ್ಯ ಸಾವಿರಾರು ಲೀಟರ್ ಪೆಟ್ರೋಲ್, ಡೀಸೆಲ್ ಸಾಗಾಟ ಮಾಡುತ್ತಿದ್ದರೂ ಕೋಲಾರದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎನ್ನುವ ಆರೋಪ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಇದನ್ನೂ ಓದಿ: ಬಿಜೆಪಿ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಗಲಾಟೆ – ಮಾರಕಾಸ್ತ್ರ ಹಿಡಿದು ಎರಡು ಗುಂಪುಗಳು ಹೊಡೆದಾಟ

Share This Article