ಬೆಳಗಾವಿ: ಅಭಿವೃದ್ಧಿ ದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲಾ ವಿಭಜನೆ ಆಗಬೇಕು. ಆದರೆ ಜಿಲ್ಲೆಯ ಎಲ್ಲ ನಾಯಕರ ಸಹಮತದ ಆಧಾರದ ಮೇಲೆ ಜಿಲ್ಲಾ ವಿಭಜನೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮತ್ತೆ ಮುನ್ನೆಲೆಗೆ ಬಂದ ಬೆಳಗಾವಿ ಜಿಲ್ಲಾ ವಿಭಜನೆ ಕೂಗು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಹೇಳಿಕೆ ಬೆನ್ನಲ್ಲೆ ಜಿಲ್ಲಾ ವಿಭಜನೆ ಆಗಬೇಕೆಂದು ಸಚಿವೆ ಒತ್ತಾಯಿಸಿದರು.
Advertisement
Advertisement
ಮಾಜಿ ಸಚಿವ ಪ್ರಕಾಶ ಹುಕ್ಕೇರಿ, ನಾನು ಹೇಳ್ತಿದ್ದೇನೆ ಎಂಬ ಕಾರಣಕ್ಕೆ ವಿಭಜನೆ ಬೇಡ. ಜಿಲ್ಲಾ ವಿಭಜನೆ ಸಂಬಂಧ ಸರ್ಕಾರ ಮಟ್ಟದಲ್ಲಿ ಹಂತಹಂತವಾಗಿ ಚರ್ಚೆ ನಡೆಯಲಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಾಯಕರು ಕ್ರಮ ಜರುಗಿಸುತ್ತೇವೆ ಎಂದು ಹೆಬ್ಬಾಳ್ಕರ್ ಹೇಳಿದರು. ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್ ಮುಕ್ತಾಯ : ಡಿಕೆಶಿ ಎಪಿಸೋಡ್ ಲಾಸ್ಟ್
Advertisement