ಚೆನ್ನೈ: 8ನೇ ತರಗತಿ ಓದುತ್ತಿರುವ ಇಬ್ಬರು ಹುಡುಗಿಯರು ರೆಸ್ಟೋರೆಂಟ್ ವೊಂದರ ನಾಲ್ಕನೇ ಮಹಡಿಯಿಂದ ಜಿಗಿದಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಖಾಸಗಿ ಶಾಲೆಯಲ್ಲಿ ಈ ಇಬ್ಬರು ಹುಡುಗಿಯರು 8ನೇ ತರಗತಿ ಓದುತ್ತಿದ್ದರು. ಈ ಇಬ್ಬರು ಗೆಳತಿಯರು ಆತ್ಮೀಯ ಗೆಳತಿಯರು ಹಾಗೂ ತುಂಬ ಸಲುಗೆಯಿಂದ ಇದ್ದರು. ಇದ್ದನ್ನು ನೋಡಿದ ಅವರ ಶಿಕ್ಷಕಿ ಇಬ್ಬರು ಸಲುಗೆಯಿಂದ ಇರುವುದು ಸೂಕ್ತವಲ್ಲ ಎಂದು ಇಬ್ಬರು ನಿಮ್ಮ ಪೋಷಕರನ್ನು ಕರೆದುಕೊಂಡು ಬನ್ನಿ ಎಂದು ಹೇಳಿದ್ದಾರೆ.
Advertisement
ಶುಕ್ರವಾರ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿಯರು ಸಂಜೆ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಮಕ್ಕಳು ಮನೆಗೆ ಬಾರದೇ ಇದ್ದಿದರಿಂದ ಭಯಗೊಂಡ ಪೋಷಕರು ಪಲಪತ್ತಿಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
ಅಗ್ರಹಾರದ ಎರಡನೇ ರಸ್ತೆಯಲ್ಲಿರುವ ರೆಸ್ಟೋರೆಂಟ್ ಹತ್ತಿರ ಇಬ್ಬರು ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿದ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಬ್ಬರು ಹುಡುಗಿರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೊತ್ತೊಬ್ಬ ಹುಡುಗಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.