ಬೆಂಗಳೂರು: ನಗರದಲ್ಲಿ ಗುಂಡಿ ಮುಚ್ಚಳಕ್ಕೆ ಡೆಡ್‌ಲೈನ್ ಮುಗಿದಿದ್ದರೂ ವೈಟ್ ಟಾಪಿಂಗ್ (White Topping) ಕಾಮಗಾರಿ ಮುಕ್ತಾಯ ಆಗುತ್ತಿಲ್ಲ ಎಂದು ಸೌರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈಟ್ ಟಾಪಿಂಗ್ ಕಾಮಗಾರಿ ತಡ ಆಗುವುದಕ್ಕೆ ಪೊಲೀಸ್ ಇಲಾಖೆ, ಬೆಸ್ಕಾಂ (BESCOM), ಜಲಮಂಡಳಿ (BWSSB) ಮೇಲೆ ಬಿಬಿಎಂಪಿಯವರು (BBMP) ಗೂಬೆ ಕೂರಿಸುತ್ತಿದ್ದಾರೆ. ಈ ಕಾಮಗಾರಿ ತಡ ಆಗುವುದಕ್ಕೆ ಸಾರ್ವಜನಿಕರ ಸಮಸ್ಯೆ ಆಗುತ್ತಿದೆ. ಈ ಹಿನ್ನೆಲೆ ಇಲಾಖೆಗಳ ಜೊತೆ ಸಮನ್ವಯ ಸಾಧಿಸಲು ಮನೀಷ್ ಮೌದ್ಗಿಲ್ (Manish Mudgal) ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು, ಮುಂದಿನ ವಾರದಲ್ಲಿ ಮತ್ತೆ ಏಳು ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಲಿದೆ.ಇದನ್ನೂ ಓದಿ: ಪ್ರಪಂಚದಾದ್ಯಂತ ಈ ವರ್ಷ ಡೆಂಗ್ಯೂ ಪ್ರಕರಣ ಹೆಚ್ಚಳ – ಕಾರಣವೇನು?
Advertisement
Advertisement
ಒಟ್ಟು 90ಕ್ಕೂ ಹೆಚ್ಚು ರಸ್ತೆಗಳಲ್ಲಿ ಬಿಬಿಎಂಪಿ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಮಾಡಲು ಮುಂದಾಗಿದೆ. ಈಗಾಗಲೇ ಚಿಕ್ಕಪೇಟೆ, ರಾಜ್‌ಕುಮಾರ್ ರಸ್ತೆ ಸೇರಿದಂತೆ ಹಲವು ಕಡೆ ವೈಟ್ ಟಾಪಿಂಗ್ ಆರಂಭ ಮಾಡಿ 100 ದಿನ ಕಳೆದರೂ ಕಾಮಗಾರಿ ಮುಕ್ತಾಯ ಆಗಿಲ್ಲ. ನೀಡಿದ್ದ ಕಾಲಾವಕಾಶ ಮುಗಿದರೂ ಇನ್ನು ಕಾಮಗಾರಿ ಕೆಲಸ ಮುಗಿದಿಲ್ಲ. ಇದರಿಂದಾಗಿ ಚಿಕ್ಕಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆ, ವ್ಯಾಪಾರಕ್ಕೆ ಸಮಸ್ಯೆ, ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ.
Advertisement
ಬಿಬಿಎಂಪಿ ಮುಖ್ಯ ಮಾತನಾಡಿ, ಆಯುಕ್ತರು ವೈಟ್ ಟಾಪಿಂಗ್ ಕಾಮಗಾರಿ ತಡ ಆಗುವುದಕ್ಕೆ ಪೊಲೀಸ್ ಇಲಾಖೆ, ಜಲಮಂಡಳಿ ಹಾಗೂ ಬೆಸ್ಕಾಂ ಕಾರಣ ಎಂದು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಬದಲಿ ಮಾರ್ಗ ನೀಡಲ್ಲ, ಜಲಮಂಡಳಿ ಪೈಪ್ ಮಾಹಿತಿ ನೀಡಲ್ಲ ಈ ಕಾರಣದಿಂದಾಗಿ ತಡ ಆಗುತ್ತಿದೆ. ಇಲಾಖೆಗಳ ಜೊತೆ ಸಮನ್ವಯ ಸಾದಿಸಲು ಬಿಬಿಎಂಪಿ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದಾರೆ.
Advertisement
ಹೆಣ್ಣೂರು ಜಂಕ್ಷನ್, ತುಮಕೂರು ರಸ್ತೆಯ (Tumkuru Road) ಎಂಇಎ ಮುಖ್ಯ ರಸ್ತೆ, ರಾಜ್‌ಕುಮಾರ್ ರಸ್ತೆಯ (Rajkumar Road) ಒಳಭಾಗದ ರಸ್ತೆಗಳು, ಮಹಾದೇವಪುರ, ಪಶ್ಚಿಮ ವಲಯದ ಹಲವು ಪ್ರದೇಶದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭ ಆಗಲಿದ್ದು, ಟ್ರಾಫಿಕ್ ಸಮಸ್ಯೆ ಆಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಒಟ್ಟಾರೆ ವೈಟ್ ಟಾಪಿಂಗ್ ರಸ್ತೆ ಮಾಡುವುದು ಒಳ್ಳೆಯದೇ ಆದರೆ ಕೊಟ್ಟಿರುವ ಸಮಯದ ಒಳಗಡೆ ಮುಗಿಸಬೇಕು. ಇಲ್ಲದೇ ಇದ್ದರೆ ಸಾರ್ವಜನಿಕರಿಗೆ ಸಮಸ್ಯೆ ಆಗಲಿದೆ. ಈಗಾಗಿ ಡೆಡ್‌ಲೈನ್ (DeadLine) ಒಳಗಡೆ ವೈಟ್ ಟಾಪಿಂಗ್ ಕಾಮಗಾರಿ ಮುಗಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿ ಮಾಡಿಕೊಡುತ್ತಾರಾ ಎನ್ನುವುದು ಕಾದು ನೋಡಬೇಕಿದೆ.ಇದನ್ನೂ ಓದಿ: ಇರಾನ್‌ನಿಂದ ಕ್ಷಿಪಣಿ ದಾಳಿ – ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು, ಟರ್ಕಿಯಲ್ಲಿ ಲ್ಯಾಂಡಿಂಗ್