ದಕ್ಷಿಣ ಭಾರತದ ಸ್ಟಾರ್ ವಿಜಯ್ ದೇವರಕೊಂಡ ಸದ್ಯ ಲೈಗರ್ ಸಿನಿಮಾ ವಿಚಾರವಾಗಿ ಸಖತ್ ಸದ್ದು ಮಾಡ್ತಿದ್ದಾರೆ. ಜತೆಗೆ ಇತ್ತೀಚೆಗಷ್ಟೇ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿ, ಸಾಕಷ್ಟು ವಿಚಾರಗಳ ಬಗ್ಗೆ ವಿಜಯ್ ಮನಬಿಚ್ಚಿ ಮಾತನಾಡಿದ್ದಾರೆ. ಇನ್ನು ವೇಳೆ ರಶ್ಮಿಕಾ ಜತೆಗಿನ ರಿಲೇಶನ್ಶಿಪ್ ಬಗ್ಗೆ ಮಾತನಾಡಿದ್ದಾರೆ.
ಟಾಲಿವುಡ್ನ ಸಿನಿಮಾಗಳಲ್ಲಿ ಸ್ಟಾರ್ ಜೋಡಿಗಳಾಗಿ ಗುರುತಿಸಿಕೊಂಡಿರುವ ವಿಜಯ್ ಮತ್ತು ರಶ್ಮಿಕಾ ಮಧ್ಯೆ ಎನೋ ಸಂಥಿಂಗ್ ಸಂಥಿಂಗ್ ಇದೆ ಅಂತಾ ಗುಸು ಗುಸು ಸುದ್ದಿಯಾಗುತ್ತಿದೆ. ಇದೇ ಪ್ರಶ್ನೆಯನ್ನ ಕರಣ್ ಜೋಹರ್ ಕೂಡ ವಿಚಾರಿಸಿದ್ದಾರೆ. ಅದಕ್ಕೆ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದು, `ರಶ್ಮಿಕಾ ನನ್ನ ಡಾರ್ಲಿಂಗ್’ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ. ಇದನ್ನೂ ಓದಿ:ಸಿದ್ದು ಮೂಸೆ ವಾಲಾ ಮುಖವನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡ ತಂದೆ
Advertisement
ನಾನು ರಶ್ಮಿಕಾ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ರಶ್ಮಿಕಾ ನನ್ನ ಡಾರ್ಲಿಂಗ್. ಅವರನ್ನ ನಾನು ತುಂಬಾ ಇಷ್ಟಪಡುತ್ತೇನೆ. ನನಗೆ ರಶ್ಮಿಕಾ ನಿಜವಾಗಿಯೂ ಒಳ್ಳೆಯ ಸ್ನೇಹಿತೆ. ಚಲನಚಿತ್ರಗಳಲ್ಲಿ ಅಭಿನಯಿಸುವಾಗ ನಮ್ಮ ಮಧ್ಯೆ ಉತ್ತಮ ಬಂಧ ಸೃಷ್ಟಿಯಾಯಿತು. ಸಾಮಾನ್ಯವಾಗಿ ಓರ್ವ ಹುಡುಗಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೂ ನಾನು ತುಂಬಾ ಸಮಯ ತೆಗೆದುಕೊಳ್ಳುತ್ತೇನೆ. ಆದರೆ, ಚಿತ್ರೀಕರಣದ ಸಮಯದಲ್ಲಿ ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯಿತು ಎಂದಿದ್ದಾರೆ.
Advertisement
ವಿಜಯ್ ದೇವರಕೊಂಡ ರಿಲೇಷನ್ಶಿಪ್ ಸ್ಟೇಟಸ್ ಕೇಳಿದಾಗ, ಒಂದಲ್ಲಾ ಒಂದು ದಿನ ನನಗೆ ಮದುವೆಯಾಗಿ, ಮಕ್ಕಳಾಗುತ್ತದೆ. ಆ ದಿನ ನನ್ನ ಪಾರ್ಟರ್ ಬಗ್ಗೆ ಜೋರಾಗಿ ಹೇಳುತ್ತೇನೆ. ಅಲ್ಲಿಯವರೆಗೂ ನನ್ನನ್ನು ಇಷ್ಟಪಡುವವರಿಗೆ ನಾನು ನೋವು ಕೊಡಬಾರದು. ಎಲ್ಲರೂ ಇಷ್ಟೊಂದು ಪ್ರೀತಿ ಕೊಡುವಾಗ ನಾನು ಇನ್ನೊಬ್ಬರೊಂದಿಗೆ ರಿಲೇಷನ್ಶಿಪ್ನಲ್ಲಿದ್ದೇನೆ ಎಂದು ಹೇಳಲು ಬಯಸುವುದಿಲ್ಲ ಎಂದು ಮಾತನಾಡಿದ್ದಾರೆ. ಕಡೆಗೂ ತಮ್ಮ ಲವ್ ಲೈಫ್ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನಲಿಲ್ಲ.