ಕಾಂಗ್ರೆಸ್ ಅವಧಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿಯಿಲ್ಲ – ರಕ್ಷಣಾ ಸಚಿವಾಲಯ

surgical strike

ನವದೆಹಲಿ: ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವುದೇ ಸುಳಿವುಗಳು ನಮಗೆ ದೊರೆತಿಲ್ಲ ಎಂದು ಭಾರತದ ರಕ್ಷಣಾ ಸಚಿವಾಲಯ (ಎಂ.ಒ.ಡಿ) ಸ್ಪಷ್ಟಪಡಿಸಿದೆ.

ಕಾಶ್ಮೀರ ಮೂಲದ ರೋಹಿತ್ ಚೌಧರಿ ಎಂಬವರು ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.) ಯ ಆಡಿಯಲ್ಲಿ 2004 ರಿಂದ 2014ರ ವರೆಗೆ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿ ನೀಡಬೇಕು ಎಂದು ರಕ್ಷಣಾ ಸಚಿವಾಯಲಕ್ಕೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಇಂದು ಉತ್ತರಿಸಿರುವ ಸಚಿವಾಲಯ, 2004 ರಿಂದ 2014ರ ವರೆಗೆ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಮಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ ಎಂದು ಹೇಳಿದೆ.

MOD

2016 ಸೆಪ್ಟಂಬರ್ 29 ರಂದು ಉತ್ತರ ಕಾಶ್ಮೀರದ ಉರಿಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಿಟ್ಟರೆ ನಮಗೆ 2004 ರಿಂದ 2014ರ ಅವಧಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವ ರೀತಿಯ ಮಾಹಿತಿಗಳೂ ಸಿಕಿಲ್ಲ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ರೋಹಿತ್ ಚೌಧರಿ, ಕಾಂಗ್ರೆಸ್ ನಾಯಕರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಯುಪಿಎ ಆಡಳಿತದ ಅವಧಿಯಲ್ಲಿ ಯಾವುದೇ ಸರ್ಜಿಕಲ್ ಸ್ಟ್ರೈಕ್ ಆಗಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಇತ್ತೀಚೆಗೆ ತಮ್ಮ ಆಡಳಿತದ ಅವಧಿಯಲ್ಲಾದ 6 ಸರ್ಜಿಕಲ್ ಸ್ಟ್ರೈಕ್‍ಗಳ ಬಗ್ಗೆ ಚಿತ್ರಗಳ ಸಮೇತ ವಿವರಗಳನ್ನು ಬಿಡುಗಡೆ ಮಾಡಿತ್ತು. ನಮ್ಮ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್‍ಗಳು ನಡೆದಿವೆ. ಆದರೆ ನಾವು ಅದನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಅವರಿಗೆ ಟಾಂಗ್ ನೀಡಿದ್ದರು.

Modi2

ಇದಕ್ಕೆ ಪ್ರತಿಕ್ರಿಸಿದ ಮೋದಿ ಸಮಾವೇಶವೊಂದರಲ್ಲಿ ಕಾಂಗ್ರೆಸ್‍ನವರು ಕಾಗದ ಚೂರು ಮತ್ತು ವಿಡಿಯೋ ಗೇಮ್‍ಗಳಲ್ಲಿ ಮಾತ್ರ ಸರ್ಜಿಕಲ್ ಸ್ಟ್ರೈಕ್ ಮಾಡಬಲ್ಲರು ಎಂದು ಕುಟುಕಿದ್ದರು. ಇದನ್ನು ಓದಿ: ಕಾಂಗ್ರೆಸ್ ಪೇಪರ್‌ನಲ್ಲಿ ಮಾತ್ರ ಸರ್ಜಿಕಲ್ ಸ್ಟ್ರೈಕ್ ಮಾಡಿ ಮೀಟೂ ಅಂತ ಹೇಳ್ತಿದೆ: ಮೋದಿ

Comments

Leave a Reply

Your email address will not be published. Required fields are marked *