ನವದೆಹಲಿ: ಮಹಿಳೆಯೊಬ್ಬಳು ತನ್ನ ನೆರೆಮನೆಯ ಮಹಿಳೆಯೊಂದಿಗೆ ಜಗಳವಾಡಿದ್ದು, ಅದಕ್ಕೆ ಸೇಡು ತೀರಿಸಿಕೊಳ್ಳಲು ಆಕೆಯ 2 ವರ್ಷದ ಮಗನನ್ನು ಕೊಲೆ ಮಾಡಿರೋ ಘಟನೆ ದೆಹಲಿಯ ಉತ್ತಾಮ್‍ನಗರದಲ್ಲಿ ಶುಕ್ರವಾರದಂದು ನಡೆದಿದೆ.
ಆರೋಪಿ ಮಹಿಳೆ ಎರಡನೇ ಮಹಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಮಗುವಿನ ತಲೆಯನ್ನ ನೆಲಕ್ಕೆ ಗುದ್ದಿ ಕೊಲೆ ಮಾಡಿರಬಹುದೆಂಬ ಶಂಕೆಯಿದೆ. ಮೃತ ಬಾಲಕ ಆರೋಪಿ ಮಹಿಳೆಯ ಮಕ್ಕಳೊಂದಿಗೆ ಆಟವಾಡಲು ಅವರ ಮನೆಗೆ ಆಗಾಗ ಹೋಗುತ್ತಿದ್ದ ಎಂದು ಪೊಲೀಸಿರು ತಿಳಿಸಿದ್ದಾರೆ.
ಆರೋಪಿ ಮಹಿಳೆ ಕೆಲವು ದಿನಗಳ ಹಿಂದೆ ಬಾಲಕನ ತಾಯಿಯೊಂದಿಗೆ ಜಗಳವಾಡಿದ್ದಳು. ಬುಧವಾರದಂದು ಆಕೆ ಬಾಲಕನನ್ನು ತನ್ನ ಮಗನೊಂದಿಗೆ ಆಟವಾಡಲು ಕರೆದು ಕೊಲೆ ಮಾಡಿದ್ದಾಳೆ. ಬಾಲಕನ ಪೋಷಕರು ಆತನಿಗಾಗಿ ಹುಡುಕಾಡಿದಾಗ ಆರೋಪಿ ಮಹಿಳೆಯ ಮನೆಯಲ್ಲಿ ಗಾಯಗೊಂಡು ಬಿದ್ದಿರೋದನ್ನ ನೋಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬಾಲಕನನ್ನ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಪೊಲೀಸರು ಆರೋಪಿ ಮಹಿಳೆಯನ್ನ ಬಂಧಿಸಿದ್ದಾರೆ.