ಮುಂಬೈ: ಈ ದೇಶ ಕಂಡ ಉದ್ಯಮಿ ರತನ್ ಟಾಟಾ (Ratan Tata) ಅವರು ಇದೇ ಅಕ್ಟೋಬರ್ 9ರಂದು 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ರತನ್ ಟಾಟಾ ನಿಧನದ ಬಳಿಕ ಅವರ 10,000 ಕೋಟಿ ರೂ. ಮೌಲ್ಯದ ಸಂಪತ್ತಿನ ಬಗ್ಗೆ ಪ್ರಶ್ನೆಗಳು ಬರುತ್ತಲೇ ಇದ್ದವು. ಅಷ್ಟೊಂದು ಆಸ್ತಿ ಯಾರ ಪಾಲಾಗಲಿದೆ ಎಂಬ ಬಗ್ಗೆ ಚರ್ಚೆಗಳು ಕೂಡ ನಡೆಯುತ್ತಿದ್ದವು. ಇದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ರತನ್ ಟಾಟಾ ಅವರ ವಿಲ್ (Ratan Tata Will) ಬಹಿರಂಗವಾಗಿದೆ ಎಂದು ವರದಿಗಳು ತಿಳಿಸಿವೆ.
Advertisement
ರತನ್ ಟಾಟಾ ತಮ್ಮ ವಿಲ್ ಪತ್ರದಲ್ಲಿ ಯಾವುದೇ ಗೊಂದಲವಿಲ್ಲದಂತೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ವಿಶೇಷ ಅಂದರೆ ರತನ್ ಟಾಟಾ 10,000 ಕೋಟಿ ರೂ. ಆಸ್ತಿಯಲ್ಲಿ ಅವರ ಮುದ್ದಿನ ಶ್ವಾನಕ್ಕೆ ಅತೀ ದೊಡ್ಡ ಪಾಲನ್ನು ಮೀಸಲಿಟ್ಟಿದ್ದಾರೆ ಎಂಬುದು ಪತ್ರದಲ್ಲಿ ಬಹಿರಂಗವಾಗಿದೆ. ಈ ಮೂಲಕ ತಮ್ಮನ್ನು ನಂಬಿದ ಎಲ್ಲರಿಗೂ ನ್ಯಾಯ ಒದಗಿಸುವ ಪ್ರಯತ್ನವನ್ನು ರತನ್ ಟಾಟಾ ಮಾಡಿದ್ದಾರೆ. ಬಹುತೇಕ ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟಿರುವ ರತನ್ ಟಾಟಾ, ತಮ್ಮ ನಾಯಿಗೂ ದೊಡ್ಡ ಪಾಲನ್ನೇ ನೀಡಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿಗಳಿಗೆ ಟ್ರೂಡೋ ಸರ್ಕಾರದ್ದೇ ಬೆಂಬಲ – ಭಾರತೀಯ ಹೈಕಮೀಷನರ್ ಸಂಜಯ್ ವರ್ಮಾ
Advertisement
Advertisement
ತಮ್ಮ ಆಸ್ತಿಯನ್ನು ರತನ್ ಟಾಟಾ ತಮ್ಮ ಸಹೋದರಿಯರಾದ ಶಿರೀನ್ ಮತ್ತು ಡೀನಾ ಜೆಜೀಬೋಯ್‌ಗೆ ಹಂಚಿದ್ದಾರೆ. ಇವರಿಬ್ಬರು ರತನ್ ಟಾಟಾ ಅವರ ಮಲತಾಯಿಯ ಮಕ್ಕಳು. ಜೊತೆಗೆ ತಮ್ಮ ಸಹೋದರ ಜಿಮ್ಮಿ ಟಾಟಾ ಹಾಗೂ ಅಚ್ಚುಮೆಚ್ಚಿನ ಸಹಾಯಕ ಶಂತನು ನಾಯ್ಡುಗೂ ಆಸ್ತಿಯಲ್ಲಿ ಪಾಲು ನೀಡಿದ್ದಾರೆ. ವಿಶೇಷ ಏನಂದ್ರೇ ತಮ್ಮ ಅಚ್ಚು ಮೆಚ್ಚಿನ ನಾಯಿ ಟಿಟೋಗೂ ಕೂಡ ತಮ್ಮ ಸಂಪತ್ತಿನ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅದಲ್ಲದೇ ಚಾರಿಟಿ ಟ್ರಸ್ಟ್‌ಗಳಿಗೆ ಷೇರುಗಳನ್ನು ನೀಡುವ ಟಾಟಾ ಗ್ರೂಫ್‌ನ ಪದ್ಧತಿಗೆ ಅನುಗುಣವಾಗಿ ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ ರತನ್ ಟಾಟಾ ಅವರ ಷೇರುಗಳ ದೊಡ್ಡ ಭಾಗವನ್ನು ಪಡೆದಿದೆ.
Advertisement
ವರದಿಗಳ ಪ್ರಕಾರ, ರತನ್ ಅವರು ತಮ್ಮ ಜರ್ಮನ್ ಶೆಫರ್ಡ್ ನಾಯಿ ಟಿಟೊಗೆ ಲೈಫ್‌ಟೈಮ್ ಆರೈಕೆಯನ್ನು ತಮ್ಮ ಮರಣ ಇಚ್ಛಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಸಾಕುಪ್ರಾಣಿಗಳನ್ನು ವಿಲ್‌ನಲ್ಲಿ ಸೇರಿಸುವುದು ಸಾಮಾನ್ಯ. ಆದರೆ, ಭಾರತದಲ್ಲಿ ಇದು ಅಪರೂಪದ ಘಟನೆ. ಟಿಟೋ ಎಂಬ ಹೆಸರಿನ ನಾಯಿ ಸತ್ತ ಬಳಿಕ ಅದೇ ಹೆಸರಿನ ಜರ್ಮನ್ ಶೆಫರ್ಡ್ ನಾಯಿಯನ್ನು ಐದರಿಂದ 6 ವರ್ಷಗಳ ಹಿಂದೆ ರತನ್ ಟಾಟಾ ದತ್ತು ಪಡೆದಿದ್ದರು. ಟಿಟೋವನ್ನು ರತನ್ ಟಾಟಾ ಮನೆಯ ಅಡುಗೆ ಮಾಡುವ ರಾಜನ್ ಶಾ ನೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕೆನಡಾ | ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು – ನಾಲ್ವರು ಭಾರತೀಯರು ಸಾವು