ನವದೆಹಲಿ: ಕತಾರ್ ದೊರೆ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ (Sheikh Tamim Bin Hamad Al-Thani) ಅವರು ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ (India) ಭೇಟಿ ನೀಡಿದ್ದಾರೆ.
Went to the airport to welcome my brother, Amir of Qatar H.H. Sheikh Tamim Bin Hamad Al Thani. Wishing him a fruitful stay in India and looking forward to our meeting tomorrow.@TamimBinHamad pic.twitter.com/seReF2N26V
— Narendra Modi (@narendramodi) February 17, 2025
Advertisement
ಇಂದು ರಾತ್ರಿ 8:30ರ ಸುಮಾರಿಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಪ್ರಧಾನಿ ಮೋದಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಕತಾರ್ ದೊರೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದು, ಮಂಗಳವಾರ (ಫೆ.17) ಪ್ರಧಾನಿ ಮೋದಿ ಅವರೊಂದಿಗೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ.
Advertisement
ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ ಅವರ ಕತಾರ್ ದೊರೆ ಭೇಟಿ ನೀಡಿದ್ದರೆ. ಇದು ಭಾರತಕ್ಕೆ ಅವರ 2ನೇ ಭೇಟಿಯಾಗಿದೆ. ಈ ಹಿಂದೆ 2015ರಲ್ಲಿ ಮೊದಲ ಬಾರಿಗೆ ಭೇಟಿ ನೀಡಿದ್ದರು. ಇದನ್ನೂ ಓದಿ: ಸ್ಯಾಮ್ ಪಿತ್ರೋಡಾ ಮತ್ತೊಮ್ಮೆ ವಿವಾದ – ಬಿಜೆಪಿಯಿಂದ ಖಂಡನೆ.. ಅಂತರ ಕಾಯ್ದುಕೊಂಡ ಕಾಂಗ್ರೆಸ್
Advertisement
Advertisement
ಭಾರತ ಮತ್ತು ಕತಾರ್ ಸ್ನೇಹ, ವಿಶ್ವಾಸ ಮತ್ತು ಪರಸ್ಪರ ಗೌರವದ ಆಳವಾದ ಬೇರೂರಿರುವ ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ, ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಉಭಯ ದೇಶಗಳ ನಡುವಿನ ಸಂಬಂಧಗಳು ಬಲಗೊಳ್ಳುತ್ತಲೇ ಇವೆ. ಇದನ್ನೂ ಓದಿ: ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿ ವಿವಾದ ಮೈಮೇಲೆ ಎಳೆದುಕೊಂಡ ರಾಹುಲ್ ಗಾಂಧಿ