ನವದೆಹಲಿ: ಕೇಂದ್ರ ಮಾಜಿ ಸಚಿವೆ ಹಾಗೂ ಬಿಜೆಪಿ ವರಿಷ್ಠರಾದ ಸುಷ್ಮಾ ಸ್ವರಾಜ್ ಅವರ 70ನೇ ಜನ್ಮದಿನವಾದ ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಕುತೂಹಲಕಾರಿ ಘಟನೆಯ ನೆನಪೊಂದನ್ನು ಹಂಚಿಕೊಂಡಿದ್ದಾರೆ.
ಪಂಜಾಬ್‌ನ ಜಲಂಧರ್‌ನಿಂದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ ಹಿಂದಿರುಗುವಾಗ ಬರೆದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರು ದಿವಂಗತ ನಾಯಕಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸುಷ್ಮಾ ಸ್ವರಾಜ್ ಅವರು ಗುಜರಾತ್‌ನ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ ಸಮಯವನ್ನು ಅವರು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ನವಜೋತ್ ಸಿಂಗ್ ಸಿಧು ನನ್ನ ಸಹೋದರನಿದ್ದಂತೆ: ಚರಣ್‍ಜಿತ್ ಸಿಂಗ್ ಚನ್ನಿ
Advertisement
Advertisement
25 ವರ್ಷಗಳ ಹಿಂದೆ ನಾನು ಬಿಜೆಪಿಯಲ್ಲಿ ಸಂಘಟಕನಾಗಿ ಕೆಲಸ ಮಾಡುತ್ತಿದ್ದಾಗ, ಸುಷ್ಮಾ ಜಿ ಅವರು ಗುಜರಾತ್‌ನಲ್ಲಿ ಚುನಾವಣಾ ಪ್ರವಾಸದಲ್ಲಿದ್ದರು. ಅವರು ನನ್ನ ಹಳ್ಳಿಯಾದ ವಡ್ನಗರಕ್ಕೆ ಹೋಗಿ ನನ್ನ ತಾಯಿಯನ್ನು ಭೇಟಿಯಾಗಿದ್ದರು. ಆ ಸಮಯದಲ್ಲಿ ನಮ್ಮ ಕುಟುಂಬದಲ್ಲಿ ನನ್ನ ಸೋದರಳಿಯನಿಗೆ ಹೆಣ್ಣು ಮಗು ಜನಿಸಿತ್ತು. ಅವಳ ಹೆಸರಿನಲ್ಲಿ ಜ್ಯೋತಿಷ್ಯ ಕೇಳಿದಾಗ ಜ್ಯೋತಿಷಿಗಳು ಹೆಸರೊಂದನ್ನು ಸೂಚಿಸಿದ್ದರು.
Advertisement
Advertisement
ಇದಾದ ಬಳಿಕ ಮತ್ತೊಂದು ಟ್ವಿಸ್ಟ್ ಬಂತು. ಸುಷ್ಮಾ ಜಿ ಅವರ ಭೇಟಿಯಾದ ನಂತರ ನನ್ನ ತಾಯಿ, ಮಗುವಿಗೆ ಸುಷ್ಮಾ ಎಂದು ಹೆಸರಿಡುವುದಾಗಿ ಹೇಳಿದರು ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ವಿರುದ್ಧ ಹಿಮಂತ ಬಿಸ್ವಾ ವಿವಾದಾತ್ಮಕ ಹೇಳಿಕೆ – ತೆಲಂಗಾಣ ಕಾಂಗ್ರೆಸ್ ನಾಯಕರಿಂದ ದೂರು
ನನ್ನ ತಾಯಿ ವಿದ್ಯಾವಂತರಲ್ಲ. ಆದರೆ ಆಲೋಚನೆಗಳಲ್ಲಿ ಅವರು ತುಂಬಾ ಆಧುನಿಕರು. ಆ ಸಮಯದಲ್ಲಿ ಎಲ್ಲರೆದರೂ ನಿರ್ಧಾರ ತಿಳಿಸಿದ ಸನ್ನಿವೇಶದ ನೆನಪು ಈಗಲೂ ಇದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ತಾಯಿಗೆ ಈಗ 90 ವರ್ಷ.
ಸುಷ್ಮಾ ಸ್ವರಾಜ್ ಅವರು 2019ರ ಆಗಸ್ಟ್ ತಿಂಗಳಲ್ಲಿ ನಿಧನರಾಗಿದರು. ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿದಾಶಾಂಗ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ಇದನ್ನೂ ಓದಿ: ತ್ರಿವಳಿ ತಲಾಕ್ ವಿರುದ್ಧದ ಕಾನೂನು ಮುಸ್ಲಿಂ ಮಹಿಳೆಯರ ಕುಟುಂಬ ಉಳಿಸಿದೆ: ಮೋದಿ