– ಹಳೆ ಬೀಗ ಮುರಿದು ಹೊಸ ಬೀಗ ಹಾಕುವ ಖದೀಮರು
ಬೀದರ್: ಒಂದೇ ರಾತ್ರಿಯಲ್ಲಿ 8ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿ, 3.87 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಲೂಟಿ ಹೊಡೆದಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಉಮಾಪುರದಲ್ಲಿ (Umapura) ನಡೆದಿದೆ.
Advertisement
ಎರಡು ಬೈಕ್ ಮೇಲೆ ಬಂದ 6 ಜನ ಕಳ್ಳರ ಅಟ್ಟಹಾಸಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. 6 ಮನೆಗಳು ಸೇರಿದಂತೆ ಕೊಂಗೆವಾಡಿ ತಾಂಡ, ಚಂಡಕಾಪುರ ಗ್ರಾಮದಲ್ಲೂ ತಲಾ ಒಂದೊಂದು ಮನೆಯ ಬೀಗ ಮುರಿದು ಕನ್ನ ಹಾಕಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮನೆಯ ಬೀಗ ಮುರಿದು ಕಳ್ಳತನ ಮಾಡಿ ಹೋಗುವಾಗ ಹೊಸ ಬೀಗ ಹಾಕಿ ಹೋಗಿದ್ದಾರೆ.ಇದನ್ನೂ ಓದಿ: ಬಾಕ್ಸಾಫೀಸ್‌ನಲ್ಲಿ UI ದಾಖಲೆ- ಕರ್ನಾಟಕದಲ್ಲಿ ಮೊದಲ ದಿನವೇ 10 ಕೋಟಿ ಕಲೆಕ್ಷನ್
Advertisement
Advertisement
ಖತರ್ನಾಕ್ ಖದೀಮರ ಕೈಚಳಕ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಒಂದೇ ರಾತ್ರಿಯಲ್ಲಿ 8ಕ್ಕೂ ಹೆಚ್ಚು ಮನೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಉಮಾಪುರ ಗ್ರಾಮದಲ್ಲಿ 2.77 ಲಕ್ಷ ರೂ. ಹಾಗೂ ಕೊಂಗೇವಾಡಿ ತಾಂಡದಲ್ಲಿ 1.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ.
Advertisement
ಸದ್ಯ ಈ ಕುರಿತು ಬಸವಕಲ್ಯಾಣ (Basava Kalyana) ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.ಇದನ್ನೂ ಓದಿ: ಮಾರುಕಟ್ಟೆಗೆ ಬಂತು ಹಾರುವ ಇಯರಿಂಗ್‌ಗಳು