ಮುಂಬೈ: ವಿಶ್ವ ಕ್ರಿಕೆಟ್‍ನಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಟೀಂ ಇಂಡಿಯಾ ಸದ್ಯ ಐಸಿಸಿ ಬಿಡುಗಡೆಗೊಳಿಸಿರುವ ಮುಂದಿನ 5 ವರ್ಷಗಳ ಎಫ್‍ಟಿಪಿ ವೇಳಾಪಟ್ಟಿಯಲ್ಲಿ ದಾಖಲೆಯ 203 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ
2018 ರಿಂದ 2023 ರ ಅವಧಿಯಲ್ಲಿ ಟೀಂ ಇಂಡಿಯಾ 51 ಟೆಸ್ಟ್ ಪಂದ್ಯ, 83 ಏಕದಿನ ಹಾಗೂ 69 ಟಿ20 ಅಂತರಾಷ್ಟ್ರಿಯ ಪಂದ್ಯಗಳನ್ನು ಆಡಲಿದೆ. ಅತಿ ಹೆಚ್ಚು ಪಂದ್ಯಗಳನ್ನಾಡುವ ದೇಶಗಳ ಪೈಕಿ ವೆಸ್ಟ್ ಇಂಡೀಸ್ ಎರಡನೇ ಸ್ಥಾನ(186), ಇಂಗ್ಲೆಂಡ್ 175 ಪಂದ್ಯಗಳನ್ನು ಆಡುವ ಮೂಲಕ ಮೂರನೇ ಸ್ಥಾನ ಪಡೆದಿದೆ.
Advertisement
ಅಂದಹಾಗೇ ಟೆಸ್ಟ್ ಮಾದರಿಯ ಪಂದ್ಯಗಳಲ್ಲಿ ಇಂಗ್ಲೆಂಡ್ 59 ಪಂದ್ಯಗಳನ್ನು ಆಡಲಿದ್ದು, ಆಸ್ಟ್ರೇಲಿಯಾ 47 ಪಂದ್ಯಗಳನ್ನು ಆಡಲಿದೆ. ಇನ್ನು ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಕ್ರಮವಾಗಿ 68 ಹಾಗೂ 75 ಪಂದ್ಯವನ್ನು ಆಡಲಿದೆ.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ವಕ್ತಾರರು, ಭಾರತೀಯ ಕ್ರಿಕೆಟ್ ಮಂಡಳಿ ಟೆಸ್ಟ್ ಕ್ರಿಕೆಟ್ ಮಾದರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿಲ್ಲ ಎಂಬ ಆರೋಪ ಮಾಡಲಾಗುತ್ತಿತ್ತು. ಆದರೆ 50 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಮುಂದಿನ 5 ವರ್ಷಗಳಲ್ಲಿ ಆಡಲಿದೆ. ಆದರೆ ಈ ವೇಳೆ ಟೀಂ ಇಂಡಿಯಾ ಆಟಗಾರರ ಮೇಲೆ ಉಂಟಾಗುವ ಒತ್ತಡವನ್ನು ಗಮನಹರಿಸಬೇಕು. ಐಪಿಎಲ್ ಸೇರಿದಂತೆ ವಾರ್ಷಿಕವಾಗಿ ಅತೀ ಹೆಚ್ಚಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಟೀಂ ಇಂಡಿಯಾ ಆಟಗಾರರು ಆಡಲಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ದ್ವಿಪಕ್ಷೀಯ ಸರಣಿ ನಡೆದರೆ ಕ್ರಿಕೆಟ್ ಬೋರ್ಡ್ ಗಳಿಗೆ ಟಿವಿ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಸಿಗುತ್ತದೆ. ಅದರಲ್ಲೂ ಭಾರತ ಯಾವುದಾದರೂ ದೇಶದ ಪ್ರವಾಸ ಕೈಗೊಂಡರೆ ಕ್ರಿಕೆಟ್ ಆಯೋಜನೆ ಮಾಡುವ ಬೋರ್ಡ್ ಗೆ ಟಿವಿ ಹಕ್ಕು ರೂಪದಲ್ಲಿ ಕೋಟಿಗಟ್ಟಲೇ ಹಣ ಸಿಗುತ್ತದೆ.