ಉತ್ತರ ಪ್ರದೇಶದ ಜೈಲು ನಿಯಮಗಳಲ್ಲಿ ಬದಲಾವಣೆ – ಏನಿದೆ ಹೊಸ ರೂಲ್ಸ್?

Public TV
2 Min Read
crim

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ತನ್ನ ಜೈಲು ನಿಯಮಗಳಿಗೆ ತಿದ್ದುಪಡಿ ತಂದಿದ್ದು, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜೀವಾವಧಿ ಕೈದಿಗಳ ಅವಧಿಪೂರ್ವ ಬಿಡುಗಡೆಯನ್ನು ಪರಿಗಣಿಸಲು ನಿರ್ಧರಿಸಿದೆ. ಹೊಸ ನೀತಿಯ ಪ್ರಕಾರ, ಕೊಲೆಯಂತಹ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಯನ್ನು 16 ವರ್ಷಗಳ ಜೈಲು ಶಿಕ್ಷೆಯು ವಿನಾಯಿತಿ ಇಲ್ಲದೇ ಅಥವಾ 20 ವರ್ಷಗಳ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಬಿಡುಗಡೆ ಮಾಡಲು ಅನುಮತಿ ನೀಡುತ್ತದೆ.

yogi adityanath 1

ರಾಜ್ಯ ಸರ್ಕಾರದ ಹಿಂದಿನ ಜೈಲು ನಿಯಮದ ಪ್ರಕಾರ, ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿರುವ ಕೈದಿಗಳನ್ನು ಅವಧಿಪೂರ್ವ ಬಿಡುಗಡೆಗೆ ಪರಿಗಣಿಸುವ ಮೊದಲು ಅವರು 60 ವರ್ಷ ವಯಸ್ಸನ್ನು ತಲುಪಬೇಕು ಎಂದು ಶರತ್ತು ವಿಧಿಸಿತ್ತು, ಇದನ್ನು ಈಗ ಸರ್ಕಾರ ಬದಲಾಯಿಸಿದೆ. ಇದನ್ನೂ ಓದಿ: ಪ್ರವಾದಿಗೆ ಅವಹೇಳನಗೈದ ನೂಪುರ್ ಶರ್ಮಾರನ್ನು ಗಲ್ಲಿಗೇರಿಸಿ: ಎಐಎಂಐಎಂ

ಪ್ರಸ್ತುತ, ಯುಪಿ ಜೈಲುಗಳಲ್ಲಿ ಸುಮಾರು 1.14 ಲಕ್ಷ ಕೈದಿಗಳಿದ್ದು, ಎಲ್ಲ ಜೈಲುಗಳ ಸಾಮರ್ಥ್ಯ ಒಟ್ಟು 70,000 ಆಗಿದೆ. ಸುಮಾರು 30,000 ಶಿಕ್ಷೆಗೊಳಗಾದ ಕೈದಿಗಳಿದ್ದು, ಅವರಲ್ಲಿ ಸುಮಾರು 12,000 ಜನರು ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ. ಹೊಸ ನೀತಿಯು ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿರುವ ಹೆಚ್ಚಿನ ಸಂಖ್ಯೆಯ ಅಪರಾಧಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಇದು ರಾಜ್ಯಾದ್ಯಂತ ಜನನಿಬಿಡ ಜೈಲುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಯುಪಿ ಡೈರೆಕ್ಟರ್ ಜನರಲ್ (ಕಾರಾಗೃಹ) ಆನಂದ್ ಕುಮಾರ್ ಹೇಳಿದ್ದಾರೆ.

KILLING CRIME

ಹಿಂದಿನ ನೀತಿಗಳಂತೆ, ಹೊಸ ನೀತಿಯಲ್ಲಿಯೂ ಕೊಲೆಗಾಗಿ ಅಪಹರಣ, ವ್ಯಕ್ತಿಯನ್ನು ಘೋರವಾದ ನೋವು ಮತ್ತು ಗುಲಾಮಗಿರಿಗೆ ಒಳಪಡಿಸುವ ಸಲುವಾಗಿ ಅಪಹರಣ, ಅಪ್ರಾಪ್ತ ಮತ್ತು ವಯಸ್ಕ ಮಹಿಳೆಯರ ಮಾರಾಟ ಮತ್ತು ಖರೀದಿಯಂತಹ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳ ಬಿಡುಗಡೆಯನ್ನು ಪರಿಗಣಿಸಲು ಸರ್ಕಾರ ನಿರ್ಧರಿಸಿದೆ.

jail

ವೇಶ್ಯಾವಾಟಿಕೆ, ಅತ್ಯಾಚಾರ ಮತ್ತು ಇತರ ಅಪರಾಧಿಗಳು 20 ವರ್ಷಗಳವರೆಗೆ ವಿನಾಯಿತಿ ಇಲ್ಲದೆ ಮತ್ತು 25 ವರ್ಷಗಳವರೆಗೆ ಉಪಶಮನದೊಂದಿಗೆ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಮಾತ್ರ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಸಾಮೂಹಿಕ ಹತ್ಯೆಯ ಆರೋಪಕ್ಕಾಗಿ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳು 25 ವರ್ಷಗಳವರೆಗೆ ವಿನಾಯಿತಿ ಇಲ್ಲದೆ ಮತ್ತು 30 ವರ್ಷಗಳವರೆಗೆ ಉಪಶಮನದೊಂದಿಗೆ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಬಿಡುಗಡೆಯಾಗಲಿದ್ದಾರೆ. ಇದನ್ನೂ ಓದಿ: ಕಲ್ಲು ತೂರಿದವರಿಗೆ ಬುಲ್ಡೋಜರ್‌ ಶಾಕ್‌ ಕೊಟ್ಟ ಯೋಗಿ – ಅಕ್ರಮ ಕಟ್ಟಡಗಳು ಧ್ವಂಸ

ಕೈದಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟು ಮಾಡುವ ಸಾಧ್ಯತೆಗಳು ಕಂಡು ಬಂದರೆ ಅಥವಾ ಭಯೋತ್ಪಾದನೆ, ದೇಶದ್ರೋಹದ ಆರೋಪಗಳಿದ್ದರೇ ಕೈದಿಗಳ ಬಿಡುಗಡೆಯನ್ನು ರದ್ದುಗೊಳಿಸಬಹುದು ಎಂದು ರಾಜ್ಯ ಸರ್ಕಾರ ಶರತ್ತು ಹಾಕಿದೆ.

Share This Article
Leave a Comment

Leave a Reply

Your email address will not be published. Required fields are marked *