ಮಂಡ್ಯ: ಕೋಮುಗಲಭೆ ನಡೆದ ನಾಗಮಂಗಲದಲ್ಲಿ (Nagamangala) ಇಂದು ಕೋಟೆ ವಿದ್ಯಾಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಕೋಮುಗಲಭೆ ನಡೆದ ಬಳಿಕ ನಡೆಯುವ ದೊಡ್ಡ ಕಾರ್ಯಕ್ರಮ ಇದಾಗಿದ್ದು ಬೃಹತ್ ಶೋಭಾಯಾತ್ರೆ ನಡೆಸಿ ವಿಸರ್ಜನೆಗೆ ಸಿದ್ಧತೆ ನಡೆದಿದೆ.
ನಾಗಮಂಗಲದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯನ್ನು ಪ್ರತೀ ವರ್ಷ ಪ್ರತಿಷ್ಠಾಪನೆಯಾದ 48ನೇ ದಿನಕ್ಕೆ ವಿಸರ್ಜನೆ ಮಾಡಲಾಗುತ್ತದೆ. ಈ ಬಾರಿಯು ಬೃಹತ್ ಶೋಭಾಯಾತ್ರೆಯೊಂದಿಗೆ ವಿಸರ್ಜನೆ ಮಾಡುವ ಚಿಂತನೆಯನ್ನು ಸಮಿತಿಯು ಮಾಡಿದೆ. ಯಾತ್ರೆಗೆ ಸುಮಾರು 30 ಸಾವಿರಕ್ಕೂ ಅಧಿಕ ಹಿಂದೂಗಳನ್ನ ಸೇರಿಸುವ ನಿರೀಕ್ಷೆ ಇದ್ದು, ಕಳೆದ 72 ವರ್ಷಗಳಿಂದ ಸಮಿತಿಯು ಅದ್ಧೂರಿಯಾಗಿ ಗಣೇಶೋತ್ಸವವನ್ನು (Ganeshostav) ನಡೆಸಿಕೊಂಡು ಬರುತ್ತಿದೆ. ಇದನ್ನೂ ಓದಿ: ಒಡಿಶಾ ತೀರಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ – ಗಂಟೆಗೆ 120 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ
ಇಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿವರೆಗೂ ಯಾತ್ರೆ ನಡೆಯಲಿದೆ. ವಿವಾದಿತ ಮಸೀದಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗುತ್ತದೆ. ಕಳೆದ ಸೆಪ್ಟೆಂಬರ್ 11ರಂದು ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ನಡೆದಿತ್ತು. ಮಸೀದಿ ಮುಂಭಾಗ ಮೆರವಣಿಗೆ ವಿರೋಧಿಸಿ ಆರಂಭವಾದ ಗಲಾಟೆಯಿಂದ ಕೋಮುಗಲಭೆ ಸೃಷ್ಟಿಯಾಗಿತ್ತು. ಇಂದು ಅದೇ ಮಸೀದಿ ಮುಂದೆ ಹಿಂದೂ ಸಂಘಟನೆಗಳು ಶೋಭಾಯಾತ್ರೆ ನಡೆಸಲಿದೆ. ವಿವಿಧ ಕಲಾತಂಡಗಳು ಈ ಶೋಭಾಯಾತ್ರೆಗೆ ಮೆರುಗು ನೀಡಲಿದೆ. ಇದನ್ನೂ ಓದಿ: ಬಿಬಿಎಂಪಿಗೆ ಡಿಸಿಎಂ ಖಡಕ್ ವಾರ್ನಿಂಗ್ – ಸೋಮವಾರದಿಂದ ಅನಧಿಕೃತ ಕಟ್ಟಡಗಳ ಸರ್ವೆ ಆರಂಭ