ದಾವಣಗೆರೆ: ಕರ್ನಾಟಕದ ಮ್ಯಾಂಚೆಸ್ಟರ್ ಖ್ಯಾತಿಯ ಜಿಲ್ಲೆಯಲ್ಲಿ 8 ಮತಕ್ಷೇತ್ರಗಳಿದ್ದು, ಅದರಲ್ಲಿ ಬಿಜೆಪಿ 6 ಹಾಗೂ ಕಾಂಗ್ರೆಸ್ 2 ಕ್ಷೇತ್ರದಲ್ಲಿ ಜಯಗಳಿಸಿವೆ. 2013ರಲ್ಲಿ 7 ಕ್ಷೇತ್ರಗಳಿಸಿತ್ತು. ಆ ವರ್ಷ, ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರು ಜಯಗಳಿಸಿದ್ದರು. ಆದರೆ, ಈ ಬಾರಿ ಅಪ್ಪ ಗೆಲವು ಸಾಧಿಸಿದರೆ, ಮಗ ಸೋತಿದ್ದಾರೆ.
2013ರಲ್ಲಿ ಜಗಳೂರು ಕ್ಷೇತ್ರದಿಂದ ಕೆಜೆಪಿ ಪರ ಸ್ಪರ್ಧಿಸಿ ಎಸ್.ವಿ.ರಾಮಚಂದ್ರ ಅವರು ಸೋತಿದ್ದರು. ಆದರೆ, ಈಗ ಬಿಜೆಪಿಯಿಂದ ಕಣಕ್ಕಿಳಿದ ಅವರು 29,221 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ. ಅವರು 78,948 ಮತ ಪಡೆದಿದ್ದರೆ, ಕಾಂಗ್ರೆಸ್‍ನ ಎಚ್.ಪಿ.ರಾಜೇಶ್ ಅವರು 49,272 ಮತ ಪಡೆದು ಸೋತಿದ್ದಾರೆ.
Advertisement
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಹರಪನಹಳ್ಳಿ ಕ್ಷೇತ್ರವನ್ನು ಈ ಬಾರಿ ಬಿಜೆಪಿ ಭೇದಿಸಿದ್ದು, ಅಲ್ಲಿ ಕರುಕಾಕರ ರೆಡ್ಡಿ ಅವರು ಒಟ್ಟು 57,821 ಮತ ಪಡೆದು ಜಯಸಾಧಿಸಿದ್ದಾರೆ. ಅವರ ಎದುರಾಳಿ ಕಾಂಗ್ರೆಸ್‍ನ ಎಂ.ಪಿ.ರವೀಂದ್ರ ಅವರು 50,937 ಮತ ಪಡೆದಿದ್ದು, 6,884 ಮತಗಳ ಅಂತರದಲ್ಲಿ ಸೋತಿದ್ದಾರೆ.
Advertisement
ಹರಿಹರ ಮತಕ್ಷೇತ್ರದಿಂದ 2013ರಲ್ಲಿ ಜೆಡಿಎಸ್‍ನ ಎಚ್.ಎಸ್.ಶಿವಶಂಕರ್ ಜಯಗಳಿಸಿದ್ದರು. ಆದರೆ, ಅವರು ಈ ಬಾರಿ 4,523 ಮತಗಳಿಂದ ಕಾಂಗ್ರೆಸ್ ವಿರುದ್ಧ ಸೋತಿದ್ದಾರೆ. ಕಾಂಗ್ರೆಸ್‍ನ ಎಸ್.ರಾಮಪ್ಪ ಅವರು ಒಟ್ಟು 54,663 ಮತಗಳಿಸಿ ಆಯ್ಕೆಯಾಗಿದ್ದಾರೆ.
Advertisement
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಎ.ರವೀಂದ್ರನಾಥ್ ಅವರು 4,071 ಮತಗಳ ಅಂತರದಲ್ಲಿ ಜಯಗಳಿಸಿದ್ದು, ಒಟ್ಟು 72,540 ಮತ ಪಡೆದಿದ್ದಾರೆ. 2013ರಲ್ಲಿ ಜಯಗಳಿಸಿದ್ದ ಕಾಂಗ್ರೆಸ್‍ನ ಎಸ್.ಎಸ್.ಮಲ್ಲಿಕಾರ್ಜುನ್ ಅವರು 74,540 ಮತ ಪಡೆದಿದ್ದಾರೆ.
Advertisement
ದಾವಣಗೆರೆ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಈ ಬಾರಿಯೂ ಶಾಮನೂರು ಶಿವಶಂಕರಪ್ಪ ಅವರು 57,709 ಮತ ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಯಶ್ವಂತರಾವ್ ಜಾದವ್ ಅವರು 40,224 ಮತ ಪಡೆದಿದ್ದಾರೆ.
ಮಾಯಕೊಂಡ ಮತಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಇಲ್ಲಿ ಬಿಜೆಪಿಯ ಪ್ರೊ. ಲಿಂಗಣ್ಣ ಅವರು 6,696 ಮತಗಳ ಅಂತರದಲ್ಲಿ ಜಯಗಳಿಸಿದ್ದು, ಒಟ್ಟು 36,895 ಮತ ಪಡೆದಿದ್ದಾರೆ. ಎದುರಾಳಿ ಕೆ.ಎಸ್.ಬಸವರಾಜ ಅವರು 30,199 ಮತ ಪಡೆದು ಸೋತಿದ್ದಾರೆ.
ಹೊನ್ನಾಳಿ ಕ್ಷೇತ್ರವು ಕೊನೆ ಕ್ಷಣದವರೆಗೆ ಕುತೂಹಲ ಮೂಡಿಸಿತ್ತು. ಕೊನೆಗೆ ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ ಅವರು ಒಟ್ಟು 78,014 ಮತ ಪಡೆದು ಆಯ್ಕೆಯಾಗಿದ್ದಾರೆ. 2013ರಲ್ಲಿ ಜಯಗಳಿಸಿದ್ದ ಡಿ.ಜಿ.ಶಾಂತಗೌಡ ಅವರು ಕೇವಲ 4,172 ಮತಗಳ ಅಂತರದಲ್ಲಿ ಸೋತಿದ್ದಾರೆ.
2013ರಲ್ಲಿ ಚನ್ನಗಿರಿ ಮತಕ್ಷೇತ್ರದಿಂದ ಕಾಂಗ್ರೆಸ್ ಜಯಗಳಿಸಿತ್ತು. ಆದರೆ, ಈ ಬಾರಿ ಬಿಜೆಪಿಯ ವಿರೂಪಾಕ್ಷ ಮಾಡಾಳು ಅವರು 25,780 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಅವರು ಒಟ್ಟು 73,794 ಮತ ಪಡೆದಿದ್ದರೆ, ಪರಾಭವಗೊಂಡ ಕಾಂಗ್ರೆಸ್‍ನ ವಡ್ನಾಳ್ ರಾಜಣ್ಣ ಅವರು 48,014 ಮತ ಪಡೆದಿದ್ದಾರೆ.