ನವದೆಹಲಿ: ಭಗವಾನ್ ಶ್ರೀರಾಮ ಘನತೆಯ ಸಂಕೇತ, ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿ, ಶ್ರೀರಾಮ ಕೇವಲ ಧಾರ್ಮಿಕ ಸಂಕೇತವಲ್ಲ, ಧರ್ಮ ಮತ್ತು ನ್ಯಾಯದ ಮಾರ್ಗದರ್ಶಕ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಬಣ್ಣಿಸಿದ್ದಾರೆ.
ದೀಪಾವಳಿ ಹಬ್ಬದ ನಿಮಿತ್ಯ ದೇಶದ ಜನರಿಗೆ ಪತ್ರ ಬರೆದ ಅವರು, ಹಬ್ಬದ ಶುಭಾಶಯ ಕೋರಿದರು. ಶ್ರೀರಾಮನು ಧರ್ಮವನ್ನು ಹೇಗೆ ಅನುಸರಿಸಬೇಕು ಮತ್ತು ಅನ್ಯಾಯದ ವಿರುದ್ಧ ದೃಢವಾಗಿ ನಿಲ್ಲಬೇಕು ಎಂಬುದನ್ನು ನಮಗೆ ಕಲಿಸುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ಕೋಮುಹತ್ಯೆ, ಹಿಂಸಾಚಾರ ಹತ್ತಿಕ್ಕಲು ಸ್ಪೆಷಲ್ ಆಕ್ಷನ್ ಫೋರ್ಸ್ ರಚನೆ: ಸಿದ್ದರಾಮಯ್ಯ
ಇದೇ ವೇಳೆ `ಆಪರೇಷನ್ ಸಿಂಧೂರ’ವನ್ನು ಉಲ್ಲೇಖಿಸಿದ ಅವರು, ಶ್ರೀರಾಮನ ಹಾಗೇ ಭಾರತವು ಧರ್ಮವನ್ನು ರಕ್ಷಿಸಿತು ಮತ್ತು ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಿತು. ಈ ಕಾರ್ಯಾಚರಣೆ ಭಾರತದ ಶಕ್ತಿ, ನೈತಿಕತೆ ಮತ್ತು ಸಂಕಲ್ಪವನ್ನು ಸೂಚಿಸುತ್ತದೆ. ದೇಶವಾಸಿಗಳು ಸದಾಚಾರ, ಸತ್ಯ ಮತ್ತು ನ್ಯಾಯದ ಮಾರ್ಗವನ್ನು ಅನುಸರಿಸಬೇಕೆಂದು ಅವರು ಕರೆ ನೀಡಿದ್ದಾರೆ.
ನವರಾತ್ರಿಯ ಮೊದಲ ದಿನದಂದು ಕಡಿಮೆ ಜಿಎಸ್‌ಟಿ ದರಗಳನ್ನು ಜಾರಿಗೆ ತರಲಾಗಿದ್ದು, ಜಿಎಸ್‌ಟಿ ಉಳಿತಾಯ ಉತ್ಸವದಲ್ಲಿ ದೇಶವಾಸಿಗಳ ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸುತ್ತಿದ್ದಾರೆ. ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ, ನಮ್ಮ ಭಾರತವು ಸ್ಥಿರತೆ ಮತ್ತು ಸೂಕ್ಷ್ಮತೆಯ ಸಂಕೇತವಾಗಿ ಹೊರಹೊಮ್ಮಿದೆ. ಮುಂಬರುವ ದಿನಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದೆ. ಅಭಿವೃದ್ಧಿಹೊಂದಿದ ಮತ್ತು ಸ್ವಾವಲಂಬಿ ಭಾರತದತ್ತ ಈ ಪ್ರಯಾಣದಲ್ಲಿ ನಾಗರಿಕರಾಗಿ ನಮ್ಮ ಮುಖ್ಯ ಜವಾಬ್ದಾರಿ ದೇಶದಕ್ಕಾಗಿ ನಮ್ಮ ಕರ್ತವ್ಯ ನಿರ್ವಹಿಸುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಏಷ್ಯಾ ಕಪ್ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸಿ – ಮೊಹ್ಸಿನ್ ನಖ್ವಿಗೆ ಬಿಸಿಸಿಐ ವಾರ್ನಿಂಗ್