Connect with us

Latest

ಇಂದು ತೆಲಂಗಾಣ, ರಾಜಸ್ಥಾನ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ – ಡಿ.11 ರಂದು ಪಂಚರಾಜ್ಯ ಫಲಿತಾಂಶ

Published

on

ನವದೆಹಲಿ: ಇಂದು ತೆಲಂಗಾಣ ಹಾಗೂ ರಾಜಸ್ಥಾನ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಮತದಾನ ಆರಂಭವಾಗಿದೆ. ನವೆಂಬರ್ ನಲ್ಲಿ ಛತ್ತೀಸ್‍ಗಡ, ಮಿಜೋರಾಂ, ಮಧ್ಯ ಪ್ರದೇಶ ರಾಜ್ಯಗಳಿಗೆ ಚುನಾವಣೆ ನಡೆದಿತ್ತು. ಪಂಚ ರಾಜ್ಯ ಚುನಾವಣಾ ಫಲಿತಾಂಶ ಡಿ.11ರಂದು ಹೊರ ಬೀಳಲಿದೆ.

ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 200 ವಿಧಾನಸಭಾ ಕ್ಷೇತ್ರಗಳ ರಾಜಸ್ಥಾನದಲ್ಲಿ 4 ಕೋಟಿ 75 ಲಕ್ಷ ಮತದಾರರಿದ್ದಾರೆ. ಸುಗಮ ಮತದಾನಕ್ಕಾಗಿ 51,687 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮಹಿಳೆಯರ ಮತದಾನಕ್ಕಾಗಿ ವಿಶೇಷ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ ದಿವ್ಯಾಂಗ ಮತದಾರರಿಗೂ ವಿಶೇಷ ಬೂತ್ ಸ್ಥಾಪಿಸಲಾಗಿದ್ದು, ಮತದಾನಕ್ಕೆ ತೆರಳಲು ವಾಹನ ವ್ಯವಸ್ಥೆ ಮಾಡಲಾಗಿದೆ.

ಮತದಾನ ಪ್ರಕ್ರಿಯೆಯಲ್ಲಿ ಸರಕಾರಿ ನೌಕರರನ್ನು ಬಳಕೆ ಮಾಡಿಕೊಳ್ತಿದ್ದು, 30 ಸಾವಿರ ಮಹಿಳಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ನೇಮಿಸಲಾಗಿದೆ. ರಾಜಸ್ಥಾನವೊಂದರಲ್ಲೇ 2ಲಕ್ಷ ಇವಿಎಂ ಬಳಕೆ ಜೊತೆಗೆ ಇದೇ ಮೊದಲ ಬಾರಿ ವಿವಿಪ್ಯಾಟ್ ಅಳವಡಿಸಲಾಗಿದ್ದು, 2,200 ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಬರೆಯಲಿದ್ದಾನೆ.

119 ವಿಧಾನಸಭಾ ಕ್ಷೇತ್ರಗಳ ಬಲ ಹೊಂದಿರುವ ತೆಲಂಗಾಣ ರಾಜ್ಯದಲ್ಲಿ 2ಕೋಟಿ 80 ಲಕ್ಷ ಮತದಾರರಿದ್ದಾರೆ. 31 ಜಿಲ್ಲೆಗಳಲ್ಲಿ 32.815 ಮತಗಟ್ಟೆಗಳನ್ನು ತೆರೆಯಲಾಗಿದ್ದು, 1821 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ. ತೆಲಂಗಾಣ ರಾಜ್ಯವೊಂದರಲ್ಲೆ 1ಲಕ್ಷದ 60 ಸಾವಿರ ಮತಗಟ್ಟೆ ಸಿಬ್ಬಂದಿಗಳನ್ನು ನೇಮಕಮಾಡಲಾಗಿದೆ.

ಇಂದು ನಡೆಯುವ ಮತದಾನದ ವೇಳೆ ಪೋಲೀಸ್ ಬಿಗಿ ಭದ್ರತೆ ಹಮ್ಮಿಕೊಳ್ಳಲಾಗಿದೆ. ಸೂಕ್ಷ್ಮ, ಅತೀಸೂಕ್ಷ್ಮ ಮತಗಟ್ಟೆಗಳಲ್ಲಿ ಸೆಕ್ಯುರಿಟಿ ಟೈಟ್ ಮಾಡಲಾಗಿದೆ. ಭದ್ರತೆಗಾಗಿ ಸೆಂಟ್ರಲ್ ಫೋರ್ಸ್ ಬಳಕೆ ಮಾಡಿಕೊಳ್ತಿದ್ದು, 30 ಸಾವಿರ ರಾಜ್ಯ ಪೋಲೀಸ್ ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗಿದೆ. ತೆಲಂಗಾಣವೊಂದರಲ್ಲೇ 4.57 ಲಕ್ಷ ದಿವ್ಯಾಂಗರಿದ್ದು, ಮತದಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *