ನವದೆಹಲಿ: ಕಳೆದ 5 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಕ್ಕೆ ಬರೋಬ್ಬರಿ 446.52 ಕೋಟಿ ರೂ. ಖರ್ಚಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
Advertisement
ಬುಧವಾರ ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯ ರಾಜ್ಯ ಸಚಿವ ವಿ. ಮುರಳಿಧರನ್, ಕಳೆದ 5 ವರ್ಷದಲ್ಲಿ ಮೋದಿ ಅವರ ವಿದೇಶ ಪ್ರವಾಸಕ್ಕೆ 446.52 ಕೋಟಿ ರೂ. ಖರ್ಚಾಗಿದೆ. ಇದರಲ್ಲಿ ಚಾರ್ಟರ್ಡ್ ವಿಮಾನದ ಖರ್ಚು ಕೂಡ ಸೇರಿದೆ ಎಂದು ತಿಳಿಸಿದರು.
Advertisement
Advertisement
ಯಾವ ವರ್ಷ ಎಷ್ಟು ಖರ್ಚಾಗಿದೆ?
ವಿ. ಮುರಳಿಧರನ್ ಅವರು ನೀಡಿದ ಮಾಹಿತಿ ಪ್ರಕಾರ, 2015-16ನೇ ಸಾಲಿನಲ್ಲಿ 121.85 ಕೋಟಿ ರೂ. ಪ್ರಧಾನಿಯವರ ವಿದೇಶ ಪ್ರವಾಸಕ್ಕೆ ಖರ್ಚಾಗಿತ್ತು. ಹಾಗೆಯೇ 2016-17ನೇ ಸಾಲಿನಲ್ಲಿ 78.52 ಕೋಟಿ ರೂ., ಅದರಂತೆ 2017-18ನೇ ಸಾಲಿನಲ್ಲಿ 99.90 ಕೋಟಿ ರೂ., 2018-19ನೇ ಸಾಲಿನಲ್ಲಿ 100.02 ಕೋಟಿ ರೂ. ಹಾಗೂ 2019-20ನೇ ಸಾಲಿನಲ್ಲಿ 46.23 ಕೋಟಿ ರೂ. ಪ್ರಧಾನಿ ಅವರ ವಿದೇಶ ಪ್ರವಾಸಕ್ಕೆ ಖರ್ಚು ಮಾಡಲಾಗಿದೆ.