ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ (Dengue Case) ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 91 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಈವರೆಗೆ ಒಟ್ಟು 29,611 ಪ್ರಕರಣಗಳು ದಾಖಲಾಗಿದ್ದು, 683 ಪ್ರಕರಣಗಳು ಸಕ್ರಿಯವಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ 38 ಡೆಂಗ್ಯೂ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ (Health Department) ಮಾಹಿತಿ ನೀಡಿದೆ.ಇದನ್ನೂ ಓದಿ: ಉಡುಪಿಯಲ್ಲಿ ಮೇಘಸ್ಪೋಟ – ನಾಪತ್ತೆಯಾದ ವೃದ್ಧೆ ಶವವಾಗಿ ಪತ್ತೆ
ಬೆಂಗಳೂರಲ್ಲಿ ಡೆಂಗ್ಯೂ ಸ್ಥಿತಿ ಹೇಗಿದೆ?
ಬೆಂಗಳೂರಲ್ಲಿ ಜನವರಿಯಿಂದ ಇಲ್ಲಿಯವರೆಗೆ 9,035 ಡೆಂಗ್ಯೂ ಕೇಸ್‌ಗಳು ವರದಿಯಾಗಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿದ ಸೊಳ್ಳೆಗಳ ಲಾರ್ವಾಗಳು ಕೊಚ್ಚಿಕೊಂಡು ಹೋಗುತ್ತಿದೆ. ಹೀಗಾಗಿ ದೈನಂದಿನ ಸರಾಸರಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿವೆ ಎಂದು ಹೇಳಿದ್ದಾರೆ.
ಜೂನ್ ತಿಂಗಳಿನಲ್ಲಿ ಪ್ರತಿ ನಿತ್ಯ 200 ಪಾಸಿಟಿವ್ ಕೇಸ್‌ಗಳು ವರದಿಯಾಗುತ್ತಿದ್ದವು. ಆದರೆ ಆಗಸ್ಟ್ 1 ರಿಂದ 6ರ ನಡುವೆ 771 ಪ್ರಕರಣಗಳು ವರದಿಯಾಗಿವೆ. ಕಳೆದ ವಾರ ದೈನಂದಿನ ಸರಾಸರಿ 130ಕ್ಕೆ ಇಳಿದಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಕರಾಚಿಯಲ್ಲಿ ಸ್ಫೋಟ| ಇಬ್ಬರು ಚೀನಿ ಪ್ರಜೆಗಳು ಬಲಿ – 8 ಮಂದಿಗೆ ಗಾಯ
ಈ ವರ್ಷದ ಅಗಸ್ಟ್‌ವರೆಗೆ ಜಾಗತಿಕವಾಗಿ 1.2 ಕೋಟಿಗೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿವೆ. 6,991 ಜನ ಡೆಂಗ್ಯೂ ಪ್ರಕರಣದಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ಅಂಕಿಅಂಶಗಳು ತಿಳಿಸಿವೆ.