ಕೊಪ್ಪಳ: ಕೋಟ್ಯಂತರ ರಾಮ ಭಕ್ತರ ಕನಸಿನ ಮಂದಿರ (Ram Mandir) ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲೂ ಸಾವಿರಾರು ಭಕ್ತರು ರಾಮನೂರಿಗೆ ತೆರಳಲು ಬರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಶ್ರೀರಾಮನ (Shri Rama) ನಂಟಿರುವ ಕರ್ನಾಟಕದ (Karnataka) ವಿವಿಧ ಸ್ಥಳಗಳ ಬಗ್ಗೆ ತಿಳಿಯುವುದೂ ಅಷ್ಟೇ ಅವಶ್ಯಕವಾಗಿದೆ.
Advertisement
ಹೌದು. ಸೀತೆಯನ್ನ ಹುಡುಕುತ್ತಾ ಹೊರಟ ಶ್ರೀರಾಮನ ಹೆಜ್ಜೆ ಗುರುತುಗಳು ಕರುನಾಡಿನಲ್ಲೂ ಮೂಡಿವೆ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ನಮ್ಮ ರಾಜ್ಯದ ಕೊಪ್ಪಳ ಜಿಲ್ಲೆಗೂ ರಾಮಾಯಣಕ್ಕೂ ಅವಿನಾಭಾವ ಸಂಬಂಧವಿದೆ ಅನ್ನೋದಕ್ಕೆ ಅನೇಕ ನಿದರ್ಶನಗಳು ಇಲ್ಲಿವೆ. ಇದನ್ನೂ ಓದಿ: ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ರಾಮ, ಆಂಜನೇಯ, ಸುಗ್ರೀವರು ಭೇಟಿಯಾಗಿದ್ದ ಚಂಚಲಕೋಟೆ ಬಗ್ಗೆ ನಿಮ್ಗೆ ಗೊತ್ತಾ?
Advertisement
Advertisement
ರಾವಣ ಸೀತೆಯನ್ನು ಅಪಹರಿಸಿದಾಗ ವನವಾಸದಲ್ಲಿದ್ದ ಶ್ರೀರಾಮ, ಸೀತೆಯನ್ನು ಹುಡುಕುತ್ತಾ ಹೊರಟಿದ್ದ. ಈ ವೇಳೆ ಶ್ರೀರಾಮನಿಗೆ ಶಕ್ತಿ ತುಂಬಿದ್ದು ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಅದುವೆ ಕಿಷ್ಕಿಂದೆ ರಾಜ್ಯ. ವಾನರಸೇನೆ ಹಾಗೂ ಶ್ರೀರಾಮನ ಬಂಟ ಹನುಮ ಸಿಕ್ಕಿದ್ದು ಇದೇ ಕಿಷ್ಕಿಂದೆ ರಾಜ್ಯದಲ್ಲಿ ಅದು ಇಂದಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿ. ಇದನ್ನೂ ಓದಿ: ಅಯೋಧ್ಯೆ ರಾಮ ಮಂತ್ರಾಕ್ಷತೆ ಅಂದ್ರೆ ಏನು?, ಯಾಕಿಷ್ಟು ಮಹತ್ವ?, ಹೇಗೆಲ್ಲಾ ಬಳಸಬಹುದು?
Advertisement
ಆನೆಗೊಂದಿ ಸಮೀಪದ ಪಂಪಾಸರೋವರದಲ್ಲಿ ಮೊದಲ ಬಾರಿಗೆ ಶ್ರೀರಾಮನನ್ನ ಆಂಜನೇಯ ಭೇಟಿಯಾಗುತ್ತಾನೆ. ಇದೇ ಸ್ಥಳದಲ್ಲಿ ವಾಲಿ ಸುಗ್ರೀವರ ಕಾಳಗ ಸಹ ನಡೆಯತ್ತೆ. ವಾಲಿ – ಸುಗ್ರೀವರ ಕಾಳಗದಲ್ಲಿ ಶ್ರೀರಾಮ ವಾಲಿವಧೆ ಮಾಡಿ ಸುಗ್ರೀವನಿಗೆ ಕಿಷ್ಕಿಂದೆಯ ಅಧಿಕಾರ ತಂದುಕೊಡುತ್ತಾನೆ. ಇದು ಒಂದು ಕಡೆಯಾದ್ರೆ, ಸೀತಾಮಾತೆಯನ್ನ ಹುಡುಕಿ ಹೊರಟ ಶ್ರೀ ರಾಮನಿಗೆ ಶಬರಿ ಕಾದು ಕುಳಿತಿದ್ದು ಕೂಡಾ ಇದೆ, ಪಂಪಾಸರೋವರದಲ್ಲಿ, ಈ ಪಂಪಾಸರೋವರದಲ್ಲಿ ಶಬರಿಯ ಗುಹೆ ಇಂದಿಗೂ ಇದೆ. ಈ ಗುಹೆಯಲ್ಲಿ ಪ್ರಭು ಶ್ರೀರಾಮನ ಪಾದುಕೆಗಳಿವೆ. ರಾಮ ಇಲ್ಲಿಂದ ತೆರಳಿದ ಬಳಿಕ ಶಬರಿ ಈ ಪಾದುಕೆಗಳಿಗೆ ಪೂಜೆ ಸಲ್ಲಿಸುತ್ತಿದ್ದಳು ಅನ್ನೋ ಬಗ್ಗೆ ಪುರಾಣಗಳಲ್ಲಿಯೂ ಉಲ್ಲೆಖವಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ರಾತ್ರಿಯ ವಿಹಂಗಮ ನೋಟವನ್ನು ಚಿತ್ರಗಳಲ್ಲಿ ನೋಡಿ
14 ವರ್ಷಗಳ ವನವಾಸದಲ್ಲಿದ್ದ ಶ್ರೀರಾಮ ಸೀತೆಯನ್ನ ಹುಡುಕಿ ಹೊರಟಾಗ ಆತನ ಬಳಿ ಯಾವುದೇ ಸೈನ್ಯವಾಗಲಿ, ಯುದ್ಧ ಸಲಕರಣೆಗಳಾಗಲಿ ಇರಲಿಲ್ಲ. ಅಲ್ಲದೇ ಸಮುದ್ರವನ್ನ ದಾಟಿ ಲಂಕೆಗೆ ಹೋಗಲು ಮುಂದಾಗಿದ್ದಾಗ ಹನುಮ ಹಾಗೂ ಕಿಷ್ಕಿಂದೆಯ ರಾಜ್ಯದ ವಾನರ ಸೇನೆ ರಾಮನನ್ನ ಸೇರಿದ್ದು ಇದೇ ಕಿಷ್ಕಿಂದೆಯಲ್ಲಿ. ಕೊಪ್ಪಳ ಜಿಲ್ಲೆಯ ಸುತ್ತ ಮುತ್ತಲಿನ, ಹೊಸಪೇಟೆ, ಬಳ್ಳಾರಿ ಭಾಗದ ಕಬ್ಬಿಣ ಅಧಿರಿನಿಂದಲೇ ಅಂದು ಯುದ್ಧಕ್ಕೆ ಬೇಕಾದ ಆಯುಧಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಇಲ್ಲಿಯೇ ಸೇನೆಯನ್ನು ಸಿದ್ಧಪಡಿಸಿಕೊಂಡಿದ್ದ ಬಗ್ಗೆಯೂ ಇತಿಹಾಸವಿದೆ.
ನಂತರ ವಾನರ ಸೇನೆಯ ಸಹಾಯದಿಂದಲೇ ಲಂಕೆಗೆ ಸೇತುವೆ ನಿರ್ಮಿಸಿ ಆಂಜನೇಯನ ಸಹಾಯದಿಂದ ಲಂಕಾ ಪ್ರವೇಶಿಸಿ ರಾವಣನ ಸಂಹಾರ ಮಾಡಲಾಯಿತು. ನಂತರ ಸೀತಾ ಮಾತೆಯನ್ನ ಅಯೋಧ್ಯೆಗೆ ಕರೆತರಲಾಯಿತು. ಈ ಎಲ್ಲ ಮಹತ್ಕಾರ್ಯಕ್ಕೆ ಸಹಾಯಕವಾಗಿದ್ದು ಅಂದಿನ ಕಿಷ್ಕಿಂದೆ ರಾಜ್ಯದ ವಾನರ ಸೇನೆ. ಅದು ಇಂದಿನ ಅಂಜನಾದ್ರಿಯ ಆನೆಗೊಂದಿ ಭಾಗ. ಇದಕ್ಕೆ ಅಂಜನಾದ್ರಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಹಲವು ಸಾಕ್ಷಿಗಳು ದೊರೆತಿವೆ. ಇದರಿಂದ ರಾಮಾಯಣಕ್ಕೂ ಕೊಪ್ಪಳ ಜಿಲ್ಲೆಯಗೂ ಅವಿನಾಭಾವ ಸಂಬಂಧವಿದೆ ಎನ್ನುತ್ತಾರೆ ಇತಿಹಾಸ ತಜ್ಞರು. ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆ – 96 ವರ್ಷದ ಕರಸೇವಕಿಗೆ ವಿಶೇಷ ಆಹ್ವಾನ – ಈಕೆ ಯಾರು ಗೊತ್ತಾ?