ಕಲಬುರಗಿ: ಒಂದು ಊರಲ್ಲಿ ಅಂದಾಜು ಎಷ್ಟು ಬಂದೂಕುಗಳಿರಬಹುದು. ನಾಲ್ಕು ಅಥವಾ ಎಂಟು ಇರಬಹುದು. ಆದ್ರೆ ಈ ಊರಲ್ಲಿವೆ ಮನೆಗೊಂದು ಬಂದೂಕು. ಖುದ್ದು ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈ ಊರಿನಲ್ಲಿ ಅತೀ ಹೆಚ್ಚು ಪರವಾನಗಿ ಪಡೆದ ಬಂದೂಕುಗಳಿವೆ.
Advertisement
ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಶಸ್ತ್ರಾಸ್ತ್ರಗಳನ್ನ ಡಿಪಾಸಿಟ್ ಮಾಡಬೇಕು. ಹೀಗಂತ ಖುದ್ದು ಚುನಾವಣಾ ಆಯೋಗವೇ ನೀತಿ ರೂಪಿಸಿದೆ. ಅದರಂತೆ ಇದೀಗ ಕಲಬುರಗಿಯಲ್ಲಿಯೂ ಬಂದೂಕು, ಪಿಸ್ತೂಲು ಹೀಗೆ ಎಲ್ಲಾ ಆಯುಧಗಳನ್ನು ಜನ ಪೊಲೀಸ್ ಠಾಣೆಯಲ್ಲಿ ಡಿಪಾಸಿಟ್ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಅಂಕಿ ಅಂಶದ ಪ್ರಕಾರ ಇಡೀ ಜಿಲ್ಲೆಯಲ್ಲಿ ಚಿತ್ತಾಪುರ ತಾಲೂಕಿನ ಅಲ್ಲೂರು(ಬಿ) ಗ್ರಾಮದಲ್ಲಿ ಅತಿ ಹೆಚ್ಚು ಲೈಸನ್ಸ್ ಹೊಂದಿದ್ದ ಬಂದೂಕುಗಳಿವೆ ಎಂದು ಕಲಬುರಗಿ ಎಸ್ ಪಿ ಎನ್.ಶಶಿಕುಮಾರ್ ಹೇಳಿದ್ದಾರೆ.
Advertisement
Advertisement
ಇಡೀ ಜಿಲ್ಲೆಯಲ್ಲಿ ಒಟ್ಟು 40 ಪೊಲೀಸ್ ಠಾಣೆಗಳಿವೆ. ಒಂದೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹತ್ತಾರು ಹಳ್ಳಿಗಳಿವೆ. ಹೀಗೆ ಒಟ್ಟು 1500 ಬಂದೂಕುಗಳಿವೆ. ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅಲ್ಲೂರು(ಬಿ) ಗ್ರಾಮದಲ್ಲಿ ಬಹುತೇಕ ಜನ ಪರವಾನಗಿ ಪಡೆದ ಬಂದೂಕು ಹೊಂದಿದ್ದಾರೆ. ಕಾರಣ ಅದು ಗುಡ್ಡಗಾಡು ಪ್ರದೇಶ ಹೀಗಾಗಿ ಕ್ರೂರ ಪ್ರಾಣಿಗಳ ಜೀವ ಹಾಗು ಬೆಳೆ ರಕ್ಷಿಸಿಕೊಳ್ಳಲು ಅಲ್ಲಿನ ರೈತರ ಬಂದೂಕು ಹೊಂದಿದ್ದಾರೆ ಎಂಬ ಮಾಹಿತಿ ಇದೆ.
Advertisement