ಹಳೆಯ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (High Security Registration Plate) ಅಳವಡಿಸಲು ಸಾರಿಗೆ ಇಲಾಖೆ ಇನ್ನೂ ಮೂರು ತಿಂಗಳು ಸಮಯಾವಕಾಶ ಕೊಟ್ಟಿದೆ. ಹೆಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಹಾಕಿಸೋಕೆ ನವೆಂಬರ್ 17 ಕೊನೆಯ ದಿನ ಎಂದು ಸರ್ಕಾರ ಡೆಡ್‌ಲೈನ್ ಕೊಟ್ಟಿತ್ತು. ಇದೀಗ ಈ ಡೆಡ್‌ಲೈನ್ ವಿಸ್ತರಣೆ ಆಗಿದೆ. 2024ರ ಫೆಬ್ರುವರಿ 17ರವರೆಗೂ ಸರ್ಕಾರ ಟೈಂ ಕೊಟ್ಟಿದೆ.
2019ರ ಏಪ್ರಿಲ್ 1ಕ್ಕಿಂತ ಮೊದಲು ನೀವು ಖರೀದಿ ಮಾಡಿದ ವಾಹನಗಳಿಗೆ HSRP ನಂಬರ್ ಪ್ಲೇಟ್ ಇರಲಿಲ್ಲ. 2019ರ ಏಪ್ರಿಲ್ 1ರ ನಂತರ ಖರೀದಿ ಮಾಡಿರುವ ಎಲ್ಲಾ ವಾಹನಗಳಿಗೆ ಷೋರೂಮ್ ನವರೇ HSRP ನಂಬರ್ ಪ್ಲೇಟ್ ನೀಡುತ್ತಿದ್ದಾರೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೀವು ವಾಹನ ಖರೀದಿ ಮಾಡಿದ್ದರೆ HSRP ನಂಬರ್ ಪ್ಲೇಟ್ ಹಾಕಿಸಲೇಬೇಕು. ಇದನ್ನೂ ಓದಿ: ರಾತ್ರಿ ನಾನು ಭಾರತ – ನ್ಯೂಜಿಲೆಂಡ್ ಸೆಮಿಫೈನಲ್ ವೀಕ್ಷಿಸಿದ್ದೆ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ
Advertisement
Advertisement
HSRP ನಂಬರ್ ಪ್ಲೇಟ್ ಎಂದರೇನು..?
ಹೆಚ್‌ಎಸ್‌ಆರ್‌ಪಿ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದ್ದು, ನೋಂದಣಿ ಸಂಖ್ಯೆಯನ್ನು ಹೊರತುಪಡಿಸಿ ಅನೇಕ ವಿವರಗಳನ್ನು ಹೊಂದಿರುತ್ತವೆ. ವಿಶಿಷ್ಟವಾದ ಏಳು-ಅಂಕಿಯ ಲೇಸರ್ ಕೋಡ್, ನಕಲು ತಡೆಯಲು ಚಕ್ರಾಕಾರದ ಹೋಲೊಗ್ರಾಮ್, ನಿಮ್ಮ ವಾಹನದ ಎಂಜಿನ್ ಮತ್ತು ಚಾಸಿಸ್ ಸಂಖ್ಯೆ ಹೊಂದಿರುವ ಸ್ವಯಂ-ವಿನಾಶಕಾರಿ ಸ್ಟಿಕ್ಕರ್ ಅನ್ನು ಒಳಗೊಂಡಿದೆ. “IND” ಎಂದು ನೀಲಿ ಬಣ್ಣದಲ್ಲಿ ಎಂಬೋಸ್ ಮಾಡಲಾಗಿರುತ್ತದೆ. ಪ್ಲೇಟ್‌ನಲ್ಲಿರುವ ಎಲ್ಲಾ ಅಕ್ಷರಗಳು ಮತ್ತು ಸಂಖ್ಯೆಗಳಾದ್ಯಂತ 45 ಡಿಗ್ರಿ ಕೋನದಲ್ಲಿINDIA ಎಂದು ಹಾಟ್ ಸ್ಟಾಂಪಿಂಗ್ ಮಾಡಲಾಗಿರುತ್ತದೆ. ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳು ಸ್ನ್ಯಾಪ್-ಆನ್ ಲಾಕ್ ಅನ್ನು ಒಳಗೊಂಡಿರುತ್ತವೆ ಮತ್ತು ಹೇಗಾದರೂ ಆ ಲಾಕ್ ತೆಗೆದುಹಾಕಿದರೆ ಅದನ್ನು ಮರುಬಳಕೆ ಮಾಡಲಾಗುವುದಿಲ್ಲ.
Advertisement
ಎಲ್ಲಾ ಮೋಟಾರು ವಾಹನಗಳ ರಾಷ್ಟ್ರೀಯ ಡೇಟಾ ಬೇಸ್ ರಚಿಸಲು HSRPಗಳು ಸಹಾಯ ಮಾಡುತ್ತವೆ. ನೀವು ದೇಶದ ಯಾವುದೇ ಹಳ್ಳಿಯಲ್ಲಿ ವಾಸಿಸುತ್ತಿದ್ದರೂ HSRPಗಳು ಕಡ್ಡಾಯ. ಇದನ್ನೂ ಓದಿ: 2 ವರ್ಷಗಳಿಂದ ಜಿ-ಮೇಲ್ ಅಕೌಂಟ್‌ನಲ್ಲಿ ನೀವು ಆ್ಯಕ್ಟಿವ್ ಆಗಿಲ್ವಾ? – ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ..
Advertisement
ನಾಲ್ಕು ಚಕ್ರದ ವಾಹನಗಳಿಗೆ ನಂಬರ್ ಪ್ಲೇಟ್ ಹಾಕಿಸಲು 650-850 ರೂಪಾಯಿ ಮತ್ತು ಬೈಕ್, ಸ್ಕೂಟರ್‌ಗಳಿಗೆ 400- 600 ರೂಪಾಯಿ ವೆಚ್ಚವಾಗುತ್ತೆ. HSRP ನಂಬರ್ ಪ್ಲೇಟ್ ಗಳಿಗೆ ಐದು ವರ್ಷಗಳ ವಾರಂಟಿ ಇರುತ್ತದೆ.
ಹೆಚ್‌ಎಸ್‌ಆರ್‌ಪಿ ಪಡೆಯುವುದು ಹೇಗೆ..?
ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು ‘Book HSRP’ ಮೇಲೆ ಕ್ಲಿಕ್ ಮಾಡಿ. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ಮತ್ತು ಅಲ್ಲಿ ಕೇಳುವ ನಿಮ್ಮ ವಾಹನದ ವಿವರವನ್ನು ಭರ್ತಿ ಮಾಡಿ. ಇದನ್ನೂ ಓದಿ: PublicTV Explainer: ‘ಸೋಷಿಯಲ್’ನಲ್ಲಿ ಬೆತ್ತಲಾದ ‘ಡೀಪ್‌ಫೇಕ್’; ಏನಿದು ತಂತ್ರಜ್ಞಾನ? ಇದರ ಆಳ ಎಷ್ಟು? ಅಪರಾಧಕ್ಕೆ ಶಿಕ್ಷೆ ಏನು?
ಹೆಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ನಿಮ್ಮ ಸಮೇತದ ವಾಹನ ಡೀಲರ್ಶಿಪ್ಆಯ್ಕೆಮಾಡಿ ಮತ್ತು ಆನ್‌ಲೈನ್‌ನಲ್ಲಿ HSRP ಶುಲ್ಕವನ್ನು ಪಾವತಿ ಮಾಡಿ. ನೆನಪಿರಲಿ, ಕೇವಲ ಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿ ಮಾಡಿ, ಯಾವುದೇ ರೀತಿಯ ನಗದು ವ್ಯವಹಾರ ಮಾಡುವಂತಿಲ್ಲ.
ವಾಹನ ಮಾಲೀಕರ ಮೊಬೈಲ್‌ಗೆ ಒಟಿಪಿ ಬರುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಂಡು, ನೀವು ಈಗಾಗಲೇ ಆಯ್ಕೆ ಮಾಡಿರುವ ಡೀಲರ್ ಬಳಿ ಭೇಟಿ ನೀಡಿ HSRP ಅಳವಡಿಸಿಕೊಳ್ಳಿ. ಇದನ್ನೂ ಓದಿ: ಏನಿದು ಡೀಪ್‌ಫೇಕ್ ತಂತ್ರಜ್ಞಾನ? ಹೇಗೆ ಮಾಡುತ್ತಾರೆ? – ನೀವು ತಿಳ್ಕೋಳ್ಳಲೇಬೇಕು